ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ ಕೋವಿಡ್ ಸೋಂಕು

|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 02: ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ ಕೋವಿಡ್ ಸೋಂಕು ತಗುಲಿದೆ. ಮನೆಯಲ್ಲಿಯೇ ಐಸೊಲೇಷನ್‌ನಲ್ಲಿದ್ದೇನೆ ಎಂದು ಕಾಂಗ್ರೆಸ್ ಶಾಸಕಿ ಟ್ವೀಟ್ ಮಾಡಿದ್ದಾರೆ.

Recommended Video

ಇದು ಗಾಂಜಾ ನಗರವಲ್ಲ ಗಾಂಧಿನಗರ ಎಂದ ಹಿರಿಯ ನಟ ದೊಡ್ಡಣ್ಣ | Oneindia Kannada

ಬುಧವಾರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್‌ಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಯಾವುದೇ ಸೋಂಕಿನ ಲಕ್ಷಣಗಳು ಇಲ್ಲದ ಕಾರಣ ಮನೆಯಲ್ಲಿಯೇ ಐಸೊಲೇಷನ್‌ನಲ್ಲಿದ್ದೇನೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 9058 ಹೊಸ ಕೋವಿಡ್ ಪ್ರಕರಣ ದಾಖಲು ಕರ್ನಾಟಕದಲ್ಲಿ 9058 ಹೊಸ ಕೋವಿಡ್ ಪ್ರಕರಣ ದಾಖಲು

Congress MLA Dr Anjali Nimbalkar Tested Positive For COVID 19

"ನಾನು ಮನೆಯಿಂದಲೇ ಕೆಲಸ ನಿರ್ವಹಣೆ ಮಾಡಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಶಾಸಕಿ ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

ಸಚಿವ ಈಶ್ವರಪ್ಪಗೆ ಕೋವಿಡ್ ಸೋಂಕು; ಆಸ್ಪತ್ರೆಗೆ ದಾಖಲು ಸಚಿವ ಈಶ್ವರಪ್ಪಗೆ ಕೋವಿಡ್ ಸೋಂಕು; ಆಸ್ಪತ್ರೆಗೆ ದಾಖಲು

ಮಂಗಳವಾರ ಬೆಳಗಾವಿ ಜಿಲ್ಲೆಯಲ್ಲಿ 316 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,546ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,339.

ಸಚಿವೆ ಶಶಿಕಲಾ ಜೊಲ್ಲೆಗೆ ಕೋವಿಡ್ ಸೋಂಕು ಸಚಿವೆ ಶಶಿಕಲಾ ಜೊಲ್ಲೆಗೆ ಕೋವಿಡ್ ಸೋಂಕು

ಸೋಮವಾರ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಶಾಸಕಿ ಮತ್ತು ಮಹಿಳಾ, ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಗೆ ಕೋವಿಡ್ ಸೋಂಕು ತಗುಲಿತ್ತು. "ನನ್ನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರು, ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಕ್ವಾರೆಂಟೇನ್ ಆಗಬೇಕಾಗಿ ವಿನಂತಿ" ಎಂದು ಟ್ವೀಟ್‌ ಮಾಡಿದ್ದರು.

English summary
Belagavi district Khanapur Congress MLA Dr. Anjali Nimbalkar tested positive for Covid 19. MLA tweeted that i am asymptomatic at present & hence have opted for home isolation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X