Get Updates
Get notified of breaking news, exclusive insights, and must-see stories!

ಉತ್ತರ ಕರ್ನಾಟಕ ಭಾಗದ ಬೇಡಿಕೆ; ಬಸವರಾಜ ಹೊರಟ್ಟಿ ಪತ್ರ

ಬೆಳಗಾವಿ, ಜನವರಿ 17: ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಕೆಯ ಕುರಿತು ಸದಾ ಚರ್ಚೆ ನಡೆಯುತ್ತದೆ. ಸರ್ಕಾರಿ ಕಛೇರಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಉತ್ತರ ಕರ್ನಾಟಕ ಭಾಗದ ಜನರು ಸದಾ ಬೇಡಿಕೆ ಮುಂದಿಡುತ್ತಾರೆ.

2023ರ ಡಿಸೆಂಬರ್‌ನಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಸುವರ್ಣ ವಿಧಾನಸೌಧದಲ್ಲಿ ನಡೆದಿತ್ತು. ಬಳಿಕ ಮತ್ತೆ ವಿಧಾನಸೌಧ ಖಾಲಿಯಾಗಿದೆ. ಸರ್ಕಾರಿ ಕಛೇರಿಗಳನ್ನು ಸ್ಥಳಾಂತರ ಮಾಡುವ ಕುರಿತು ವಿಧಾನ ಪರಿಷತ್ ಸಭಾಪತಿಗಳು ಪತ್ರವನ್ನು ಬರೆದಿದ್ದಾರೆ.

Legislative Council Meeting In Belagavi Suvarna Vidhana Soudha Letter

ಈ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯದರ್ಶಿಗಳು ವಿಧಾನ ಪರಿಷತ್‌ ಇವರಿಗೆ ಪತ್ರ ಬರೆದಿದ್ದಾರೆ. ಡಿಸೆಂಬರ್‌ನಲ್ಲಿ ಬಸವರಾಜ ಹೊರಟ್ಟಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸುಂದರ ಉದ್ಯಾನ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಯವರು ಪರಿಶೀಲನೆ ನಡೆಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದರು.

