Belagavi Lok Sabha Election 2024 Results LIVE: ಬೆಳಗಾವಿಯಲ್ಲಿ ಶೆಟ್ಟರ್ ಒಲಿದ ಅದೃಷ್ಟ, ಕಾಂಗ್ರೆಸ್ 'ಕೈ' ಕೊಟ್ಟ ಮತದಾರ
ಚಿಕ್ಕೋಡಿ, ಜೂನ್ 04: ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ 2024ರ ಲೋಕಸಭಾ ಚುನಾವಣೆಗೆ ಮತದಾನ ಮೇ 07ರಂದು ಜರುಗಿದ್ದು, ಬರೋಬ್ಬರಿ 71.49ರಷ್ಟು ಮತದಾನ ಆಗಿದೆ. ಲಿಂಗಾಯತರೇ ಹೆಚ್ಚಿರುವ ಈ ಜಿಲ್ಲೆಯಲ್ಲಿ ಈ ಭಾರಿ ಯಾರಿಗೆ ಒಲಿಯಲಿದೆ ಅದೃಷ್ಟ ಎಂಬುದಕ್ಕೆ ಉತ್ತರ ಇಂದು (ಜೂನ್ 04) ಸಿಗಲಿದೆ.
ಇಂದು ಬೆಳಗ್ಗೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಹಲವು ಕಸರತ್ತುಗಳ ಬಳಿಕ ಚಿಕ್ಕೋಡಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಸ್ಥಳೀಯ ನಾಯಕಿ ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾಂಗ್ರೆಸ್‌ನಿಂದ ಅಖಾಡಕ್ಕಿಳಿದರು. ಇಬ್ಬರ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು.

ಪ್ರಚಾರ ಭರಾಟೆಯಲ್ಲಿ ಎರಡು ಪಕ್ಷಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಬಿಜೆಪಿ ಭದ್ರಕೋಟೆಯಲ್ಲಿ ಹಿಡಿತ ಸಾಧಿಸಲು ಕಾಂಗ್ರೆಸ್ ಪ್ಲಾನ್ ಮಾಡಿದರೆ, ಅದಕ್ಕೆ ತಕ್ಕ ರಣತಂತ್ರ ಬಿಜೆಪಿ ರೂಪಿಸಿದೆ. ಲಿಂಗಾಯತ ಮತದಾಗಳ ಜೊತೆ ಇತರ ಸಮುದಾಗಳ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಚಿಕ್ಕೋಡಿ ಅಧಿಕಾರ ಯಾರ ಪಾಲಾಗಲಿದೆ?
ಈ ಕುರಿತು ಕ್ಷಣ ಕ್ಷಣದ ಮಾಹಿತಿ, ಅಪ್ಡೇಟ್ ತಿಳಿಯಲು ಈ ಕೆಳಗೆ ನೀಡಿರುವ ಚುನಾವಣಾ ಫಲಿತಾಂಶದ ನೇರ ಪ್ರಸಾರವನ್ನು (ಲೈವ್) 'ಒನ್ ಇಂಡಿಯಾ ಕನ್ನಡ'ದಲ್ಲಿ ವೀಕ್ಷಿಸಬಹುದು.
* 2019ರ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿಯವರು ಭರ್ಜರಿ ಜಯಗಳಿಸಿದ್ದರು. ಇವರ ವಿರುದ್ಧ ಕಾಂಗ್ರೆಸ್‌ನಿಂದ ಡಾ.ಸಾಧುನವರ ಅವರು ಪರಾಭವಗೊಂಡಿದ್ದರು. ಆದರೆ 2021ರಲ್ಲಿ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್ ಅಂಗಡಿ ನಿಧನರಾದರು.
* ಅಂದಿನ ಬಿಜೆಪಿ ಅಭ್ಯರ್ಥಿ ದಿ.ಸುರೇಶ್ ಅಂಗಡಿ ಅವರ ಕಾಲವಾದ ನಂತರ, 2021ರಲ್ಲಿ ಮತ್ತೆ ಈ ಕ್ಷೇತ್ರಕ್ಕೆ ಲೋಕಸಭಾ ಚುನಾವಣೆ ನಡೆಯಿತು. ಆಗ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿಯಿಂದ ದಿ.ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಕಣಕ್ಕಿಳಿದು ಜಯಭೇರಿ ಬಾರಿಸಿದರು.
* ಸದರಿ 2024 ಬೆಳಗಾವಿ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆದಿದೆ. ಇಂದು ಜೂನ್ 04ರಂದು ಚುನಾವಣಾ ಫಲಿತಾಂಶ ನಡೆಯುತ್ತಿದೆ. ಇಂದು ಜಗದೀಶ್ ಶೆಟ್ಟರ್ ಮತ್ತು ಮೃಣಾಲ್ ಹೆಬ್ಬಾಳ್ಕರ್ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಮನೆ ಮಗ ವರ್ಸಸ್ ವಲಸಿಗ ಪೈಪೋಟಿ?
