Get Updates
Get notified of breaking news, exclusive insights, and must-see stories!

ನರ್ಮ್ ಯೋಜನೆಯಡಿ 30 ಜಿಲ್ಲೆಗಳಿಗೂ ಬಸ್

Prakash Hukkeri
ಬೆಳಗಾವಿ, ನ. 20 : ಕೇಂದ್ರ ನಗರಾಭಿವೃದ್ಧಿ ಇಲಾಖೆ ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆಯಡಿ ಕರ್ನಾಟಕಕ್ಕೆ ಒಟ್ಟು 2014 ಬಸ್ಸುಗಳನ್ನು ಮಂಜೂರು ಮಾಡಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ. ಒಟ್ಟು ಎರಡು ಹಂತಗಳಲ್ಲಿ ರಾಜ್ಯದಲ್ಲಿ ನರ್ಮ್ ಯೋಜನೆ ಜಾರಿಯಾಗಲಿದೆ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕರ್ನಾಟಕದ 30 ಜಿಲ್ಲೆಗಳಲ್ಲಿಗೆ ಈ 2014 ಬಸ್ಸುಗಳನ್ನು ನಗರ ಸಾರಿಗೆ ವ್ಯವಸ್ಥೆಗಾಗಿ ಬಳಸಿಕೊಳ್ಳಲಾಗುವುದು. ನರ್ಮ್ ಯೋಜನೆಗೆ ಕೇಂದ್ರ ಸರ್ಕಾರ ಶೇ 80ರಷ್ಟು ಮತ್ತು ರಾಜ್ಯ ಶೇ 20ರಷ್ಟು ವೆಚ್ಚ ಭರಿಸಲಿವೆ ಎಂದು ಅವರು ತಿಳಿಸಿದರು.

ನರ್ಮ್ ಯೋಜನಯಡಿ ದೊರಕಿರುವ ಬಸ್ಸುಗಳಲ್ಲಿ ಹೆಚ್ಚಿನವು ಬೆಂಗಳೂರಿನ ನಗರಸಾರಿಗೆ ವ್ಯವಸ್ಥೆ ಸುಧಾರಣೆಣೆ ಬಳಸಿಕೊಳ್ಳಲಾಗುತ್ತದೆ. ಬೆಂಗಳೂರು ನಗರಕ್ಕಾಗಿ 810 ಬಸ್ ಗಳನ್ನು ಮೀಸಲಿಡಲಾಗಿದೆ ಎಂದರು. ಮೈಸೂರಿಗೆ 125 ಮತ್ತು ಹುಬ್ಬಳ್ಳಿ-ಧಾರವಾಡದ ನಗರ ಸಾರಿಗೆ ವ್ಯವಸ್ಥೆಗಾಗಿ 50 ಬಸ್ಸುಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಎರಡನೇ ಹಂತದಲ್ಲಿ ದಾವಣಗೆರೆ ನಗರಕ್ಕೆ 50, ಕೋಲಾರಕ್ಕೆ 50, ತುಮಕೂರಿಗೆ 40, ಬಳ್ಳಾರಿಗೆ 30, ಬೀದರ್‌ ಗೆ 20, ವಿಜಾಪುರಕ್ಕೆ 35 ಬಸ್ಸುಗಳನ್ನು ನೀಡಲಾಗುವುದು ಎಂದರು. ಕಲಬುರ್ಗಿಗೆ 25, ರಾಯಚೂರಿಗೆ 35, ಯಾದಗಿರಿಗೆ 14, ಹೊಸಪೇಟೆಗೆ 30, ಕೊಪ್ಪಳಕ್ಕೆ 20 ಬಸ್ಸುಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಗೆ ಒದಗಿಸುವ ಬಸ್ಸುಗಳನ್ನು ಅಗತ್ಯವಿರುವ ತಾಲೂಕುಗಳ ಸಾರಿಗೆ ವ್ಯವಸ್ಥೆ ಸುಧಾರಣೆಗಾಗಿಯೂ ಬಳಿಸಿಕೊಳ್ಳಬಹುದು. ಸಿಂಧನೂರಿಗೆ 20, ಗಂಗಾವತಿಗೆ 25, ಬೆಳಗಾವಿಗೆ 60, ಶಿರಸಿಗೆ 20, ಬಾಗಲಕೋಟೆಗೆ 20, ಚಿಕ್ಕೋಡಿಗೆ 20, ಕಾರವಾರಕ್ಕೆ 20, ಹಾವೇರಿಗೆ 10, ರಾಣೆಬೆನ್ನೂರಿಗೆ 20 ಬಸ್ಸುಗಳು ಲಭ್ಯವಾಗಲಿವೆ ಎಂದರು.

ಮಂಡ್ಯ ಜಿಲ್ಲೆಗೆ 30, ರಾಮನಗರಕ್ಕೆ 20, ಚಿತ್ರದುರ್ಗಕ್ಕೆ 30, ಶಿವಮೊಗ್ಗಕ್ಕೆ 65, ಭದ್ರಾವತಿಗೆ 35, ಮಂಗಳೂರು ಹಾಗೂ ಉಡುಪಿ-65 ಹಾಗೂ ಹಾಸನಕ್ಕೆ 35 ಬಸ್‌ ನೀಡಲಾಗುವುದು ಎಂದು ಹೇಳಿದರು. ಇವುಗಳಿಗೆ ಮೊದಲ ಹಂತದಲ್ಲಿ ಒಟ್ಟು 234.76 ಕೋಟಿ ರೂ ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+