ಮೇ 25ರ ನಂತರ ಹಲವರ ಸಚಿವ ಸ್ಥಾನ ಹೋಗುತ್ತದೆ: ರಮೇಶ್ ಜಾರಕಿಹೊಳಿ

Recommended Video

      Lok Sabha Elections 2019: ಬಂಡಾಯದ ಬೆಂಕಿ ಉಗುಳುತ್ತಿದ್ದಾರೆ ರಮೇಶ್ ಜಾರಕಿಹೊಳಿ | Oneindia Kannada

      ಬೆಳಗಾವಿ, ಮೇ 02: ಬಂಡಾಯದ ಬೆಂಕಿಯಲ್ಲಿ ಕುದಿಯುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಅವರು ಪದೇ-ಪದೇ ಬಂಡಾಯದ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗುತ್ತಿದ್ದಾರೆ.

      ರಾಜ್ಯದ ಎರಡನೇ ಹಂತದ ಮತದಾನದ ದಿನ (ಏಪ್ರಿಲ್ 23) ರಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಶೀಘ್ರದಲ್ಲಿಯೇ ರಾಜೀನಾಮೆ ನೀಡುತ್ತೇನೆ ಎಂದಿದ್ದರು, ಆದರೆ ಆ ನಂತರ ಯಾಕೋ ಮೃದುವಾಗಿಬಿಟ್ಟರು.

      ಆದರೆ ಈಗ ಮತ್ತೆ ಮೈತ್ರಿ ಸರ್ಕಾರದ ಮೇಲೆ ಬೆಂಕಿಯುಗುಳಿರುವ ರಮೇರ್ಶ ಜಾರಕಿಹೊಳಿ ಅವರು, ಮೇ 25ರ ಬಳಿಕ ಸಚಿವರೆರಂದು ಠೀವಿಯಲ್ಲಿ ತಿರುಗಾಡುತ್ತಿರುವ ಕೆಲವರು ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

      Many minister will loose their position: Ramesh Jarkiholi

      ರಮೇರ್ಶ ಜಾರಕಿಹೊಳಿ ಅವರು ತಮ್ಮ ಸಹೋದರ ಸತೀಶ್ ಅವರನ್ನು ಉದ್ದೇಶವಾಗಿಟ್ಟುಕೊಂಡೆ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ.

      ಮುಂದುವರೆದು ಮಾತನಾಡಿರುವ ಅವರು, ಕೆಂಪು ದೀಪಕ್ಕೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ವಿಶ್ವಾಸ ದ್ರೋಹಿ, ಬೆನ್ನಿಗೆ ಚೂರಿ ಹಾಕೋವರನ್ನು ನಂಬಬೇಡಿ, ಮೇ 25 ರ ಬಳಿಕ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆಗಲಿದೆ ಎಂದಿದ್ದಾರೆ.

      ಬೆಳಗಾವಿಯಲ್ಲಿ ರಾಜಕಾರಣ ರಂಗೇರಿದ್ದು, ಜಾರಕಿಹೊಳಿ ಸಹೋದರರ ನಡುವೆ ದ್ವೇಷ ರಾಜಕಾರಣ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಪರಸ್ಪರ ಎದುರುಬದುರಾಗಿದ್ದು, ಪರಸ್ಪರ ವಾಗ್ದಾಳಿಗಳು ನಡೆಯುತ್ತಲೇ ಇವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+