'ಬೆಳಗಾವಿ ವಿವಾದ ಬಗೆಹರಿಯಲಿ, ಮರಾಠಿಗರಂತೆ ನಿರ್ಣಯ ಬರಲಿ'

ಬೆಳಗಾವಿ, ಡಿಸೆಂಬರ್. 10 : 'ಆದಷ್ಟು ಬೇಗ ಮರಾಠಿಗರ ಇಚ್ಛೆಯಂತೆ ಬೆಳಗಾವಿ ಗಡಿ ವಿವಾದ ಇತ್ಯರ್ಥವಾಗಲಿ. ಮರಾಠಿಗರ ಪರವಾಗಿ ನಿರ್ಣಯ ಬರುವಂತೆ ದೇವರು ಆಶೀರ್ವದಿಸಲಿ' ಎಂದು ಬಿಜೆಪಿ ಶಾಸಕ ಸಂಜಯ ಪಾಟೀಲ ಕರ್ನಾಟಕ ವಿರೋಧಿ ಹೇಳಿಕೆ ನೀಡಿದರು.

ಭಾನುವಾರ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನಡೆದ 12ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ ಅವರು, 'ನಾನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದ್ದೇನೆ. ನನಗೆ ತುಂಬಾ ಮರಾಠಿ ಪ್ರೇಮವಿದೆ' ಎಂದರು.

Sanjay Patil

'ನನ್ನ ತಾಯಿ ಮರಾಠಿ, ಹೀಗಾಗಿ ನಾನು ಶಾಸಕನಾಗಿ ಸಾಹಿತ್ಯ ಸಮ್ಮೇಳನಕ್ಕೆ ಬಂದಿಲ್ಲ. ಮರಾಠಿಗನಾಗಿ ಬಂದಿದ್ದೇನೆ. ನನ್ನ ವೈಯಕ್ತಿಕ ಇಚ್ಛೆಯಿದೆ ಗಡಿ ವಿಚಾರ ಬೇಗ ಬಗೆಹರಿಯಲಿ. ಗಡಿ ಮತ್ತು ಮರಾಠಿಗರ ವಿಚಾರ ಬಿಸಿ ತುಪ್ಪದಂತಿದೆ. ನುಂಗು ಹಾಗಿಲ್ಲ ಉಗುಳುವ ಹಾಗಿಲ್ಲ. ಮರಾಠಿಗರ ಪರ ಮಾತಾನಾಡದೇ ಇರಲು ಆಗುವುದಿಲ್ಲ' ಎಂದು ಹೇಳಿದರು.

'ಮರಾಠಿ ಭೂಮಿಯಲ್ಲಿ ಜನಿಸಿದ್ದೇನೆ. ಆದರೆ, ರಾಷ್ಟ್ರೀಯ ಪಕ್ಷದಲ್ಲಿ ಇರುವುದರಿಂದ ಕೆಲವು ನಿರ್ಬಂಧವಿದೆ. ಗಡಿ ವಿವಾದ ಇತ್ಯರ್ಥವಾಗಲಿ. ಮರಾಠಿಗರ ಪರವಾಗಿ ನಿರ್ಣಯ ಬರುವಂತೆ ದೇವರು ಆಶೀರ್ವದಿಸಲಿ' ಎಂದು ಹೇಳಿ ವಿವಾದ ಹುಟ್ಟುಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+