ಯಡಿಯೂರಪ್ಪಗೆ ಜೇಟ್ಲಿ ಬುಲಾವ್; JDSಗೆ ನಡುಕ

ಬೆಳಗಾವಿ,

ಡಿ.4:
ಯಡಿಯೂರಪ್ಪ
ಬಿಜೆಪಿ
ವಾಪಸಾತಿ
ಪ್ರಕ್ರಿಯೆಗೆ
ಅಧಿಕೃತ
ಚಾಲನೆ
ದೊರೆತಿದೆ.
ಇಂದು
ದೆಹಲಿ
ಗದ್ದುಗೆಯ
ಚುನಾವಣೆ
ಮುಗಿಯಲಿದೆ.
ಹಾಗಾಗಿ,
ಹಿಂದೆ
ಬಿಜೆಪಿ
ವರಿಷ್ಠರು
ಮಾತುಕೊಟ್ಟಿದ್ದಂತೆ
ಯಡಿಯೂರಪ್ಪ
ವಾಪಸಾತಿ
ಪ್ರಕ್ರಿಯೆಯತ್ತ
ಗಂಭೀರ
ಯತ್ನ
ಆರಂಭಿಸಿದ್ದಾರೆ.
(ಡಿ7:
ಯಡಿಯೂರಪ್ಪ
ವಾಪಸಾತಿಗೆ
ಮಹೂರ್ತ
ಫಿಕ್ಸ್?)

id="toptextpromo">
id='are-slot-1'
class='oiad
oi-axt
oiadv'>

ಬಿಜೆಪಿಯ

ಟ್ರಬಲ್
ಶೂಟರ್
ಅರುಣ್
ಜೇಟ್ಲಿ
ಸೋಮವಾರ
ರಾತ್ರಿಯೇ
ಯಡಿಯೂರಪ್ಪ
ಜತೆ
ದೂರವಾಣಿ
ಸಂಪರ್ಕ
ಸಾಧಿಸಿದ್ದಾರೆ.
ಚುನಾವಣೆಗಳ
ಫಲಿತಾಂಶಕ್ಕೂ
ಮುನ್ನ
ವಾರದಲ್ಲೇ
ನಿಮ್ಮನ್ನು
ದಿಲ್ಲಿಗೆ
ಕರತೆಸಿಕೊಳ್ಳುತ್ತೇವೆ.
ಆಗ
ವಿವರವಾಗಿ
ಮಾತನಾಡಿಕೊಳ್ಳೋಣ
ಎಂದು
ಯಡಿಯೂರಪ್ಪಗೆ
ಜೇಟ್ಲಿ
ಭರವಸೆ
ನೀಡಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.

(ಮತ್ತೆ
ಪ್ರಧಾನ
ಮಂತ್ರಿಯಾಗುವ
ವ್ಯಾಮೋಹ
ಇಲ್ಲ)

id='are-slot-2'
class='oiad
oi-axt
oiadv'>

ಜೇಟ್ಲಿ ಮಾತಿಗೆ ಯಡಿಯೂರಪ್ಪ ಸಹಮತ

ಜೇಟ್ಲಿ ಮಾತಿಗೆ ಯಡಿಯೂರಪ್ಪ ಸಹಮತ

ಗಮನಾರ್ಹವೆಂದರೆ ಜೇಟ್ಲಿ ಮಾತಿಗೆ ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದ್ದು, ವರಿಷ್ಠರಿಂದ ಆಹ್ವಾನ ಬರಲಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಮುಖಂಡರು ಗುರುವಾರ ದಿಲ್ಲಿಗೆ

ರಾಜ್ಯ ಬಿಜೆಪಿ ಮುಖಂಡರು ಗುರುವಾರ ದಿಲ್ಲಿಗೆ

ಈ ಮಧ್ಯೆ, ಯಡಿಯೂರಪ್ಪ ಅವರನ್ನು ವಾಪಸು ಬಿಜೆಪಿಗೆ ಕರೆತರಲು ಪ್ರಯತ್ನಿಸುತ್ತಿರುವ ರಾಜ್ಯ ಬಿಜೆಪಿಯ ಕೆಲ ಮುಖಂಡರು ನಾಳೆ ಗುರುವಾರ ದಿಲ್ಲಿಗೆ ತೆರಳಲಿದ್ದಾರೆ. ಆಗ ಯಡಿಯೂರಪ್ಪ ಪರವಾಗಿ ದೆಹಲಿ ನಾಯಕರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಆ ನಂತರ ಡಿ. 7 ಅಥವಾ 8ರಂದು ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಆ ಸಂದರ್ಭದಲ್ಲೆ ಯಡಿಯೂರಪ್ಪ ಬಿಜೆಪಿ ವಾಪಸಾತಿ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

