ಸರ್ಕಾರ ನೀಡಿದ್ದ ಪ್ರವಾಹ ಪರಿಹಾರದ ಚೆಕ್‌ಗಳು ಬೌನ್ಸ್
ಬೆಳಗಾವಿ, ಜನವರಿ 31: ಪ್ರವಾಹ ಬಂದು ಬಡವರ ಮುಳುಗಿದ್ದ ಬದುಕಿಗೆ ಹುಲ್ಲು ಕಡ್ಡಿಯ ಆಸರೆಯಂತಗಿದ್ದ ಸರ್ಕಾರ ನೀಡಿದ್ದ ಪರಿಹಾರದ ಚೆಕ್ ಸಹ ಇಲ್ಲವಾಗಿದೆ.
ಹೌದು, ಬೆಳಗಾವಿಯಲ್ಲಿ ಸರ್ಕಾರ ನೀಡಿದ್ದ ಪ್ರವಾಹ ಪರಿಹಾರದ ಚೆಕ್‌ಗಳು ಬೌನ್ಸ್ ಆಗಿವೆ. ಹಣವೇ ಇಲ್ಲದೆ ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಚೆಕ್ ನೀಡಿದ್ದಾರೆ.
ಬೆಳಗಾವಿಯ ಗೋಕಾಕ್ ತಾಲ್ಲೂಕಿನಲ್ಲಿ ಸರ್ಕಾರ ವಿತರಿಸಿದ್ದ ಪ್ರಾಥಮಿಕ ಪರಿಹಾರದ ಚೆಕ್‌ಗಳನ್ನು ತಡೆಹಿಡಿಯಲಾಗಿದೆ. ಕೆಲವು ಚೆಕ್‌ಗಳು ಬೌನ್ಸ್ ಆಗಿವೆ.

ಬೆಳಗಾವಿ ಹಾಗೂ ಇನ್ನೂ ಕೆಲವು ಭಾಗಗಳಲ್ಲಿ ಪ್ರವಾಹ ಬಂದಾಗ ಸರ್ಕಾರವು ಪ್ರಾಥಮಿಕ ಪರಿಹಾರವಾಗಿ 10 ಸಾವಿರ ರೂಪಾಯಿಗಳ ಚೆಕ್ ಅನ್ನು ನೀಡಿತ್ತು. ಪ್ರವಾಹದಿಂದ ಆಸ್ತಿ-ಪಾಸ್ತಿ ಕಳೆದುಕೊಂಡವರಿಗೆ ಇದು ಆ ಕ್ಷಣದ ನೆಮ್ಮದಿಯನ್ನು ಒದಗಿಸಿತ್ತು. ಆದರೆ ಈ ಚೆಕ್‌ಗಳೇ ಬೌನ್ಸ್ ಆಗಿವೆ.
ಗೋಕಾಕ ತಾಲ್ಲೂಕಿನ ವೀರನಗಡ್ಡಿ ಗ್ರಾಮದ ಸುಮಾರು 160 ಜನ ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಗಳ ಚೆಕ್ ನೀಡಲಾಗಿತ್ತು. ಈ ಅವೆಲ್ಲ ಬೌನ್ಸ್ ಆಗಿವೆ. ಕನಿಷ್ಠದ ಪರಿಹಾರವೂ ಸಿಗಲಿಲ್ಲವಲ್ಲ ಎಂದು ಜನ ಅಳಲು ತೋಡಿಕೊಂಡಿದ್ದಾರೆ. ಘಟಪ್ರಭ ಪ್ರವಾಹದಿಂದಾಗಿ ಈ ಗ್ರಾಮ ಸಂಪೂರ್ಣ ಮುಳುಗಡೆಯಾಗಿತ್ತು.
ಮೊದಲಿಗೆ ಇದೇ ಗ್ರಾಮದಲ್ಲಿ 600 ಮಂದಿಗೆ ಚೆಕ್ ನೀಡಲಾಗಿತ್ತು. ಆದರೆ ಇಷ್ಟೋಂದು ಜನರು ಮುಳುಗಡೆಯಿಂದ ತೊಂದರೆಗೆ ಒಳಗಾಗಿಲ್ಲವೆಂದು ಚೆಕ್‌ಗಳನ್ನು ವಾಪಸ್ ಪಡೆಯಲಾಯಿತು. ಕೊನೆಗೆ 160 ಜನರಿಗೆ ಮಾತ್ರವೇ ಚೆಕ್ ನೀಡಲಾಗಿತ್ತು. ಈಗ ಆ ಚೆಕ್‌ಗಳು ಸಹ ಬೌನ್ಸ್ ಆಗಿವೆ.












Click it and Unblock the Notifications