ಲಿಂಗಾಯತ, ಮರಾಠ ನಾಯಕರೇ ಕಾಂಗ್ರೆಸ್ ‌ಟಾರ್ಗೆಟ್: ಶೆಟ್ಟರ್- ಯಾದವಾಡ ಮಧ್ಯೆ ಸುದೀರ್ಘ ಚರ್ಚೆ

ಬೆಳಗಾವಿ, ಸೆಪ್ಟೆಂಬರ್‌ 04: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಆಪರೇಷನ್ ಹಸ್ತದ ಸದ್ದು ಜೋರಾಗಿದೆ. ಈಗಾಗಲೇ ಬಿಜೆಪಿ ಶಾಸಕರುಗಳಾದ ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ಹಲವರು ಲೋಕಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಂದತಿ ಎಲ್ಲೆ ಹರಿದಾಡುತ್ತಿದೆ.

ಇದರ ಬೆನ್ನಲ್ಲೇ ಇದೀಗ ಬೆಳಗಾವಿಯ ಅತೃಪ್ತ ಬಿಜೆಪಿ ನಾಯಕರನ್ನು ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ. ಲಿಂಗಾಯತ ಹಾಗೂ ಮರಾಠ ಸಮುದಾಯದ ನಾಯಕರೇ‌ ಕಾಂಗ್ರೆಸ್ ‌ಟಾರ್ಗೆಟ್ ಆಗಿದ್ದು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಹಾಗೂ ಬಿಜೆಪಿ ನಾಯಕರುಗಳ ಆಪ್ತರಾಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರೇ ಈಗ ಬೆಳಗಾವಿಯಲ್ಲಿ ಅಖಾಡಕ್ಕಿಳಿದಿದ್ದಾರೆ.

 Congress Leader Jagadish Shettar Has Met Ramdurg Former BJP MLA Mahadevappa Yadwad

ರಾಮದುರ್ಗ ‌ಮಾಜಿ ಶಾಸಕ ಮಹಾದೇವಪ್ಪ ಯಾರವಾಡ ಅವರ ಮೇಲೆ ಕಾಂಗ್ರೆಸ್ ಚಿತ್ತ ಹರಿಸಿದ್ದು, ಜಗದೀಶ ಶೆಟ್ಟರ್‌ ಯಾದವಾಡರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ. ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ ‌ಪಟ್ಟಣ್ ಆಪ್ತ ಸತೀಶ್ ಜಿನಗಾರ ನಿವಾಸದಲ್ಲಿ ಅಶೋಕ ‌ಪಟ್ಟಣ್ ಸಮ್ಮುಖದಲ್ಲಿ ಜಗದೀಶ ಶೆಟ್ಟರ್ ಮಹಾದೇವಪ್ಪ ಯಾರವಾಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ನಾಯಕನನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.

 Congress Leader Jagadish Shettar Has Met Ramdurg Former BJP MLA Mahadevappa Yadwad

ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿದ್ದಾಗ ಎರಡು ದಶಕಗಳಿಂದ ಮಹಾದೇವಪ್ಪ ಯಾರವಾಡ ಆಪ್ತರಾಗಿದ್ದರು. ರಾಮದುರ್ಗ ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಅಸಮಾಧಾನಗೊಂಡಿದ್ದರು. ಇದೀಗ ಆಪ್ತರಾದ ಜಗದೀಶ್ ಶೆಟ್ಟರ್‌ ಅವರಿಂದ ಕಾಂಗ್ರೆಸ್‌ಗೆ ಆಹ್ವಾನ ಸಿಕ್ಕಿದ್ದು, ಮಹಾದೇವಪ್ಪ ಯಾರವಾಡ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದುನೋಡಬೇಕಿದೆ .ಮಹಾದೇವಪ್ಪ ಯಾದವಾಡ ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಜಗದೀಶ್ ಶೆಟ್ಟರ್ ಮುಂದಿನ ದಿನಗಳಲ್ಲಿ ಮಾಜಿ ಶಾಸಕ ಅನಿಲ್ ಬೆನಕೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+