ಬೆಳಗಾವಿ ಅಧಿಕಾರಿ ಆತ್ಮಹ* ಕೇಸ್: A1 ಆರೋಪಿ ತಹಶಿಲ್ದಾರ್ ಎಂದಿನಂತೆ ಕೆಲಸಕ್ಕೆ ಹಾಜರ್!
ಬೆಳಗಾವಿ, ಜನವರಿ 01: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತಿಯ ದರ್ಜೆಯ ಸಹಾಯಕ ಅಧಿಕಾರಿ ರುದ್ರಣ್ಣ ಅವರು ನೇರಣಿಗೆ ಕೊರಳೊಡ್ಡಿದ್ದರು. ತಹಶೀಲ್ದಾರ್ ಕೊಠಡಿಯಲ್ಲಿಯೇ ಪ್ರಾಣ ಬಿಟ್ಟಿದ್ದ ಅಧಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು. ಎ1 ಆರೋಪಿಯಾಗಿರವ ತಹಶಿಲ್ದಾರ್ ಅವರು ಮತ್ತೆ ಎಂದಿನಂತೆ ನೌಕರಿಗೆ ಹಾಜರಾಗಿದ್ದಾರೆ.
ವಾಟ್ಸಾಫ್ ಗ್ರೂಪ್‌ಗೆ ಸಂದೇಶ ಕಳುಹಿಸಿ, ಸಾಮಾಜಿಕ ಜಾಲತಾಣದಲ್ಲಿ ಸಾವಿಗೆ ಕಾರಣವೇನೆಂದು ತಿಳಿಸಿ ಕಚೇರಿಯಲ್ಲಿ ನವೆಂಬರ್ 5ರಂದು ರುದ್ರಣ್ಣ ಉಸಿರು ಚೆಲ್ಲಿದ್ದರು. ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಮೂವರ ಹೆಸರು ಕೇಳಿ ಬಂದಿತ್ತು. ಹೀಗಾಗಿ ಮೂವರ ವಿರುದ್ಧ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಎರಡು ತಿಂಗಳ ಬಳಿಕ ಕಚೇರಿಗೆ ಆಗಮನ
ಪೊಲೀಸರು ತಹಶಿಲ್ದಾರ್ ಬಸವರಾಜ್ ನಾಗರಾಳ ಅವರನ್ನು ಪ್ರಕರಣದ ಎ1 ಆರೋಪಿಯಾಗಿ ಮಾಡಿದ್ದಾರೆ. ಈ ಆರೋಪಿಯು ಪ್ರಕರಣ ಸಂಬಂಧ ಎರಡು ತಿಂಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಇದೀಗ ಹೊಸ ವರ್ಷ ಜನವರಿ 1ರಂದು ಬುಧವಾರ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನವೆಂಬರ್ 5 ರಂದು ತಡರಾತ್ರಿ ಸಂದೇಶ ಕಳುಹಿಸಿ ಎಸ್ ಡಿಸಿ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ತಹಶಿಲ್ದಾರರ ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಇದೇ ಆರೋಪಿ ತಹಶಿಲ್ದಾರ್ ಪರಾಯಿಯಾಗಿದ್ದರು.
ಕರ್ತವ್ಯಕ್ಕೆ ಬಂದ ತಹಶೀಲ್ದಾರ್ ವಿರುದ್ಧ ಆಕ್ರೋಶ
ಇದೀಗ ನ್ಯಾಯಾಲಯದಲ್ಲಿ ಜಾಮೀನು ಪಡೆದಿರುವ ತಹಶೀಲ್ದಾರ್ ಎಂದಿನಂತೆ ಕರ್ತವ್ಯಕ್ಕೆ ಹಾಜಾರಾಗಿದ್ದಾರೆ. ಇನ್ನೂ ರುದ್ರಣ್ಣ ಕುಟುಂಬಸ್ಥರು ಹಾಗೂ ಜನವಿರೋಧ, ಆಕ್ರೋಶ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಕರ್ತವ್ಯದಿಂದ ದೂರವಿದ್ದ ತಹಶಿಲ್ದಾರ್, ವರ್ಷದ ಮೊದಲ ದಿನವೇ ಕೆಲಸಕ್ಕೆ ಆಗಮಿಸಿದ್ದಾರೆ.
ಒಂದೆಡೆ ಆತ್ಮಹತ್ಯೆ ಪ್ರಕರಣ ತನಿಖೆ ನಡೆಯುತ್ತಿದೆ. ಇನ್ನೊಂದಡೆ ಮೃತ ಅಧಿಕಾರಿ ಕುಟುಂಬಸ್ಥರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಈ ನಡುವೆ ಕೆಲಸಕ್ಕೆ ಹಾಜರಾದ ತಹಶಿಲ್ದಾರ್ ವಿರುದ್ಧ ಸಾರ್ವಜನಿಕರ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿದೆ.
ಆರೋಪಿಗಳ ವಿಚಾರಣೆ, ತನಿಖೆ ಪ್ರಗತಿ
ಮೂವರ ಮೇಲೆ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದಲೂ ಒಂದಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಆತ್ಮಹತ್ಯೆ ಮೊದಲು ತಹಶೀಲ್ದಾರ್ ಸಿಬ್ಬಂದಿ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ರುದ್ರಣ್ಣ ಮಾತನಾಡಿದ್ದಾರೆ. ಆಗ ತಹಶೀಲ್ದಾರ್ ಅವರನ್ನು ಗ್ರೂಪ್ ನಿಂದ ರಿಮೂವ್ ಮಾಡಿದ್ದಾರೆ. ನಿರಂತರ ಒತ್ತಡ, ಕಿರುಕುಳಕ್ಕೆ ಬೇಸತ್ತು ಹೀಗೆ ಮಾಡಿಕೊಂಡಿರುವುದಾಗಿ ಮೃತ ರುದ್ರಣ್ಣ ಬರೆದುಕೊಂಡಿದ್ದರು. ಇದರ ಆಧಾರದಲ್ಲಿ ಆರೋಪಿಗಳ ವಿಚಾರಣೆ ನಡೆದಿದೆ. ತನಿಖೆ ಪ್ರಗತಿಯಲ್ಲಿದೆ.












Click it and Unblock the Notifications