ಖಾರದಪುಡಿ ಎರಚಿ 24 ಲಕ್ಷ ದೋಚಿದ್ದ ಖದೀಮರು ಪೊಲೀಸರ ಬಲೆಗೆ
ಬೆಳಗಾವಿ, ಜನವರಿ 1 : ನಗರದ ಸಾಗರ್ ಹೋಟೆಲ್ ಬಳಿ ತುಮಕೂರು ಮೂಲ ಹೂವಿನ ವ್ಯಾಪಾರಿಗೆ ಖಾರದಪುಡಿ ಎರಚಿ 24 ಲಕ್ಷ ರೂ ದೋಚಿ ಪರಾರಿಯಾಗಿದ್ದ ಖದೀಮರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಡಿಸೆಂಬರ್ 4 ರಂದು ಮೂಲದ ಹೂವಿನ ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದಪುಡಿ ಎರಚಿ 24 ಲಕ್ಷ ರೂ. ದೋಚಿದ್ದರು. ಹುಕ್ಕೇರಿ ಮೂಲದ ಮೂರು ಜನ ಹೂವಿನ ವ್ಯಾಪಾರಿಗಳು ಸೇರಿ ತಮಗೆ ಹೂವು ಸಪ್ಲಾಯ್ ಮಾಡುತ್ತಿದ್ದ ಮಾಲೀಕನ ಹಣ ದೋಚಿ ಈಗ ಪೋಲೀಸರ ಅತಿಥಿಯಾಗಿದ್ದಾರೆ.

ಹುಕ್ಕೇರಿಯ ಅಸ್ಕರ್ ಅಲಿ ನಜೀರ ಅಹ್ಮದ್ ಮಕಾನದಾರ, ಉಮೇಶ ತಮ್ಮಣ್ಣ ಬಸ್ತವಾಡೆ,ಯಲ್ಲೇಶ ಮತ್ತು ಶಶಿಕಾಂತ ಸೇರಿದಂತೆ ಒಟ್ಟು ನಾಲ್ಕು ಜನ ಆರೋಪಿಗಳನ್ನು ಬಂಧಿಸಿರುವ ಪೋಲೀಸರು ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಪ್ರಭಾರಿ ಪೋಲೀಸ್ ಆಯುಕ್ತ ರಾಮಚಂದ್ರ ರಾವ್ ಪ್ರಕರಣದ ಕುರಿತು ಮಾಹಿತಿ ನೀಡಿ ಸಿಸಿಬಿ ಪೋಲೀಸರ ಕಾರ್ಯವನ್ನು ಶ್ಲಾಘಿಸಿದರು. ನಾಲ್ಕು ಜನ ಆರೋಪಗಳನ್ನು ಬಂಧಿಸಿರುವ ಪೋಲೀಸರು ಆರೋಪಿಗಳಿಂದ ಹನ್ನೆರಡು ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.












Click it and Unblock the Notifications