Get Updates
Get notified of breaking news, exclusive insights, and must-see stories!

ಕಸ್ತೂರಿ ರಂಗನ್ ವರದಿ; ಬೆಳಗಾವಿಯ ಈ ಹಳ್ಳಿಗಳಿಗೆ ಅನಾಹುತ!

ಬೆಳಗಾವಿ, ಜುಲೈ 20: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಬೆಳಗಾವಿ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ ಎಂಬುದರ ವಿವರಣೆ ಇಲ್ಲಿದೆ.

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.

Kasturirangan report on Western Ghats Eco-sensitive Area; Villages List in Belagavi District

ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್ ತಮಿಳುನಾಡಿ, ಮಹಾರಾಷ್ಟ್ರ, ಗೋವಾ, ಕರ್‍ನಾಟಕದ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ. ಮೀ. ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.

Kasturirangan report on Western Ghats Eco-sensitive Area; Villages List in Belagavi District

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿರುವ ಹಳ್ಳಿಗಳು; ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ದಾಮ್ನೆ ಎಸ್. ಬೈಲೂರು ಎಂಬ ಗ್ರಾಮ ಮತ್ತು ಖಾನಾಪುರ ತಾಲೂಕಿನಲ್ಲಿರುವ ಹಳ್ಳಿಗಳಾದ ಬೆಟಗೇರಿ, ಮೊರಬ್, ಹುಲ್ಯಾಂಡ್ ಕನಕುಂಬಿ, ಬೈಲೂರು, ಗೊಲ್ಯಾಲಿ, ಉಚ್ವಾಡೆ, ಚೊರ್‍ಲಾ, ಬೆಟ್ನೆ, ಜಂಬೋಟಿ, ಜಬೋಟಿ, ಕರ್‍ಮಣಿ, ಪರ್‍ವಾಡ್, ಗವಾಸೆ, ಚಪೋಲಿ, ಕಪೋಲಿ ಕೆ.ಚಪೋಲಿ, ಮುಗವಾಡೆ, ಅಮಘಾನ್, ಕಬನಲಿ, ಅಲ್ಲೋಲಿ ಕವಲೆ, ಗವಲಿ, ನೆರ್‍ಸೆ, ಪಸ್ಟೋಲಿ, ಕೊಗಾಲೆ, ಮನ್ತುರ್‍ಗ, ಖಾನಪುರ (ಗ್ರಾಮೀಣ), ಹೊಲ್ಡ, ತೆರೆಗಲಿ, ಜಮಗಾನ್, ಅಬನಲಿ, ಶಿರೊಲಿ, ಕೆಲಿಲ್, ದೊಂಗರಘಾನ್, ಮೆಂಡಿಲ್, ಡಿಘಾನ್, ಪಜಲ್ವಾಡಿ, ಹೆಮ್ಮದಗ, ಅಂಬೆವಾಡಿ, ಕಮಟಗೆ, ಕಿರವಾಲೆ(ಕೆ.ಜಿ), ವರ್‍ಖಾಡ್ ಪಡ್ಯಾ, ಘೋಸ್(ಬಿಕೆ), ಮೊಹಿಯೆಸ್ಟ್, ಘೋಟಗಲಿ, ಶಿಂದೊಳ್ಳಿ(ಬಿಕೆ), ಶಟನಳ್ಳಿ, ಅಕ್ರಳ್ಳಿ, ಬಸ್ಟವಾಡ್, ಕೊಡಗೈ, ಸೂಲೆಗಲಿ, ಮುಡೆವಾಡಿ, ನಾಗರಗಲಿ, ತರವಾಡ್,ಚಿಂಚೆವಾಡಿ, ಸುವಾಟವಾಡಿ, ಕುಂಬಾರ್‍ದ, ಘರ್‍ಲಿ, ನಾಗರಗಲಿ, ಎಂಬ ಹಳ್ಳಿಗಳು ಪಶ್ಚಿಮ ಘಟ್ಟದ ಬಗ್ಗೆ ಕಸ್ತೂರಿ ರಂಗನ್ ಸಲ್ಲಿಸಿದ್ದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+