ಯಡಿಯೂರಪ್ಪ ವಾಪಸಾತಿಯಿಂದ ಜೆಡಿಎಸ್ ಕಂಗಾಲು

ಯಡಿಯೂರಪ್ಪ ವಾಪಸಾತಿಯಿಂದ ಜೆಡಿಎಸ್ ಕಂಗಾಲು

ಆದರೆ ಈ ಎಲ್ಲ ಬೆಳವಣಿಗೆಗಳ ಸಮ್ಮುಖದಲ್ಲಿ ಜೆಡಿಎಸ್ ಕಂಗಾಲಾದಂತೆ ಕಾಣುತ್ತಿದೆ. ಏಕೆಂದರೆ ಜೆಡಿಎಸ್ಸಿಗೆ ಈಗ ಪ್ರಾಪ್ತಿಯಾಗಿರುವ ಪ್ರತಿಪಕ್ಷ ಸ್ಥಾನಮಾನ ಬೆಳಗಾವಿಯಲ್ಲಿ ಈಗ ನಡೆದಿರುವ ಚಳಿಗಾಲದ ಅಧಿವೇಶಕ್ಕೆ ಕೊನೆಯಾಗುವ ಲಕ್ಷಣಗಳಿವೆ. ಈ ಬಗ್ಗೆ JDS ಒಳಗೂ ಹೊರಗೂ ಕುತೂಹಲಭರಿತ/ ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಿನ್ನೆ ದೇವೇಗೌಡರು ಸಹ ಇದನ್ನೇ ಹೇಳಿದ್ದಾರೆ. 'ಯಡಿಯೂರಪ್ಪ ವ್ಯಕ್ತಿಗತವಾಗಿ ಒಂದು ಶಕ್ತಿಯಿದ್ದಂತೆ. ಅವರು ಬಿಜೆಪಿಗೆ ಮರಳುವುದು ಖಚಿತ' ಎಂದು ಎಚ್ ಡಿ ದೇವೇಗೌಡರು ಹೇಳಿದ್ದರು.

ಜೆಡಿಎಸ್ಸಿಗೆ ಸ್ಥಾನಪಲ್ಲಟವಾಗುವ ಭೀತಿ

ಜೆಡಿಎಸ್ಸಿಗೆ ಸ್ಥಾನಪಲ್ಲಟವಾಗುವ ಭೀತಿ

ಆರೇಳು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಲಾ 40 ಸ್ಥಾನ ದಕ್ಕಿಸಿಕೊಂಡಿದ್ದರೂ ಮತಗಳಿಕೆ ಲೆಕ್ಕಾಚಾರದಲ್ಲಿ ಬಿಜೆಪಿ ಹಿಂದೆ ಬಿದ್ದು, ಜೆಡಿಎಸ್ ಪ್ರತಿಪಕ್ಷ ಸ್ಥಾನವನ್ನು ಅಲಂಕರಿಸಿತು.
ಆದರೆ ಈಗ ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗುತ್ತಿದ್ದು ಜೆಡಿಎಸ್ಸಿಗೆ ಸ್ಥಾನಪಲ್ಲಟವಾಗುವ ಭೀತಿ ಎದುರಾಗಿದೆ.

 ಜೆಡಿಎಸ್ ಸಹ interesting ಆಟ

ಜೆಡಿಎಸ್ ಸಹ interesting ಆಟ

ಈ ಮಧ್ಯೆ ಜೆಡಿಎಸ್ ಸಹ interesting ಆಟವಾಡಲು ನಿರ್ಧರಿಸಿದೆ. ಕೆಜೆಪಿಯನ್ನು ಬಿಜೆಪಿ ಜತೆ ವಿಲೀನ ಮಾಡಿದರೆ ಯಡಿಯೂರಪ್ಪ ಜತೆ ಹೋಗಲು ಕೆಜೆಪಿ ಶಾಸಕರಾದ ಗುರು ಪಾಟೀಲ, ಗುರಪಾದಪ್ಪ ನಾಗಮಾರಪಲ್ಲಿ, ಬಿ ಆರ್ ಪಾಟೀಲ್ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಅವರನ್ನು ದಾಳವಾಗಿಸಿಕೊಂಡು, ಪ್ರತಿಪಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಲೆಕ್ಕಾಚಾರದಲ್ಲಿದೆ.
ಆದರೆ ಪಕ್ಷೇತ್ರ ನಿಷೇಧ ಕಾಯಿದೆ ಏನು ಹೆಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಕೆಜೆಪಿಯಲ್ಲಿ ಹೇಳೀ ಕೇಳಿ ನಾಲ್ಕಾರು ಮಂದಿಯಷ್ಟೇ ಇರುವುದು. ಹಾಗಾಗಿ ಇಡೀ ಪಕ್ಷವನ್ನೇ ವಿಸರ್ಜಿಸಿದರೆ... ಆಗ ಯಡಿಯೂರಪ್ಪ ಹಾದಿ ಸುಗಮವಾಗಲಿದೆ ಎಂಬ ತರ್ಕವೂ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+