ಜಯಮಾಲಾಗೆ ಸಚಿವ ಸ್ಥಾನ, ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಅಸಮಾಧಾನ
Recommended Video

ಬೆಳಗಾವಿ, ಜೂನ್ 07: ವಿಧಾನಪರಿಷತ್ ಸದಸ್ಯೆ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವುದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತೀವ್ರ ಅಸಮಾಧಾನ ಮೂಡಿಸಿದೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರೂ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಿದ್ದು, 'ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಹಿರಿಯರು ಹೇಳಿದ್ದರು ಆದರೂ ಸಹ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಪಕ್ಷಕ್ಕಾಗಿ ನಾನು ಮಾಡಿದ ಸೇವೆಯನ್ನು ಹಿರಿಯರು ಪರಿಗಣಿಸಿ ಸೂಕ್ತ ಸ್ಥಾನ ಮಾನ ಕೊಡುತ್ತಾರೆ ಎಂದುಕೊಂಡಿದ್ದೆ. ಆದರೆ ಜಯಮಾಲಾ ಅವರ ಸಂಘಟನಾ ಚತುರತೆ, ಸೇವೆಯೇ ಹಿರಿಯರಿಗೆ ಹಿಡಿಸಿದಂತಿದೆ' ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮಾಡಿದ್ದು ಯಾರು ಎಂಬುದು ಸಣ್ಣ ಮಗುವಿಗೂ ಗೊತ್ತಿದೆ. ಮಹಿಳಾ ಘಟನವನ್ನು ಹೇಗೆ ಬಲಗೊಳಿಸಿದೆ ಎಂಬುದು ಸಹ ಗೊತ್ತಿದೆ ಆದರೂ ಸಚಿವ ಸ್ಥಾನ ಕೈತಪ್ಪಿದೆ ಎಂದು ಅವರು ಬೇಸರದಿಂದ ನುಡಿದಿದ್ದಾರೆ.
'ನಾನು ಆಶಾವಾದಿ ನನ್ನ ಸೇವೆಗೆ ಸೂಕ್ತ ಮನ್ನಣೆ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದೇನೆ, ಮಾಮೂಲಿನಂತೆ ಪಕ್ಷ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ಕೊಡುತ್ತೇನೆ' ಎಂದಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡಬಾರದೆಂದು ಸತೀಶ್ ಜಾರಕಿಹೊಳಿ ಒತ್ತಾಯ ಮಾಡಿದ್ದರು ಎಂಬ ಮಾತುಗಳೂ ಸಹ ಕೇಳಿ ಬಂದಿತ್ತು.












Click it and Unblock the Notifications