ವಾಟ್ಸಪ್ ಗ್ರೂಪಿಗೆ ಅಶ್ಲೀಲ ಚಿತ್ರಗಳ ರವಾನೆ, ಶಾಸಕರಿಂದ ಕ್ಷಮೆಯಾಚನೆ

ಬೆಳಗಾವಿ ನಗರದ ಮೀಡಿಯಾ ಫೋರ್ಸ್‌ ಎಂಬ ವಾಟ್ಸಪ್‌ ಗ್ರೂಪಿಗೆ ಬಿಜೆಪಿ ಎಂಎಲ್‌ಸಿ ಮಹಂತೇಶ ಕವಟಗಿ ಮಠ ಅವರು ಅಶ್ಲೀಲ ಫೋಟೋಗಳನ್ನು ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಳಗಾವಿ, ಮೇ 02: ಬೆಳಗಾವಿ ನಗರದ ಮೀಡಿಯಾ ಫೋರ್ಸ್‌ ಎಂಬ ವಾಟ್ಸಪ್‌ ಗ್ರೂಪಿಗೆ ಬಿಜೆಪಿ ಎಂಎಲ್‌ಸಿ ಮಹಂತೇಶ ಕವಟಗಿ ಮಠ ಅವರು ಅಶ್ಲೀಲ ಫೋಟೋಗಳನ್ನು ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಖಾಸಗಿ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿರುವ ಶಾಸಕ ಕವಟಗಿಮಠ, ಆಕಸ್ಮಿಕವಾಗಿ ನಡೆದ ಘಟನೆ, ಯಾರಿಗಾದರೂ ಕಿರಿಕಿರಿಯುಂಟು ಮಾಡಿದ್ದರೆ ಕ್ಷಮಿಸಿ ಎಂದಿದ್ದಾರೆ.

ಬೆಳಗಾವಿಯ ಮೀಡಿಯಾ ಫೋರ್ಸ್ ಎಂಬ ಗ್ರೂಪಿಗೆ 50ಕ್ಕೂ ಹೆಚ್ಚು ಅಶ್ಲೀಲ ಫೋಟೋಗಳನ್ನು ಒಳಗೊಂಡ ಪಿಡಿ ಎಫ್ ವೊಂದನ್ನು ಎಂಎಲ್‌ಸಿ ಕವಟಗಿಮಠ ಅವರು ಹಂಚಿದ್ದಾರೆ.

Belagavi BJP MLC shares objectionable message to Media Whatsapp Group

ಈ ಗ್ರೂಪ್‌ನಲ್ಲಿ ಪತ್ರಕರ್ತರು, ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಗಣ್ಯರು ಇದ್ದಾರೆ ಎಂದು ತಿಳಿದು ಬಂದಿದೆ. ಇಂಥ ಚಿತ್ರಗಳು ಬಂದ ಬಳಿಕ ಇಬ್ಬರು ಮಹಿಳಾ ಅಧಿಕಾರಿಗಳು ಗ್ರೂಪಿನಿಂದ ಹೊರಕ್ಕೆ ಹೋಗಿದ್ದಾರೆ.

ಜಿಲ್ಲೆಯ ಕುಂದು-ಕೊರತೆಗಳ ನಿವಾರಣೆಗೆ ಸಂಬಂಧಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ 'ಬೆಳಗಾವಿ ಮಿಡಿಯಾ ಫೋರ್ಸ್' ವಾಟ್ಸಪ್ ಗ್ರೂಪ್ ಸದ್ಯದ ಹಾಟ್ ಟಾಪಿಕ್ ಆಗಿದೆ.

ಮಹಾಂತೇಶ್ ಕವಟಗಿಮಠ ಅವರ ಮೊಬೈಲಿನಿಂದ ಸಂಜೆ 4.22ರ ಸುಮಾರಿಗೆ ಈ ವಿವಾದಿತ ಸಂದೇಶ ಕಳಿಸಲಾಗಿದೆ.ಕವಟಗಿ ಮಠ ಅವರು, ಅಶ್ಲೀಲ ಫೋಟೋಗಳನ್ನು ರವಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+