ಮಹದಾಯಿ ರೈತರ ಕೇಸ್ ವಾಪಸ್, ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ
ಬೆಳಗಾವಿ, ಅಕ್ಟೋಬರ್ 1: ಮಹದಾಯಿ ಹೋರಾಟಗಾರರ ಮೇಲಿದ್ದ ಎಲ್ಲಾ ಕೇಸ್ ಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಹೋರಾಟಗಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ರಾಜ್ಯ ಸರ್ಕಾರವು ಮಹದಾಯಿ ಹೋರಾಟಗಾರರ ಮೇಲಿರುವ ಎಲ್ಲಾ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದ್ದು, ಬೆಳಗಾವಿ ಜನತೆಗೆ ಕನ್ನಡ ರಾಜ್ಯೋತ್ಸವಕ್ಕೆ ಬಂಪರ್ ಗಿಫ್ಟ್ ಕೊಡಲು ಮುಂದಾಗಿದೆ.
ಮಹದಾಯಿ ಕುಡಿಯುವ ನೀರಿನ ವೀಚಾರವಾಗಿ ಸಾಕಷ್ಟು ಹೋರಾಟಳು ನಡೆದಿವೆ, ಅದರಲ್ಲಿ ಪಾಲ್ಗೊಂಡಿದ್ದ ಹಲವಾರು ಮಂದಿ ಹೋರಾಟಗಾರರ ಮೇಲೆ ದೂರು ದಾಖಲಾಗಿತ್ತು, ಇದೀಗ ಅದೆಲ್ಲವನ್ನೂ ವಾಪಸ್ ಪಡೆಯಲು ಮುಂದಾಗಿದೆ.

ಅಷ್ಟೇ ಅಲ್ಲದೆ ಚಳಿಗಾಲದ ವಿಧಾನ ಮಂಡಲ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ನಡೆಸಿದ್ದು, ನವೆಂಬರ್ ಕೊನೆಯ ವಾರದಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ 5 ದಿನಗಳ ಕಾಲ ಕಲಾಪವನ್ನು ನಡೆಸಲು ತೀರ್ಮಾನಿಸಲಾಗಿದೆ. ಅಗತ್ಯ ಬಿದ್ದರೆ 10 ದಿನಗಳ ಮುಂದುವರೆಸಲು ಚಿಂತನೆ ನಡೆಸಲಾಗಿದೆ. ಜತೆಗೆ ರಾಜ್ಯ ಸರ್ಕಾರ ಉತ್ತರ ಕರ್ನಾಟಕ ವಿರೋಧಿ ಎನ್ನುವ ಮಾತುಗಳನ್ನು ತೆಗೆದು ಹಾಕಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ಇತ್ತೀಚೆಗಷ್ಟೆ ಮಹದಾಯಿ ತೀರ್ಪು ಹೊರಬಿದ್ದಿದ್ದು, ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಇದು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಜಲವಿವಾದವಾಗಿತ್ತು. ಕರ್ನಾಟಕಕ್ಕೆ 13.42, ಗೋವಾಕ್ಕೆ 24 ಮತ್ತು ಮಹಾರಾಷ್ಟ್ರಕ್ಕೆ 1.30 ಟಿಎಂಸಿ ನೀರನ್ನು ಮಹದಾಯಿ ನ್ಯಾಯಾಧೀಕರಣ ಹಂಚಿಕೆ ಮಾಡಿದೆ.












Click it and Unblock the Notifications