ಬೆಳಗಾವಿಯಲ್ಲಿ ಅಬ್ಬರಿಸಿದ ವರುಣ: ಮನೆಯೊಳಗೆ ನುಗ್ಗಿದ ನೀರು
ಬೆಳಗಾವಿ, ಜೂನ್ 07 : ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಸವದತ್ತಿ ಪಟ್ಟಣ ಸೇರಿದಂತೆ ಸುತ್ತ ಮುತ್ತಲು ಭಾರೀ ಮಳೆಯಾಗಿದೆ. ಸವದತ್ತಿ ಪಟ್ಟಣದಲ್ಲಿ ಎಡಬಿಡದೆ ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ನಾಲೆಗಳೆಲ್ಲವೂ ಭರ್ತಿಯಾಗಿದೆ.
ನಾಲೆಗಳು ಭರ್ತಿಯಾದ ಪರಿಣಾಮ ರಸ್ತೆಯಲ್ಲಿ ನೀರು ಹೆಚ್ಚಿ, ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಒಂದೆಡೆ ವರುಣನ ಕೃಪೆಯಿಂದ ರೈತ ಸಂತುಷ್ಟನಾಗಿದ್ದರೆ, ಮತ್ತೊಂದೆಡೆ ಭಾರೀ ಮಳೆಯ ಪರಿಣಾಮ ಮನೆಗಳಿಗೆ ನೀರು ನುಗ್ಗಿ ನೀರು ಹೊರಹಾಕಲು ಜನರು ಪ್ರಯಾಸ ಪಡಬೇಕಾಯಿತು.
ರಾಜ್ಯದ ಕರಾವಳಿ, ಕೊಂಕಣ-ಗೋವಾ, ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸಂಭವ
ರಸ್ತೆಗಳಿಗೆ ನಾಲೆಯ ನೀರು ನುಗ್ಗಿದರಿಂದ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಒಟ್ಟಿನಲ್ಲಿ ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿರುವುದಂತು ಸುಳ್ಳಲ್ಲ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !