ಬೆಳಗಾವಿ: ಬೈಕಿಗೆ ಕಾರು ತಾಗಿದ್ದಕ್ಕೆ ಅಬಕಾರಿ ಪಿಎಸ್‌ಐ ಮೇಲೆ ಹಲ್ಲೆ
ಬೆಳಗಾವಿ, ಮಾರ್ಚ್ 29: ಅಬಕಾರಿ ಸಬ್ ಇನ್ಸ್‌ಪೆಕ್ಟ್ರ್ ಅವರ ಕಾರು ಬೈಕ್‌ಗೆ ತಾಗಿದ್ದರಿಂದ ಬೈಕ್ ಸವಾರನೊಬ್ಬ ಪಿಎಸ್‌ಐ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ರಾಯಭಾಗದ ಅಬಕಾರಿ ಇಲಾಖೆ ಪಿಎಸ್‌ಐ ಮಲ್ಲನಗೌಡ ಪಾಟೀಲ ಅವರ ಕಾರು, ಮಹಾವೀರ ಸದಲಗಿ ಎಂಬವರ ಬೈಕ್‌ಗೆ ತಾಗಿದೆ. ಇದರಿಂದ ಸಿಟ್ಟಿಗೆದ್ದ ಮಹಾವೀರ ಸದಲಗಿ ಪಿಎಸ್‌ಐ ಅವರನ್ನು ರಸ್ತೆಯಲ್ಲೇ ಚೆನ್ನಾಗಿ ಹೊಡೆದಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಪಿಎಸ್‌ಐ ಅವರನ್ನು ರಸ್ತೆಯ ಮೇಲೆ ಉರುಳಾಡಿಸಿ ಹೊಡೆಯಲಾಗಿದೆ. ಅವರ ಕೆನ್ನೆಯ ಮೇಲೆ ಬಾಸುಂಡೆಗಳು ಮೂಡುವಂತೆ ಹಲ್ಲೆ ನಡೆಸಲಾಗಿದೆ.

ಹಲ್ಲೆ ಮಾಡಿದ ಬೈಕ್ ಸವಾರನ ವಿರುದ್ಧ ದೂರು ದಾಖಲಿಸಲು ಪಿಎಸ್ಐ ಮಲ್ಲನಗೌಡ ಪಾಟೀಲ ಅವರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.












Click it and Unblock the Notifications