• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋಕಾಕದಲ್ಲಿ ದಲಿತ ಯುವ ವೇದಿಕೆ ಅಧ್ಯಕ್ಷನ ಕಗ್ಗೊಲೆ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಮೇ 07: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಲಿತ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಗೋಕಾಕ ನಗರದಲ್ಲಿ ನಡೆದಿದೆ.

ಗೋಕಾಕ ಪಟ್ಟಣದ ಆದಿ ಜಾಂಬವ ನಗರದ ನಿವಾಸಿ ಸಿದ್ದು ಅರ್ಜುನ ಕಣಮಡ್ಡಿ (27) ಎಂಬ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಹಳೆಯ ದ್ವೇಷದಿಂದ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಬುಧವಾರ ರಾತ್ರಿ ಮೂವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಎಣ್ಣೆ ಪಾರ್ಟಿಲಿ ಪ್ರೀತಿ ವಿಚಾರ: ಸ್ನೇಹಿತರು ಮಾಡಿದ್ದೇನು?

ಹಲ್ಲೆಗೊಳಗಾದ ಯುವಕನನ್ನು ಗೋಕಾಕ ಆಸ್ಪತ್ರೆಯಲ್ಲಿ ದಾಖಲಿಸಿ ಬಳಿಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.‌ ಕೊಲೆ‌ ಹಂತಕರ ಶೋಧ ಕಾರ್ಯ ನಡೆದಿದ್ದು, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಗೋಕಾಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಕುರಿತು ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Dalit Yuva vedike leader siddu arjuna kanamaddi murdered yesterday night at gokak of belagavi district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X