Heavy Rain: ಬೆಳಗಾವಿ ಜಿಲ್ಲೆಯ ಹಲವೆಡೆ ಅವಾಂತರ ಸೃಷ್ಟಿಸಿದ ಮಳೆರಾಯ
ಬೆಳಗಾವಿ, ಮೇ, 13: ಕಳೆದ ಒಂದು ವಾರದಿಂದಲೂ ಮಳೆರಾಯ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದ್ದು, ಈ ಮೂಲಕ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾನೆ. ಹಾಗೆಯೇ ಇದೀಗ ಇಂದು (ಮೇ 13) ಬೆಳ್ಳಂಬೆಳಗ್ಗೆಯೇ ಕುಂದಾನಗರಿ ಬೆಳಗಾವಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದರೆ, ಮತ್ತೊಂದೆಡೆ ಅವಾಂತರಗಳನ್ನೇ ಸೃಷ್ಟಿಸಿ ಜನರು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದ್ದಾನೆ. ಹಾಗಾದರೆ ಮಳೆರಾಯ ಜಿಲ್ಲೆಯ ಎಲ್ಲೆಲ್ಲಿ ಅವಾಂತರ ಸೃಷ್ಟಿಸಿದ್ದಾನೆ ಎಂದು ಇಲ್ಲಿ ನೋಡೋಣ ಬನ್ನಿ.
ಧಾರಾಕಾರ ಮಳೆ ಸುರಿದ ಪರಿಣಾಮ ಮನೆಗೆ ನೀರು ನುಗ್ಗಿದ ಘಟನೆ ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದಲ್ಲಿ ನಡೆದಿದೆ. ಇನ್ನು ಈ ವೇಳೆ ಜಿಲ್ಲಾಧಿಕಾರಿ ಹಾಗೂ ಶಾಸಕ ಅಭಯ ಪಾಟೀಲ ವಿರುದ್ದ ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ವರ್ಷಗಳಿಂದ ಚರಂಡಿ ಸರಿಪಡಿಸಿಲ್ಲ. ಆದ್ದರಿಂದ ಮಳೆ ನೀರು ಮನೆಯೊಳಗೆ ನುಗ್ಗಿದೆ ಎಂದುಕಿಡಿಕಾರಿದ್ದಾರೆ.

ಇನ್ನು ಸತತವಾಗಿ ಒಂದು ಗಂಟೆಗಳ ಕಾಲ ಸುರಿದ ಬಾರಿ ಮಳೆಯಿಂದಾಗಿ, ಜಿಲ್ಲೆಯ ಹಲವೆಡೆ ಮನೆಗಳ ಒಳಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ ಎನ್ನಲಾಗಿದೆ.
ಕೂಲ್ ಕೂಲ್ ವಾತಾವರಣ: ಬರಗಾಲದಿಂದ ಕಂಗೆಟಿದ್ದ ಕೋಟೆ ನಾಡು ಚಿತ್ರದುರ್ಗದಲ್ಲಿ ಇದೀಗ ವರುಣದೇವ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಮುಸುಕಿನ ವೇಳೆವರೆಗೂ ಉತ್ತಮ ಮಳೆ ಸುರಿದಿದೆ. ಬಿಸಿಲ ಬೇಗೆಗೆ ತತ್ತರಿಸಿದ್ದ ಜನತೆ ಇದೀಗ ತಂಪನೆಯ ಅಂದರೆ.. ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು, ಭಾನುವಾರ ಸಂಜೆ ಹಾಗೂ ರಾತ್ರಿ ಉತ್ತಮ ಹದವಾದ ಮಳೆಯಾಗಿದೆ. ಕೃತಿಕಾ ಮಳೆ ಆರಂಭವಾಗಿದ್ದು, ಪ್ರಾರಂಭದಲ್ಲೇ ಮಳೆಯಾಗುತ್ತಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳು ಗರಿಗೆದರಲಿವೆ.
