ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ 'ಗಿಫ್ಟ್‌' ರಾಜಕೀಯಕ್ಕೆ ಕೊನೆಯೇ ಇಲ್ಲ

ಬೆಳಗಾವಿ, ಮಾರ್ಚ್ 24: ಈ ಹಿಂದೆ ಕುಕ್ಕರ್ ಹಂಚಿ ಸುದ್ದಿಯಾಗಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಈಗ ಮತದಾರರನ್ನು ಸೆಳೆಯಲು ಗ್ಯಾಸ್ ಸ್ಟೌ ವಿತರಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬೆಳಗಾವಿಯ ಖಾನಾಪುರದ ಬಳಿಯ ಹಳ್ಳಿಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಚಿತ್ರವಿರುವ ಗ್ಯಾಸ್‌ ಸ್ಟೌವ್‌ಗಳನ್ನು ವಿತರಿಸಿ ಮಹಿಳಾ ಮತದರಾರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದ್ದು. ಈ ಹಿಂದೆ ಅವರು ಕುಕ್ಕರ್ ಮತ್ತು ಇನ್ನತರೆ ಅಡುಗೆ ಮನೆ ಸಾಮಗ್ರಿಗಳನ್ನು ವಿತರಿಸಿ ಸುದ್ದಿಯಾಗಿದ್ದರು.

ಬಿ.ಕೆ. ಕಂಗ್ರಾಳಿ ಸೇರಿದಂತೆ ಇನ್ನೂ ಕೆಲವು ಗ್ರಾಮಗಳಲ್ಲಿ ಸ್ಟವ್‌ ಹಂಚಿಕೆ ಮಾಡಲಾಗಿದ್ದು, ಮಹಿಳೆಯರು ಮುಗಿಬಿದ್ದು ಲಕ್ಷ್ಮಿ ಲೆಬ್ಬಾಳ್ಕರ್ ಅವರ ಚಿತ್ರವಿರುವ ಗ್ಯಾಸ್‌ ಸ್ಟೌಗಳನ್ನು ಹೊತ್ತೊಯ್ದರು.

Congress leader Lakshmi Hebbalkar distrubuted gas stowe to attract voters

ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ತಾಯಿ ಹೆಸರಿನಲ್ಲಿ ಚಾರಿಟೆಬಲ್ ಟ್ರಸ್ಟ್ ನಡೆಸುತ್ತಿದ್ದು, ಟ್ರಸ್ಟ್‌ನ ಹೆಸರಿನಲ್ಲಿ ಈ ಕಾರ್ಯ ಮಾಡುತ್ತಿದ್ದಾರಾದರೂ ಅವರ ಉದ್ದೇಶ ಮತದಾರರನ್ನು ಸೆಳೆಯುವುದೇ ಆಗಿದೆ.

ಮಹಿಳಾ ಮತದಾರರ ಜೊತೆಗೆ ಶ್ರಮಿಕ ವರ್ಗದ ಮತಗಳನ್ನು ಸೆಳೆಯಲೂ ಹಲವು ಆಮೀಷಗಳನ್ನು ಒಡ್ಡಿರುವ ಅವರು ಇತ್ತೀಚೆಗೆ ಕೇವಲ ಒಂದೇ ದಿನದಲ್ಲಿ 1000 ಕ್ಕೂ ಹೆಚ್ಚು ಲಾರಿ ಚಾಲನೆ ಪರವಾನಗಿ ವಿತರಣೆಯನ್ನೂ ಅವರು ಮಾಡಿದ್ದಾರೆ.

ಮರಾಠಿ ಭಾಷಿಕರ ಕ್ಷೇತ್ರದ ಮತದಾರರನ್ನು ಸೆಳೆಯುವತ್ತ ಚಿತ್ರ ನೆಟ್ಟಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಖಾನಾಪುರ ಕ್ಷೇತ್ರದ ಹಳ್ಳಿಗಳಲ್ಲಿ ಮತದಾರರಿಗೆ ಹಲವು ಆಮೀಷಗಳನ್ನು ಒಡ್ಡಿ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+