ಬಸವರಾಜ ಹೊರಟ್ಟಿ ಪತ್ರ; ಪತ್ರದಲ್ಲಿ ಬಸವರಾಜ ಹೊರಟ್ಟಿ ಅವರು ಸುವರ್ಣ ವಿಧಾನಸೌಧದ ಸದ್ಬಳಕೆ ದೃಷ್ಠಿಯಿಂದ ಹಾಗೂ ಉತ್ತರ ಕರ್ನಾಟಕದ ಜನರ ಬಹುದಿನಗಳ ನಿರೀಕ್ಷೆ ಹಾಗೂ ಬೇಡಿಕೆ ದೃಷ್ಟಿಯಿಂದ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವಂತಹ ಹಲವಾರು ಸರ್ಕಾರಿ ಕಛೇರಿ ಕಾರ್ಯವು ಸಹ ಸುವರ್ಣ ವಿಧಾನಸೌಧದಿಂದಲೂ ಕಾರ್ಯ ನಿರ್ವಹಿಸಬೇಕೆಂಬುದು ಉತ್ತರ ಕರ್ನಾಟಕ ಜನರ ಭಾವನೆ ಹಾಗೂ ಬಯಕೆಯಾಗಿರುತ್ತದೆ. ಇದರಿಂದಾಗಿ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಕಾರಣದಿಂದಾಗಿ ಬೆಂಗಳೂರು ಕೇಂದ್ರದಲ್ಲಿರುವಂತಹ ಕೆಲವು ಸರ್ಕಾರಿ ಕಛೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸುವುದಕ್ಕೆ ಚಾಲನೆ ಕೊಡುವ ಉದ್ದೇಶದಿಂದ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ವರದಿಯನ್ನು ಈ ಹಿಂದೆ ಕೊಡಲಾಗಿತ್ತು. ಅದರ ಅಧ್ಯಕ್ಷ ನಾನೇ ಇದ್ದು ಆದರೆ ಅದರ ಪ್ರಗತಿ ಶೂನ್ಯವೆನ್ನಿಸುವುದು ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇನ್ನೂ ಮುಂದೆ ಪ್ರಗತಿಯ ದೃಷ್ಠಿಯಿಂದ ವಿಧಾನ ಪರಿಷತ್ತಿನ ಅಡಿಯಲ್ಲಿ ಬರುವ ಎಲ್ಲ ಸಮಿತಿಗಳ ಸಭೆಯನ್ನು ಎರಡು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆಸಲು ಈ ಮೂಲಕ ಸಂಬಂಧಪಟ್ಟ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಬೆಳಗಾವಿಯಲ್ಲಿ ಕಡ್ಡಾಯವಾಗಿ ನಡೆಸುವ ಮೂಲಕ ಉತ್ತರ ಕರ್ನಾಟಕ ಜನರ ನಿರೀಕ್ಷೆಯನ್ನು ಸಕಾರಗೊಳಿಸುವುದು ಸೂಕ್ತವಾಗಿರುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಇನ್ನು ಮುಂದೆ ವಿಧಾನ ಪರಿಷತ್ತಿನ ಎಲ್ಲಾ ಸಮಿತಿಗಳು ಪ್ರತಿ ಎರಡು ತಿಂಗಳ ಅವಧಿಯಲ್ಲಿ ಒಂದು ಬಾರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಮಿತಿ ಸಭೆ ನಡೆಸಬೇಕೆಂದು ಅದಕ್ಕಿಂತ ಪೂರ್ವದಲ್ಲಿ ಕನಿಷ್ಠ ಒಂದು ಮೊದಲು ಸಂಬಂಧಿಸಿದ ಅಧ್ಯಕ್ಷರುಗಳಿಗೆ, ಕಾರ್ಯದರ್ಶಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ದಿನಾಂಕ ಮತ್ತು ಸಮಯವನ್ನು ತಿಳಿಸುವುದು ಸೂಕ್ತವಾಗಿರುವುದರಿಂದ ತಕ್ಷಣ ತಮಗೆ ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈಡೇರದ ಬೇಡಿಕೆ; ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ಅಕ್ಟೋಬರ್ 11, 2012ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಲೋಕಾರ್ಪಣೆ ಮಾಡಿದ್ದರು. 10 ವರ್ಷಗಳು ಕಳೆದರೂ ಸಹ ಸರ್ಕಾರಿ ಕಛೇರಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡುವ ಕುರಿತು ಇನ್ನೂ ಚರ್ಚೆ ನಡೆಯುತ್ತಲೇ ಇದೆ. 10 ದಿನಗಳ ಕಾಲ ಚಳಿಗಾಲದ ಅಧಿವೇಶ ಬಿಟ್ಟರೆ ಸುವರ್ಣ ವಿಧಾನಸೌಧ ಖಾಲಿ ಇರುತ್ತದೆ.

ಮಹಾರಾಷ್ಟ್ರ-ಕರ್ನಾಟಕ ನಡುವಿನ ಗಡಿ ವಿವಾದ ಸದಾ ಸುದ್ದಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿಯೇ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. 10 ವರ್ಷಗಳ ಅವಧಿಯಲ್ಲಿ 8 ಅಧಿವೇಶನಗಳನ್ನು ಇಲ್ಲಿ 10 ದಿನಗಳ ಕಾಲ ನಡೆಸಲಾಗಿದೆ. ಉಳಿದಂತೆ ಸರ್ಕಾರಿ ಕಛೇರಿಗಳ ಸ್ಥಳಾಂತರ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.

ರಾಜ್ಯ ಮಾಹಿತಿ ಆಯೋಗದ ಕಛೇರಿ 2020ರ ಜೂನ್‌ನಲ್ಲಿ ವಿಧಾನಸೌಧದಿಂದ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಗೊಂಡ ಮೊದಲ ಸರ್ಕಾರಿ ಕಛೇರಿಯಾಗಿದೆ. ಬಳಿಕ ಜಿಲ್ಲಾ ಮಟ್ಟದ ಕಛೇರಿಗಳು ಇಲ್ಲಿಗೆ ಆಗಮಿಸಿವೆ. ಆದರೆ ಪ್ರಮುಖ ಸರ್ಕಾರಿ ಕಛೇರಿಗಳನ್ನು ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆ ಈಡೇರಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+