• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಹುಕೋಟಿ ವಂಚನೆ; ಚಿತ್ರನಿರ್ಮಾಪಕ ಆನಂದ ಅಪ್ಪುಗೋಳ ಸೇರಿ 13 ಜನರ ವಿರುದ್ಧ ಚಾರ್ಜ್ ಶೀಟ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 19: ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಬೆಳಗಾವಿಯ ಜಿಲ್ಲಾ‌ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ 2063 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಒಡೆತನದ ಸಂಗೊಳ್ಳಿ ರಾಯಣ್ಣ ಸೊಸೈಟಿಗಳಿಂದ 278 ಕೋಟಿ ವಂಚನೆ ಆಗಿರುವುದಾಗಿ ತಿಳಿದುಬಂದಿದೆ. ಈ ಸೊಸೈಟಿ ಬೆಳಗಾವಿ- ಬಾಗಲಕೋಟೆಯಲ್ಲಿ 35 ಶಾಖೆಗಳನ್ನು ಹೊಂದಿದೆ. ಠೇವಣಿ ಹಣ ಗ್ರಾಹಕರಿಗೆ ಮರಳಿಸದೇ ಸ್ವಂತಕ್ಕೆ ಬಳಸಿದ ಆರೋಪ ಆನಂದ ಅಪ್ಪುಗೋಳ ಸೇರಿ 13 ಜನ ನಿರ್ದೇಶಕರ ವಿರುದ್ಧ ಕೇಳಿ ಬಂದಿತ್ತು. ಹಣ ದ್ವಿಗುಣಗೊಳಿಸುವ ಆಮೀಷವೊಡ್ಡಿ 26000 ಗ್ರಾಹಕರಿಂದ ಸ್ಥಿರ ಠೇವಣಿ ಸಂಗ್ರಹಿಸಿದ್ದ ಸೊಸೈಟಿ ಅವಧಿ ಮುಗಿದರೂ ಹಣ ಮರಳಿಸದೇ ವಂಚಿಸಿತ್ತು.

ದರ್ಶನ್ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೊಳ್ ಕಣ್ಣೀರಧಾರೆದರ್ಶನ್ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೊಳ್ ಕಣ್ಣೀರಧಾರೆ

ಈ ಸಂಬಂಧ ಸಹಕಾರ ಇಲಾಖೆ ಪ್ರಬಂಧಕರು 2017ರ ಪ್ರಕರಣ ದಾಖಲಿಸಿದ್ದರು. ಗ್ರಾಹಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇದೀಗ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

English summary
Charge sheet has been filed against 13 people including film producer ananda appugola in relation to Sangolli Rayanna society fraud case om belagavi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X