• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಘು ವಾಹನಗಳಲ್ಲಿ ಗೋವಾಕ್ಕೆ ಮೀನು ಸಾಗಣೆಗೆ ಮುಕ್ತ ಅವಕಾಶ

|

ಬೆಳಗಾವಿ, ಡಿಸೆಂಬರ್ 17: ರಾಜ್ಯದಿಂದ ಗೋವಾಕ್ಕೆ ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಲಘು ವಾಹನಗಳಲ್ಲಿ ಮೀನು ಸಾಗಣೆ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅವರು ಸೋಮವಾರ ಇಲ್ಲಿ ಹೇಳಿದ್ದಾರೆ.

ಗೋವಾ ಸರಕಾರವು ಇತ್ತೀಚೆಗೆ ಫಾರ್ಮಾಲಿನ್ ಅಂಶ ಹೆಚ್ಚಾಗಿರುತ್ತದೆ ಎನ್ನುವ ಕಾರಣ ಮುಂದೊಡ್ಡಿ ಅನ್ಯ ರಾಜ್ಯಗಳಿಂದ ತನ್ನಲ್ಲಿಗೆ ನಡೆಯುತ್ತಿರುವ ಮೀನು ಸಾಗಣೆಗೆ ನಿರ್ಬಂಧ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರಿಂದಾಗಿ ರಾಜ್ಯದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಮೀನು ವ್ಯಾಪಾರಿಗಳಿಗೆ ಅನನುಕೂಲವಾಗಿತ್ತು.

ಈ ಬಗ್ಗೆ ಗೋವಾದ ಸೋಮವಾರ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರೊಂದಿಗೆ ಮಾತುಕತೆ ನಡೆಸಿದ ದೇಶಪಾಂಡೆಯವರು, 'ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಲಘು ವಾಹನಗಳಲ್ಲಿ ಗೋವಾಕ್ಕೆ ಮೀನು ಸಾಗಣೆ ಮಾಡಲು ಯಾವುದೇ ಅಡೆತಡೆ ಇರುವುದಿಲ್ಲ. ಆದರೆ ಟ್ರಕ್ ಸೇರಿದಂತೆ ಭಾರೀ ವಾಹನಗಳಲ್ಲಿ ಆ ರಾಜ್ಯಕ್ಕೆ ಮೀನು ಸಾಗಣೆ ಮಾಡಬೇಕಾದರೆ ಅನುಮತಿ/ಪ್ರಮಾಣ ಪತ್ರ ಕಡ್ಡಾಯವಾಗಿದೆ,'' ಎಂದು ತಿಳಿಸಿದ್ದಾರೆ.

ವಿಷಪ್ರಸಾದದಲ್ಲಿ ಕೀಟನಾಶಕದ ರಾಸಾಯನಿಕ ಪತ್ತೆ: ಪರಮೇಶ್ವರ್‌ ವಿಷಪ್ರಸಾದದಲ್ಲಿ ಕೀಟನಾಶಕದ ರಾಸಾಯನಿಕ ಪತ್ತೆ: ಪರಮೇಶ್ವರ್‌

ಗೋವಾ ಸರಕಾರವು ಇತ್ತೀಚೆಗೆ 60 ಕಿ.ಮೀ. ಸುತ್ತಳತೆ ಪ್ರದೇಶದಿಂದ ತನ್ನಲ್ಲಿಗೆ ಮೀನು ಸಾಗಣೆ ಮುಕ್ತ ಅವಕಾಶ ನೀಡಿತ್ತು. ಇಂದಿನ ಮಾತುಕತೆಯಿಂದ ಸಣ್ಣ ಮತ್ತು ಮಧ್ಯಮ ಸ್ವರೂಪದ ಮೀನು ವ್ಯಾಪಾರೋದ್ಯಮಿಗಳಿಗೆ ಅನುಕೂಲವಾಗಿದೆ. ರಾಣೆ ಅವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ, ಎಂದು ಸಚಿವರು ಹೇಳಿದ್ದಾರೆ.

ಈ ಸಮಸ್ಯೆ ಆರಂಭವಾದ ಕೂಡಲೇ ದೇಶಪಾಂಡೆಯವರು ಗೋವಾ ಸರಕಾರದೊಂದಿಗೆ ಮಾತುಕತೆಯನ್ನು ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

English summary
Fish transfer to Goa from Karnataka is free but in light motor vehicle. revenue minister RV Deshpande talked with and Goa health minister and confirmed the news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X