ಈ ಬಾರಿಯ ಕಿತ್ತೂರು ಉತ್ಸವದ ಪ್ರಮುಖ ಆಕರ್ಷಣೆ ಹೆಲಿ ಟೂರಿಸಂ

ಬೆಳಗಾವಿ, ಅಕ್ಟೋಬರ್ 21 : ಈ ಬಾರಿಯ ಕಿತ್ತೂರು ಉತ್ಸವದಲ್ಲಿ ಹೆಲಿ ಟೂರಿಸಂ ಪ್ರಮುಖ ಆಕರ್ಷಣೆಯಾಗಲಿದೆ. ಅಕ್ಟೋಬರ್ 23 ರಿಂದ 25ರ ತನಕ 2018ನೇ ಸಾಲಿನ ಕಿತ್ತೂರು ಉತ್ಸವ ನಡೆಯಲಿದೆ. ಬಾಹುಬಲಿ ಟೂರಿಸಂ ಸಂಸ್ಥೆ ಹೆಲಿಕಾಪ್ಟರ್ ಸೇವೆ ನೀಡಲಿದೆ.

ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ತನಕ ಕಿತ್ತೂರು ಕೋಟೆ ಮತ್ತು ಕಿತ್ತೂರು ನಗರವನ್ನು ಹೆಲಿಕಾಪ್ಟರ್ ಮೂಲಕ ನೋಡಬಹುದಾಗಿದೆ. ಸುಮಾರು 8 ರಿಂದ 10 ನಿಮಿಷಗಳ ಕಾಲ ಹೆಲಿಕಾಪ್ಟರ್ ಮೂಲಕ ಕಿತ್ತೂರಿನ ಅಂದವನ್ನು ಸವಿಯಬಹುದಾಗಿದೆ.

ಮೈಸೂರು ದಸರಾ, ಹಂಪಿ ಉತ್ಸವ ಮತ್ತು ಗದಗ ಉತ್ಸವದಲ್ಲಿ ಹೆಲಿಕಾಪ್ಟರ್ ಸೇವೆ ನೀಡಿದ್ದ ಹುಬ್ಬಳ್ಳಿಯ ಬಾಹುಬಲಿ ಟೂರಿಸಂ ಸಂಸ್ಥೆ ಕಿತ್ತೂರಿನಲ್ಲಿಯೂ ಹೆಲಿಕಾಪ್ಟರ್ ಸೇವೆ ನೀಡಲಿದೆ. ಜಿಲ್ಲಾಡಳಿತ, ಉತ್ಸವ ಸಮಿತಿ, ಪೊಲೀಸರು ಅಗತ್ಯ ಸಹಕಾರ ನೀಡಲಿದ್ದಾರೆ.

Kittur Utsav 2018

8 ರಿಂದ 10 ನಿಮಿಷದ ಹಾರಾಟಕ್ಕೆ 3 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಹೆಲಿಕಾಪ್ಟರ್‌ನಲ್ಲಿ 4 ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಬಾಹುಬಲಿ ಟೂರಿಸಂ ಸಂಸ್ಥೆ ಹೆಲಿ ಟೂರಿಸಂ ಸೇವೆ ನೀಡುವುದಕ್ಕೆ 20 ಜನರ ತಂಡವನ್ನು ಸಿದ್ಧಪಡಿಸಿದೆ.

ಡೊಂಬರಕೊಪ್ಪ ಪ್ರವಾಸಿ ಮಂದಿರದ ಬಳಿ ಹೆಲಿಕಾಪ್ಟರ್ ನಿಲುಗಡೆ ಮಾಡಲಾಗುತ್ತದೆ. ಅಕ್ಟೋಬರ್ 23ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೆಲಿ ಟೂರಿಸಂ ಸೇವೇಗೆ ಚಾಲನೆ ನೀಡಲಿದ್ದಾರೆ.

ಸಿಬ್ಬಂದಿಗಳು ಪ್ರಯಾಣಿಕರನ್ನು ಹೆಲಿಕಾಪ್ಟರ್‌ಗೆ ಹತ್ತಿಸುವ, ಇಳಿಸುವ ಹೊಣೆ ನೋಡಿಕೊಳ್ಳಲಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣ ಮಾಡುವವರಿಗೆ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+