'ನನ್ನ ತಂಟೆಗೆ ಬಂದ್ರೆ ಹುಷಾರ್' ಲಕ್ಷ್ಮೀ ಹೆಬ್ಬಾಳ್ಕರ್ ಧಮ್ಕಿ

Recommended Video

      Belagavi : lakshmi hebbalkar threatens valmiki association state president | Oneindia Kannada

      ಬೆಳಗಾವಿ, ಅಕ್ಟೋಬರ್ 16: ಕೆ.ಪಿ.ಸಿ.ಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಜ್ಯ ವಾಲ್ಮೀಕಿ ಸಂಘದ ಅಧ್ಯಕ್ಷ ವಿಜಯ ಎಂಬಾತನಿಗೆ ಹೆಬ್ಬಾಳ್ಕರ್ ಧಮ್ಕಿ ಹಾಕಿದ್ದಾರೆ.

      ತಿಂಗಳ ಹಿಂದೆ ಸತೀಶ್ ಜಾರಕಿಹೋಳಿ ಸಭೆಯಲ್ಲಿ ಮಾತನಾಡುತ್ತಾ ಲಕ್ಷ್ಮಿ ಹೆಬ್ಬಾಳ್ಕರ್ ಸೀರೆ ಹಂಚುತ್ತಿದ್ದು, ಸೀರೆ ಹಂಚುವುದರಿಂದ ಏನೂ ಆಗಲ್ಲಾ ಎಂದು ಹರಿಹಾಯ್ದಿದ್ದರು. ಈ ವಿಷಯವಾಗಿ ಇಬ್ಬರ ಅಭಿಮಾನಿಗಳ ನಡುವೆ ವಾಗ್ವಾದ ನಡೆದಿತ್ತು.

       ನನ್ನ ತಂಟೆಗೆ ಬಂದ್ರ ಹುಷಾರ್

      ನನ್ನ ತಂಟೆಗೆ ಬಂದ್ರ ಹುಷಾರ್

      ಈ ಸಂದರ್ಭ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಯನ್ನು ವಿಜಯ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನಲೆ ವಿಜಯ್ ರನ್ನು ಫೋನಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ. 'ನನ್ನ ತಂಟೆಗೆ ಬಂದರೆ ಹುಷಾರ್' ಅಂತ ವಿಜಯ್ ಗೆ ಲಕ್ಷ್ಮೀ ಧಮ್ಕಿ ಹಾಕಿದ್ದಾರೆ.

       'ವಿಜಯ್ ನನ್ನೊಂದಿಗಿದ್ದ ಹುಡುಗ'

      'ವಿಜಯ್ ನನ್ನೊಂದಿಗಿದ್ದ ಹುಡುಗ'

      ಈ ಬಗ್ಗೆ ಬೆಳಗಾವಿಯಲ್ಲಿ ಸ್ಪಷ್ಟನೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ವಿಜಯ್ ನನ್ನೊಂದಿಗೆ ಓಡಾಡಿಕೊಂಡಿದ್ದ ಹುಡುಗ. ಲವ್ ಮಾಡಿ ಯುವತಿಯನ್ನು ಕರೆದುಕೊಂಡು ಹೋಗಿದ್ದ. ಆಗ ಅನೇಕ ಬಾರಿ ಹಣದ ಸಹಾಯ ಮಾಡುವಂತೆ ಕೇಳಿದ್ದ. ಆಗ ನಾನು ಬೆಂಗಳೂರಿನಲ್ಲಿದ್ದರಿಂದ ಸಹಾಯ ಮಾಡಿರಲಿಲ್ಲ," ಎಂದು ಹೇಳಿದ್ದಾರೆ.

       ಸತೀಶ್ ಜಾರಕಿಹೊಳಿ ಹೇಳಿಕೆ ವಿವಾದದ ಮೂಲ

      ಸತೀಶ್ ಜಾರಕಿಹೊಳಿ ಹೇಳಿಕೆ ವಿವಾದದ ಮೂಲ

      "ಬೆಂಗಳೂರಿನಿಂದ ಮರಳಿ ಬರುವುದರಲ್ಲಿ ಸತೀಶ ಜಾರಕಿಹೊಳಿಯವರು ನನ್ನ ಬಗ್ಗೆ ಹೇಳಿಕೆ ನೀಡಿದ್ದರು. ಅದನ್ನು ನನ್ನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದರು. ಈ ವಿಚಾರವಾಗಿ ವಿಜಯ್ ನನ್ನ ಅಭಿಮಾನಿಗಳಿಗೆ ಧಮ್ಕಿ ಹಾಕಿದ್ದನು. ಆದ್ದರಿಂದ ಈ ರೀತಿ ಮಾತನಾಡದಂತೆ ಎಚ್ಚರಿಕೆ ನೀಡಿದ್ದೇನೆ.," ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

       ನಾನು ನಡೆದಾಡಿದರೂ ವಿವಾದ

      ನಾನು ನಡೆದಾಡಿದರೂ ವಿವಾದ

      ನಾನೇನು ಶಾಸಕಿಯಲ್ಲ. ನಾನು ಮಾತನಾಡಿದರೂ, ನಡೆದಾಡಿದರೂ ಮಾಧ್ಯಮಗಳಲ್ಲಿ ವಿವಾದ ಮಾಡಲಾಗುತ್ತಿದೆ. ಪ್ರತಿಯೊಂದಕ್ಕೂ ನನ್ನ ಬಳಿ ಉತ್ತರವಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+