ಹಿರಿಯೂರು ತಾಲೂಕಿನಲ್ಲಿ ಉತ್ತಮ ಮಳೆ ಸುರಿದಿದೆ. ಹಿರಿಯೂರು ಹಾಗೂ ಸೂಗೂರಿನಲ್ಲಿ 31.2 ಮಿಲಿ ಮೀಟರ್ ಅತಿ ಹೆಚ್ಚು ಮಳೆಯಾಗಿದೆ. ಉಳಿದಂತೆ ಇಕ್ಕನೂರು -15.0, ಈಶ್ವರಗೆರೆ-20.2 ಹಾಗೂ ಬಬ್ಬೂರು-11.0 ಮಿಲಿ ಮೀಟರ್ ಮಳೆಯಾಗಿದೆ. ಒಟ್ಟು 108.6 ಮಿಲಿ ಮೀಟರ್, ಸರಾಸರಿ -21.72 ಮಿಲಿ ಮೀಟರ್ ಮಳೆ ಬಂದಿರುವ ವರದಿಯಾಗಿದೆ.
ಚಿತ್ರದುರ್ಗ: ಚಿತ್ರದುರ್ಗ-1ರಲ್ಲಿ 14.6, ಚಿತ್ರದುರ್ಗ-2ರಲ್ಲಿ 21.0, ಹೀರೆಗೂಂಟರು -1.2, ಭರಮಸಾಗರ-3.4, ಸಿರಿಗೆರೆ-9.0, ಐನಹಳ್ಳಿ-11.2 ಸಒಟ್ಟು 60.4 ಮಿಮೀ ಮಳೆಯಾಗಿದೆ.
ಹೊಳಲ್ಕೆರೆ: ಹೊಳಲ್ಕೆರೆ -13.2, ಚಿಕ್ಕಜಾಜೂರು-12.6,ಹೆಚ್.ಡಿ.ಪುರ -11.2, ಒಟ್ಟು 6.16 ಮಿಮೀ ಮಳೆಯಾಗಿದೆ. ಇಂದು ಕೂಡ ಜಿಲ್ಲೆಯಲ್ಲಿ ಮೊಡಕವಿದ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಬಿತ್ತನೆಗೆ ಸಿದ್ಧತೆ: ಜಿಲ್ಲೆಯ ಹಿರಿಯೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಹದವಾದ ಮಳೆಯಾಗಿರುವುದರಿಂದ ರೈತರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಹೊಲಗಳಲ್ಲಿ ಹಸನು ಮಾಡಿಕೊಳ್ಳಲು ಎತ್ತು, ಟ್ರಾಕ್ಟರ್ ಯಂತ್ರೋಪಕರಣಗಳ ಮೂಲಕ ಜಮೀನುಗಳ ಕಡೆ ಮುಖ ಮಾಡಿದ್ದಾರೆ. ಮುಂಗಾರು ಬೆಳೆಗಳಾದ ರಾಗಿ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಇನ್ನಿತರ ಬೆಳೆಗಳನ್ನು ಬೆಳೆಯಲು ತಯಾರಿ ನಡೆಸುತ್ತಿದ್ದಾರೆ.
ಸರ್ಕಾರದಿಂದ ಬೀಜ, ಗೊಬ್ಬರ ವಿತರಣೆ: ಮುಂಗಾರು ಬೆಳೆಗಳಾದ ರಾಗಿ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ಇನ್ನೀತರ ಬೆಳೆಗಳನ್ನು ಬೆಳೆಯಲು ಸರ್ಕಾರ ಸರಿಯಾದ ಸಮಯದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ಗೊಬ್ಬರಗಳನ್ನು ವಿತರಣೆ ಮಾಡಬೇಕಿದೆ. ಗುಣಮಟ್ಟ ಹಾಗೂ ಉತ್ತಮ ಇಳುವರಿ ಬರುವಂತಹ ಬೀಜಗಳನ್ನು ರೈತರಿಗೆ ಸರ್ಕಾರ ವಿತರಿಸಲು ಮುಂದಾಗಬೇಕಿದೆ. ಪ್ರತಿ ವರ್ಷ ರೈತರಿಗೆ ಗೊಬ್ಬರದ ಸಮಸ್ಯೆ ಉಂಟಾಗುತ್ತಿದ್ದು, ಸರ್ಕಾರ ಇತ್ತ ಕಡೆ ಗಮನ ಹರಿಸಬೇಕಿದೆ.












Click it and Unblock the Notifications