• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತಯಂತ್ರದ ಮೇಲೆ ಲಕ್ಷ್ಮಣ ಸವದಿ ಚಿತ್ರ! ವಿಡಿಯೋ ವೈರಲ್

|

ಬೆಳಗಾವಿ, ಡಿಸೆಂಬರ್ 05: ವಿದ್ಯುನ್ಮಾನ ಮತಯಂತ್ರದ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಚಿತ್ರವಿಟ್ಟು ಮತಚಲಾಯಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಯಾರೋ ಅಭಿಮಾನಿಯೊಬ್ಬ ಡಿಸಿಎಂ ಲಕ್ಷ್ಮಣ ಸವದಿ ಅವರ ಚಿತ್ರವೊಂದನ್ನು ಮತಯಂತ್ರದ ಮೇಲೆ ಇಟ್ಟು ಬಿಜೆಪಿ ಗೆ ಮತ ಹಾಕಿದ್ದಾನೆ. ಅದನ್ನು ಮೊಬೈಲ್‌ ನಲ್ಲಿ ರೆಕಾರ್ಡ್ ಸಹ ಮಾಡಿಕೊಂಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಡಿಸೆಂಬರ್ 09ರಂದು ಖರ್ಗೆ ನೀಡಲಿರುವ ಸಿಹಿ ಸುದ್ದಿ ನಂಗೊತ್ತು ಎಂದ ರೇಣುಕಾ ಡಿಸೆಂಬರ್ 09ರಂದು ಖರ್ಗೆ ನೀಡಲಿರುವ ಸಿಹಿ ಸುದ್ದಿ ನಂಗೊತ್ತು ಎಂದ ರೇಣುಕಾ

ಲಕ್ಷ್ಮಣ ಸವದಿ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ. ಅವರ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ನಿಂದ ಪಕ್ಷಾಂತರ ಮಾಡಿರುವ ಮಹೇಶ್ ಕುಮಟಳ್ಳಿ ಸ್ಪರ್ಧಿಸಿದ್ದಾರೆ.

ಮಹೇಶ್ ಕುಮಟಳ್ಳಿಗೆ ಟಿಕೆಟ್ ಘೋಷಣೆ ಆದಾಗ ಲಕ್ಷ್ಮಣ ಸವದಿ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. 'ನಾನೇ ಚುನಾವಣೆಗೆ ನಿಂತಿದ್ದೇನೆ ಎಂದುಕೊಂಡು ಮಹೇಶ್ ಕುಮಟಳ್ಳಿಗೆ ಮತ ನೀಡಿ' ಎಂದು ಸವದಿ ಮನವಿ ಮಾಡಿದ್ದರು.

ಹೊಸಕೋಟೆ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿತ್ತಾಟ, ಕಾರಣವೇನು?ಹೊಸಕೋಟೆ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿತ್ತಾಟ, ಕಾರಣವೇನು?

ಹಾಗಾಗಿಯೇ ಸವದಿ ಅಭಿಮಾನಿ, ಮತಯಂತ್ರದ ಮೇಲೆ ಸವದಿ ಚಿತ್ರ ಇರಿಸಿ ಮಹೇಶ್ ಕುಮಟಳ್ಳಿಗೆ ಮತ ನೀಡಿದ್ದಾನೆ. ಆದರೆ ಈ ವಿಡಿಯೋ ಅಥಣಿಯ ಯಾವ ಮತಗಟ್ಟೆಯಲ್ಲಿ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

English summary
A fan of DCM Lakshman Savadhi put his photo on EVM machine and cast his vote to BJP. Video went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X