• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸಿದ 19 ಜನರ ಮೇಲೆ ಕೇಸ್

|

ಬೆಳಗಾವಿ, ಮೇ 27: ನೆರೆಯ ರಾಜ್ಯ ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿ ಜಿಲ್ಲಾ ಗಡಿ ಪ್ರವೇಶಿಸಿದ 19 ಮಂದಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್ ಡೌನ್ ನಿಯಮ ಜಾರಿಗೂ ಮುನ್ನ ಕಬ್ಬು ಕಟಾವು ಮಾಡಲು ಕೊಲ್ಲಾಪುರಕ್ಕೆ ತೆರಳಿದ್ದು, ಆ ಬಳಿಕ ಲಾಕ್ ಡೌನ್ ನಿಂದಾಗಿ ಕೆಲಸ ಇಲ್ಲದೇ ಕೂಲಿ ಕಾರ್ಮಿಕರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಲ್ನಡಿಗೆ ಮೂಲಕವೇ ಮಹಾರಾಷ್ಟ್ರದ ಮೀರಜ್ ಗಡಿಯವರೆಗೆ ಆಗಮಿಸಿದ್ದರು.

ಆತಂಕ ಮೂಡಿಸಿದ ಬೆಳಗಾವಿ ಜಿಲ್ಲಾ ಕೊರೊನಾ ವೈರಸ್ ವರದಿಆತಂಕ ಮೂಡಿಸಿದ ಬೆಳಗಾವಿ ಜಿಲ್ಲಾ ಕೊರೊನಾ ವೈರಸ್ ವರದಿ

ದಾಸಗಾಂವ - ಮಾಗಾಂವ - ಮೀರಜ್ ಮೂಲಕ ಕಳ್ಳದಾರಿಯಲ್ಲಿ ಗಡಿ ಪ್ರವೇಶಿಸಿ ಚೆಕ್ ಪೋಸ್ಟ್ ಪಕ್ಕದ ಗದ್ದೆಗಳ ಮೂಲಕ ಬೆಳಗಾವಿ ಗಡಿ ಪ್ರವೇಶಿಸಿದ್ದರು. ಆ ನಂತರ ತಮ್ಮ ಪರಿಚಯಸ್ಥರಿಗೆ ಹೇಳಿ ಲಾರಿ ಬುಕ್ ಮಾಡಿದ್ದರು. ಹೀಗೆ ಗಡಿಯಿಂದ ಲಾರಿ ಮೂಲಕ ಮೂಡಲಗಿಗೆ ಬರುತ್ತಿದ್ದಾಗ ಅವರನ್ನು ತಡೆಹಿಡಿಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ತಡೆದ ಮೂಡಲಗಿ ಪೊಲೀಸರು ಬಳಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಎಲ್ಲರ ಆರೋಗ್ಯ ತಪಾಸಣೆಗೆ ಕಳುಹಿಸಿದ್ದಾರೆ. ಆರೋಗ್ಯ ತಪಾಸಣೆ ಮಾಡಿ ಒಟ್ಟು 33 ಜನರನ್ನು ಯಾದವಾಡ ಗ್ರಾಮದ ಹೊರವಲಯದ ಹಾಸ್ಟೆಲ್ ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

English summary
A case has been registered against 19 workers who illegally entered the Belagavi district border from neighboring Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X