ಚುನಾವಣೆ ಬರ್ತಿದ್ದಂಗೆ ಮಹದಾಯಿ ನೆನಪಾಗ್ತಿದೆ, ಬಿಎಸ್ ವೈಗೆ ಸಿದ್ದರಾಮಯ್ಯ ಟಾಂಗ್

ಬೆಳಗಾವಿ, ನವೆಂಬರ್ 22: ಮಹದಾಯಿ, ಕಳಸಾ- ಬಂಡೂರಿ ಸಮಸ್ಯೆಯನ್ನು ಒಂದು ತಿಂಗಳೊಳಗೆ ಇತ್ಯರ್ಥಗೊಳಿಸುವುದಾಗಿ ಹೇಳಿರುವ ಬಿ ಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಬೆಳಗಾವಿಯ ಚಿಕ್ಕೋಡಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಮಹದಾಯಿ ಸಮಸ್ಯೆಯನ್ನು ಯಡಿಯೂರಪ್ಪ ಇತ್ಯರ್ಥಗೊಳಿಸುತ್ತೇನೆ ಅಂತ ಹೇಳಿರುವುದು ಸಂತೋಷಕರ ಸಂಗತಿ. ದೆಹಲಿಗೆ ನಿಯೋಗ ಕರೆದುಕೊಂಡು ಹೋದಾಗ ಪ್ರಧಾನಿ ಮುಂದೆ ಯಾವುದೇ ಮಾತಾಡಿಲ್ಲಾ. ಈಗ ಚುನಾವಣೆ ಹತ್ತಿರ ಬರ್ತಿದ್ದಂಗೆ ಇವರಿಗೆ ಮಹದಾಯಿ ನೆನಪಾಗಿದೆ ಎಂದು ಟಾಂಗ್ ಕೊಟ್ಟರು.

CM Siddaramaiah slams Yeddyurappa assures resolve the Mahadayi dispute before Dec 15

ಈ ಭಾಗದಲ್ಲಿ ಯಾತ್ರೆಗೋಸ್ಕರ ಹೀಗೆ ಹೇಳ್ತಾ ಇದ್ದಾರೆ. ಸ್ವತಃ ಟ್ರಿಬುನಲ್ ನವರೆ ಸಮಸ್ಯೆಯನ್ನ ಹೊರಗಡೆ ಬಗೆ ಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ನಾನು ಗೊವಾ ಸಿಎಂ ಜೊತೆ ಮಾತನಾಡಿದ್ದೇನೆ ಅವರು ಮಾತುಕತೆಗೆ ಒಪ್ಪುತ್ತಿಲ್ಲ

ಯಡಿಯೂರಪ್ಪ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸ್ತಿನಿ ಅಂತಾ ಹೇಳುತ್ತಿದ್ದಾರೆ. ನಾನು ಒಂದು ತಿಂಗಳು ಕಾದು ನೋಡ್ತಿನಿ ಎಂದು ಸಿದ್ದರಾಮಯ್ಯ ಹೇಳಿದರು.

ಮಹದಾಯಿ, ಕಳಸಾ- ಬಂಡೂರಿ ಸಮಸ್ಯೆ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಿ ಡಿಸೆಂಬರ್ 15ರೊಳಗೆ ಬಗೆಹರಿಸಲಾಗುವುದು' ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+