ಬೆಳಗಾವಿ; ಸುವರ್ಣಸೌಧದಿಂದ ರೈತರ ಟ್ರಾಕ್ಟರ್ ಪರೇಡ್

ಬೆಳಗಾವಿ, ಜನವರಿ 26: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಳಗಾವಿಯಲ್ಲಿಯೂ ರೈತರು ಬೆಂಬಲ ನೀಡಿದ್ದಾರೆ. ರೈತ ಸಂಘಟನೆಗಳ ಸದಸ್ಯರು ಸುವರ್ಣ ವಿಧಾನಸೌಧದದಿಂದ ಟ್ರಾಕ್ಟರ್ ಪರೇಡ್ ಮಾಡಲಿದ್ದಾರೆ.

ಕೇಂದ್ರ ಸರ್ಕಾರ ನೂತನ ಕೃಷಿ ನೀತಿಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದಿಂದ ಜಿಲ್ಲಾ ಕ್ರೀಡಾಂಗಣದ ತನಕ ಟ್ರಾಕ್ಟರ್ ಪರೇಡ್ ನಡೆಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ರೈತರು ಮಾಡಿದ್ದಾರೆ.

ಬೆಳಗಾವಿ ನಗರಕ್ಕೆ ರೈತರು ರಾಮದುರ್ಗ, ಯರಗಟ್ಟಿ ಸೇರಿದಂತೆ ಜಿಲ್ಲೆಯ ವಿವಿಧೆ ಕಡೆಗಳಿಂದ ರಾತ್ರಿಯೇ ಆಗಮಿಸಿದ್ದಾರೆ. ರೈತರು ಜವಾವಣೆಗೊಳ್ಳುತ್ತಿದ್ದಂತೆ ರೈತರ ಟ್ರಾಕ್ಟರ್ ಪರೇಡ್‌ಗೆ ನೀಡಿದ್ದ ಅನುಮತಿಯನ್ನು ಪೊಲೀಸರು ವಾಪಸ್ ಪಡೆದಿದ್ದಾರೆ.

Farmers All Set For Tractor Parade From Suvarna Vidhana Soudha

ರೈತರು ಸುವರ್ಣಸೌಧದತ್ತ ತೆರಳುತ್ತಿದ್ದಾರೆ. ಸುವರ್ಣಸೌಧದಿಂದ ಜಿಲ್ಲಾ ಕ್ರೀಡಾಂಗಣದ ತನಕ ಟ್ರಾಕ್ಟರ್ ಮೂಲಕ ಜಾಥಾ ನಡೆಸಿ ಕೇಂದ್ರ ಸರ್ಕಾರದ ನೂತ ಕೃಷಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲು ರೈತರು ತೀರ್ಮಾನಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧಕ್ಕೆ ರೈತರು, ರೈತ ಮಹಿಳೆಯರು ಒಂದು ಟ್ರಾಕ್ಟರ್ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿದ್ದಾರೆ. ಜೈ ಜವಾನ್, ಕೈ ಕಿಸಾನ್ ಘೋಷಣೆಗಳನ್ನು ಕೂಗಿ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ರೈತರು ಆಗ್ರಹಿಸುತ್ತಿದ್ದಾರೆ.

ರೈತರ ಪರೇಡ್ ಹಿನ್ನಲೆಯಲ್ಲಿ ಸುವರ್ಣಸೌಧದ ಮುಂದೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತರು ತಾವೇ ತಂದಿದ್ದ ಧ್ವಜಸ್ತಂಭಕ್ಕೆ ರಾಷ್ಟ್ರ ಧ್ವಜವನ್ನು ಕಟ್ಟಿ ಧ್ವಜಾರೋಹಣ ಮಾಡಿದರು. ರಾಷ್ಟ್ರಗೀತೆ ಹಾಡುವುದರ ಮೂಲಕ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+