ಲವರ್ ಜೊತೆ ಸರಸವಾಡುತ್ತಾ ಸಿಕ್ಕಿಬಿದ್ದ ಪತಿ: ಪತ್ನಿ ಮಾಡಿದ್ದೇನು ಗೊತ್ತಾ?: ಇಲ್ಲಿದೆ ವಿಡಿಯೋ
ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧಗಳಂತಹ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲಿರುತ್ತವೆ. ಇದೇ ವಿಚಾರಗಳು ಗಂಡ-ಹೆಂಡತಿ ಜಗಳಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾದ ಘಟನೆಗಳು ನಡೆದಿವೆ. ಇನ್ನೂ ಇದೀಗ ಪರಸ್ತ್ರಿ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಪತಿಗೆ ಪತ್ನಿ ನಡುರಸ್ತೆಯಲ್ಲೇ ಗುಮ್ಮಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಪರಸ್ತ್ರೀ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಗಂಡನನ್ನು ಪತ್ನಿ ನಡುರಸ್ತೆಗೆ ಎಳೆದುತಂದು ನಿಲ್ಲಿಸಿ ಚಪ್ಪಲಿಯಿಂದ ಬಾರಿಸಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಅವಿನಾಶ ಭೋಸಲೆ ಎಂಬಾತ ವಿವಾಹವಾಗಿ ಹಲವು ವರ್ಷಗಳಾಗಿದ್ದರೂ ಪರಸ್ತ್ರೀಯರ ಚಾಳಿ ಮುಂದುವರೆಸಿದ್ದ. ಈ ಬಗ್ಗೆ ಮಾಹಿತಿ ತಿಳಿದ ಪತ್ನಿ ನೇರವಾಗಿ ಚಿಕ್ಕೋಡಿ ಬಸ್ ಸ್ಟಾಂಡ್ ಬಳಿಯಿರುವ ಲಾಡ್ಜ್‌ಗೆ ತನ್ನ ತಂದೆಯೊಡನೆ ನುಗ್ಗಿದ್ದಾಳೆ. ಅಲ್ಲಿ ತನ್ನ ಪತಿ ಪ್ರೇಯಸಿಯೊಂದಿಗೆ ರೆಡ್ ಹ್ಯಾಂಡ್ ತಗ್ಲಾಕೊಂಡಿದ್ದಾನೆ.
ಈ ವೇಳೆ ಕೋಪಗೊಂಡಿದ್ದ ಪತ್ನಿ ತನ್ನ ಪತಿಯನ್ನು ರಸ್ತೆಗೆ ಎಳೆತಂದು ಚಪ್ಪಲಿಯಿಂದ ರಪ.. ರಪ.. ಬಾರಿಸಲು ಶುರು ಮಾಡಿದ್ದಾಳೆ. ಈ ಕೃತ್ಯಕ್ಕೆ ಅವಿನಾಶ್ ಭೋಸಲೆ ಮಾವನೂ ಕೂಡ ಬೆಂಬಲ ನೀಡಿದ್ದಲ್ಲದೇ ತಾನೂ ಸಹ ಬಾರಿಸಿದ್ದಾನೆ. ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.
ಯುವತಿಗೆ ಚಾಕು ಇರಿದ ವಿವಾಹಿತ: ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣ ಯುವತಿಗೆ ವಿವಾಹಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವಂತಹ ನೀಚ ಕೃತ್ಯ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಕೋ ಲಿವಿಂಗ್ ಪಿಜಿಯೊಂದರಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ವಿವಾಹ ಆಗಿ ಮಗು ಇದ್ದರೂ ಸಹ ಕೋ ಲಿವಿಂಗ್ ಪಿಜಿಯಲ್ಲಿ ಟೆಕ್ಕಿ ಬಾಬು ಎಂಬಾತ ಒಬ್ಬನೇ ವಾಸ ಇದ್ದನು. ಎರಡು ತಿಂಗಳ ಹಿಂದೆ ಅದೇ ಪಿಜೆಗೆ ಯುವತಿ ಬಂದು ವಾಸ ಆಗಿದ್ದಳು. ಆಕೆ ಬಾಬುಗೆ ಪರಿಚಯ ಆಗಿದ್ದಳು.
ಬಳಿಕ ಬಾಬು ಆಕೆಯ ಪೋನ್ ನಂಬರ್ ಪಡೆದಿದ್ದು, ಆಕೆಯೊಂದಿಗೆ ಮಾತನಾಡುತ್ತಿದ್ದನಂತೆ. ಮೂರು ದಿನಗಳ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ಇದಕ್ಕೆ ಯುವತಿ ಒಪ್ಪಿರಲಿಲ್ಲ. ಆಗ ಆಕೆಯ ಖಾಸಗಿ ಪೋಟೋ ಇಟ್ಟುಕೊಂಡು 70,000 ರೂಪಾಯಿ ಹಣಕ್ಕೂ ಬೇಡಿಕೆ ಇಟ್ಟಿದ್ದನಂತೆ. ಕೊಡದಿದ್ದರೆ, ವಿಡಿಯೋ ಲೀಕ್ ಮಾಡುವುದಾರಿ ಬೆದರಿಕೆ ಹಾಕಿದ್ದನಂತೆ ಎಂದು ವರದಿ ಆಗಿದೆ.
ಅಷ್ಟೇ ಸಾಲದೆಂಬಂತೆ ಯುವತಿಯ ಮೊಬೈಲ್ ಪಡೆದು, ಆಕೆಯ ಖಾತೆಯಲ್ಲಿದ್ದ 14,000 ರೂಪಾಯಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಇನ್ನೂ ಹಣಕ್ಕೆ ಬೇಡಿಕೆ ಇಟ್ಟ ವೇಳೆ ಸ್ನೇಹಿತರ ಬಳಿ ಸಾಲ ಪಡೆದು ಕೊಡುವುದಾಗಿ ಯುವತಿ ತಿಳಿಸಿದ್ದಾರೆ. ಇದಕ್ಕೂ ಬಿಡದೇ ಗಲಾಟೆ ಮಾಡಿದ್ದಾನೆ. ಈ ವೇಳೆ ಯುವತಿಯ ಬೆನ್ನಿಗೆ ಚಾಕುವಿನಿಂದ ಟೆಕ್ಕಿ ಬಾಬು ಇರಿದು ಪರಾರಿ ಆಗಿದ್ದಾನೆ.
ಬಳಿಕ ಚಾಕು ಇರಿದ ಬಾಬುನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ ಎನ್ನಲಾಗಿದೆ.












Click it and Unblock the Notifications