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕುಟುಂಬಕ್ಕೆ ರಾಜಕೀಯ ಅಗ್ನೀಪರೀಕ್ಷೆ ಎದುರಾಗಿದೆ. ಮನೆ ಮಗ ವರ್ಸಸ್ ವಲಸಿಗ ಎಂದೇ ಬೆಳಗಾವಿ ಚುನಾವಣೆ ಬಿಂಬಿತವಾಗಿತ್ತು. ಇಲ್ಲಿ ಲಿಂಗಾಯತ, ಮರಾಠಾ ಮತಗಳೇ ನಿರ್ಣಾಯಕವಾಗಿವೆ. ಹೀಗಾಗಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಪೈಪೋರ್ಟಿ ಏರ್ಪಟ್ಟಿದೆ. ಇಲ್ಲಿ 2004 ರಿಂದ ಸತತವಾಗಿ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ.
ಅಂಚೆ ಮತ ಎಣಿಕೆ: ಶೆಟ್ಟರ್ ಮುನ್ನಡೆ
ಬೆಳಗಾವಿಯಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಆರಂಭದಲ್ಲಿ ಹಿನ್ನಡೆ ಎದುರಿಸಿದ್ದಾರೆ.
ಬೆಳಗಾವಿಯಲ್ಲಿ ಹಾವು-ಏಣಿ ಆಟ
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಸುಮಾರು 8000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಒಟ್ಟು 42,000 ಮತ ಪಡೆದರೆ, ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ 34000 ಮಗಳನ್ನು ಪಡೆದಿದ್ದಾರೆ. ಇಲ್ಲಿ ಹಾವು ಏಣಿ ಆಟ ಶುರುವಾಗಿದೆ.
ಶೆಟ್ಟರ್ 61000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ
ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬರೋಬ್ಬರಿ 61000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಭಾರೀ ಹಿನ್ನಡೆ ಆಗಿದೆ.
ಜಗದೀಶ್ ಶೆಟ್ಟರ್ 1.76 ಲಕ್ಷ ಮತಗಳಿಂದ ಭಾರೀ ಮುನ್ನಡೆ
ಬೆಳಗ್ಗೆ 11.10 ಗಂಟೆಗೆ ಹೊತ್ತಿಗೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಬರೋಬ್ಬರಿ 1.76 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಹಿಮ್ಮೆಟ್ಟಿಸುವ ಸಫಲ ಪ್ರಯತ್ನ ಮಾಡುತ್ತಿದ್ದಾರೆ. ಮೃಣಾಲ್ ಹೆಬ್ಬಾಳ್ಕರ್ ಅವರು 137776 ಮತ ಪಡೆದು ಹಿಂದಿದ್ದಾರೆ. ಇನ್ನೂವರೆಗೆ ತೀವ್ರ ಜಿದ್ದಾ ಜಿದ್ದಿ ಮುಂದುವರಿದೆ.
ಜಗದೀಶ್ ಶೆಟ್ಟರ್‌ಗೆ ಒಲಿದ ಅದೃಷ್ಟ
2024ರ ಬೆಳಗಾವಿ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಅದೃಷ್ಟ ಒಲಿದಿದೆ. ಅವರು ಬೆಳಗಾವಿಯ ಅಧಿಕಾರ ಹಿಡಿದಿದ್ದಾರೆ. ಇತ್ತ ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಹಿನ್ನಡೆ ಆಗಿದ್ದು, ಸೋಲು ಅನುಭವಿಸಬೇಕಾಗಿದೆ. ಇದರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತೀವ್ರ ಮುಖಬಂಗವಾಗಿದೆ. ಸಂಜೆ ಚುನಾವಣೆ ಆಯೋಗ ಅಧಿಕೃತ ಘೋಷಣೆ ಮಾಡಲಿದೆ.
1.72 ಲಕ್ಷ ಮತಗಳಿಂದ ಬಿಜೆಪಿ ಮುನ್ನಡೆ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 6 ಗಂಟೆವರೆಗಿನ ಮತ ಎಣಿಕೆ ಮಾಹಿತಿ ನೋಡುವುದಾದರೆ ಬಿಜೆಪಿ ಜಗದೀಶ್ ಶೆಟ್ಟರ್ ಅವರು 7,46,726 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರು 5,73,898 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಗಿಂತ ಬಿಜೆಪಿ ಬರೋಬ್ಬರಿ 1.72 ಲಕ್ಷ ಮತಗಳಿಂದ ಗೆಲುವು ಕಂಡಿದೆ. ಈ ಬಗ್ಗೆ ಚುನಾವಣೆ ಆಯೋಗ ಖಚಿತ ಪಡಿಸಲಿದೆ.
ಭಾರೀ ಮತಗಳ ಅಂತರದಿಂದ ಜಗದೀಶ್ ಶೆಟ್ಟರ್ ಗೆಲುವು
ಬೆಳಗಾವಿಯಲ್ಲಿ ಬಿಜೆಪಿ ಪಕ್ಷದ ಜಗದೀಶ್ ಶೆಟ್ಟರ್ ಅವರು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಶೆಟ್ಟರ್ ಅವರು ಬರೋಬ್ಬರಿ 7,62,029 ಮತಗಳಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ ಅವರು 5,83,592 ಮತಗಳನ್ನು ಪಡೆದಿದ್ದಾರೆ. ಇಬ್ಬರ ಮಧ್ಯೆ 1,78,437 ಮತಗಳ ಅಂತರ ಇದ್ದು, ಬಿಜೆಪಿ ಗೆಲುವು ಸಾಧಿಸಿದೆ ಎಂದು ರಾಜ್ಯ ಚುನಾವಣೆ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ನಿಡಲಾಗಿದೆ.












Click it and Unblock the Notifications