Belagavi Case: ಎಸಿಪಿಗೆ ತನಿಖೆಯ ಜವಾಬ್ದಾರಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ & ಆರೋಪಿಗಳಿಗೆ ಹೆಚ್ಚಾಯ್ತು ಸಂಕಷ್ಟ
ಬೆಳಗಾವಿ, ನವೆಂಬರ್ 08: ಬೆಳಗಾವಿ ಜಿಲ್ಲೆಯ ತಹಶೀಲ್ದಾರ್ ಕಚೇರಿಯೊಂದರಲ್ಲಿ ಅಧಿಕಾರಿ ನೇಣು ಹಾಕಿಕೊಂಡ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಟ್ ಸಿಗಲಿದೆ. ಮೃತ ಅಧಿಕಾರಿ ಮೊಬೈಲ್ ಪತ್ತೆ ಮಾಡಲಾಗಿದೆ. ಪೊಲೀಸ್ ಆಯುಕ್ತರು ಪ್ರಕರಣದ ತನಿಖಾ ಜವಾಬ್ದಾರಿಯನ್ನು ಎಸಿಪಿಗೆ ಹಸ್ತಾಂತರ ಮಾಡಿದ್ದಾರೆ. ಇಂದು ಶುಕ್ರವಾರ (ನ.8) ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಮೂವರು ಶಂಕಿತ ಆರೋಪಿಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಪಿಎ ಗಳನ್ನು ಬಿಟ್ಟು ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಒಂದು ದಿನದ ಹಿಂದಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಮೂವರ ವಿರುದ್ಧ ಇಲ್ಲಿನ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆರೋಪಿಗಳ ಬಂಧನ ಯಾವಾಗ?
ಮೃತ ಅಧಿಕಾರಿ ಡೆತ್ ನೋಟ್ ಬರೆದಿಟ್ಟು ಸಾವಿಗೀಡಾಗಿದ್ದರು. ಗ್ರೂಪ್‌ನಲ್ಲಿ ವಾಟ್ಸಾಪ್ ಸಂದೇಶ ಹಾಕಿ ತಡರಾತ್ರಿ ಅಧಿಕಾರಿ ರುದ್ರಣ್ಣ ಅವರು ಸಾವಿಗೆ ಶರಣಾಗಿದ್ದರು. ಡೆತ್‌ನೋಟ್ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಮೃತ ಅಧಿಕಾರಿಯ ಮೊಬೈಲ್ ಫೋನ್ ಸಿಕ್ಕಿರಲಿಲ್ಲ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಆಯುಕ್ತರು ಕೇಸಿನ ತನಿಖೆಯನ್ನು ಎಸಿಪಿಗೆ ವಹಿಸಿದ್ದಾರೆ. ಇದರಿಂದ ತನಿಖೆಗೆ ಮತ್ತಷ್ಟು ಚುರುಕುಗೊಳ್ಳುತ್ತಿದೆ. ಇದರಿಂದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಆಪ್ತ ಸೋಮುಗೆ ಸಂಕಷ್ಟ ಹತ್ತಿರವಾಗುತ್ತಿದೆ. ತಲೆಮರೆಸಿಕೊಂಡು ಆರೋಪಿಗಳು ಸಿಗುತ್ತಿದ್ದಂತೆ ಸಚಿವರ ಬಂಧವಾದರೂ ಆಗಬಹುದು ಎಂದು ಹೇಳಲಾಗುತ್ತಿದೆ.
ಇಂದು ಶುಕ್ರವಾರ (ನವೆಂಬರ್ 8) ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ನಿರತರಾದ ಪೊಲೀಸರು ತಂಡಗಳನ್ನು ರಚನೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರಕರಣ CBIಗೆ ವಹಿಸಿ: ಬಿಜೆಪಿ ನಾಯಕ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಿಎ ಬಿಟ್ಟು ನೀಡುತ್ತಿರುವ ಕಿರುಕುಳ ಸಹಿಸಲಾಗದೇ ಅಧಿಕಾರಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರಿಂದ ಹೆಚ್ಚು ಲೀಡ್‌ನಿಂದ ಗೆದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ. ಅವರಿಂದಲೇ ಅಮಾಯಕ ಅಧಿಕಾರಿಯೊಬ್ಬರು ಸಾವಾಗಿದೆ. ಪೊಲೀಸರು ಎಫ್‌ಐಆರ್ ಆದರೂ ಈವರೆಗೆ ಒಬ್ಬರನ್ನು ಬಂಧಿಸಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿಲ್ಲ ಎಂದು ಬಿಜೆಪಿ ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಕಚೇರಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದ ಮೃತ ಅಧಿಕಾರಿ ರುದ್ರಣ್ಣ ಅವರು ಕಿರುಕುಳ ಅನುಭವಿಸಿದ್ದರು ಎನ್ನಲಾಗಿದೆ. ತಹಶೀಲ್ದಾರ್ ಸೇರಿದಂತೆ ಸಚಿವರ ಆಪ್ತರಿಂದಲೂ ಕಿರುಕುಳಕ್ಕೆ ಒಳಗಾಗಿದ್ದರು. ಅದನ್ನು ತಾಳಲಾರದೇ ಡೆತ್ ನೋಟ್ ಬರೆದಿಟ್ಟರು. ಕಚೇರಿ ಅನ್ಯಾಯ ಸರಿ ಮಾಡಬೇಕು ಎಂದು ಮೂವರ ಹೆಸರನ್ನು ಉಲ್ಲೇಖಿಸಿದ್ದರು. ಕಚೇರಿ ನೌಕರರ ವಾಟ್ಸಾಪ್ ಗ್ರೂಪ್‌ನಲ್ಲಿ ಸೋಮವಾರ ತಡರಾತ್ರಿ ಸಂದೇಶ ಹಾಕಿ ತಹಶೀಲ್ದಾರ್ ಕೂರುವ ಕೊಠಡಿಯಲ್ಲಿ ನೇಣಿಗೆ ಕೊರಳೊಡ್ಡಿದ್ದರು.












Click it and Unblock the Notifications