ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಘಾಟನೆಗೂ ಮೊದಲೇ ಕೊಚ್ಚಿ ಹೋದ ಬ್ರಿಡ್ಜ್ ಕಂ ಬಾಂದಾರ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜೂನ್.12: ಜಿಲ್ಲೆಯಲ್ಲಿ ಮುಂದುವರಿದ ಮಳೆರಾಯನ ಆರ್ಭಟಕ್ಕೆ ಉದ್ಘಾಟನೆಗೂ ಮೊದಲೇ ಬ್ರಿಡ್ಜ್ ಕಂ ಬಾಂದಾರ್ ಕೊಚ್ಚಿ ಹೋಗಿದೆ.

ಸಂಗೊಳ್ಳಿ ಮತ್ತು ಬೇವಿನಕೊಪ್ಪ ಗ್ರಾಮಗಳ ನಡುವೆ ಇದ್ದ ಬ್ರಿಡ್ಜ್ ಕಂ ಬಾಂದಾರ್ ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಇದನ್ನು ಮಲಪ್ರಭಾ ನದಿಯ ನೀರು ಶೇಖರಣೆಗೆ ಕಟ್ಟಿಸಲಾಗಿತ್ತು.

ಚಾರ್ಮಾಡಿ ಘಾಟ್ ಗುಡ್ಡ ಕುಸಿತ: ರಾತ್ರಿಯಿಡೀ ರಸ್ತೆಯಲ್ಲೇ ಕಳೆದ ಪ್ರಯಾಣಿಕರುಚಾರ್ಮಾಡಿ ಘಾಟ್ ಗುಡ್ಡ ಕುಸಿತ: ರಾತ್ರಿಯಿಡೀ ರಸ್ತೆಯಲ್ಲೇ ಕಳೆದ ಪ್ರಯಾಣಿಕರು

ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಿಡ್ಜ್ ಕಮ್ ಬಾಂದಾರ್ ಇದೀಗ ನಿರ್ಮಾಣ ಹಂತದಲ್ಲಿರುವಾಗಲೇ ಕೊಚ್ಚಿಹೋಗಿದೆ. ಕಳೆದ 5 ತಿಂಗಳ ಹಿಂದೆಯಷ್ಟೇ ಇದನ್ನು ನಿರ್ಮಿಸಲಾಗಿತ್ತು.

Bridge Cum Bandar floated by the continuous rain in belgaum

ಇನ್ನು ನಿರ್ಮಾಣ ಹಂತದಲ್ಲಿಯೇ ಇದ್ದ ಬ್ರಿಡ್ಜ್ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದನ್ನು ಕಂಡು ಸ್ಥಳೀಯರು ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Bridge Cum Bandar floated by the continuous rain in belgaum

ರಾಜ್ಯದೆಲ್ಲೆಡೆ ವರುಣನ ಆರ್ಭಟ ಹೆಚ್ಚಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಇತ್ತ ಮಲೆನಾಡು, ಕರಾವಳಿಯ ಕೆಲವು ಭಾಗಗಳಲ್ಲಿ ಗುಡ್ಡಗಳು ಕುಸಿಯುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೆಲ್ಲದರ ನಡುವೆ ಮುಂಗಾರು ಮಳೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

English summary
Bridge Cum Bandar floated by the continuous rain in belgaum district. It was floated before the inauguration. It was constructed to store water for the Malaprabha river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X