Get Updates
Get notified of breaking news, exclusive insights, and must-see stories!

ಜಗದೀಶ್ ಶೆಟ್ಟರ್‌ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ, ಮೇ, 01: ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಇನ್ನುಳಿದ ಕ್ಷೇತ್ರಗಳಿಗೆ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಹಾಗೆಯೇ ಇದೀಗ ಚಾಲಚಂದ್ರ ಜಾರಕಿಹೊಳಿ ಅವರು ಜಗದೀಶ್‌ ಶೆಟ್ಟರ್‌ ಅವರ ಮುಂದಿನ ಸ್ಥಾನದ ಬಗ್ಗೆ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.

ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಇನ್ನು ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾದರೆ ಜಗದೀಶ್ ಶೆಟ್ಟರ್ ಅವರಿಗೆ ಉನ್ನತ ಸ್ಥಾನ ಸಿಗಲಿದೆ. ಆಗ ನಾವು ಕೇಂದ್ರದ ಅನೇಕ ಯೋಜನೆಗಳು ಹಾಗೂ ಅನೇಕ ಮಹತ್ವದ ಕೇಲಸಗಳು ನಮ್ಮ ಕ್ಷೇತ್ರಕ್ಕಾಗಿ ಮಾಡಬಹುದು. ಆದ್ದರಿಂದ ಜಗದೀಶ್‌ ಶೆಟ್ಟರ್ ಅವರನ್ನು ನವದೆಹಲಿಗೆ ಕಳುಹಿಸಬೇಕೆಂದು ಶಾಸಕ ಬಾಲಚಂದ್ರ ಜಾರಕೊಹೊಳಿ ಹೇಳಿದರು. ‌

Balachandra Jarkiholi prediction about Jagadish Shettar next position

ಲೋಕಸಭಾ ಚುನಾವಣೆ ಹಿನ್ನೆಲೆ ಮೂಡಲಗಿ ಮತಕ್ಷೇತ್ರದ ಮೇಳವಂಕಿ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಏನೇ ಹೇಳಿದರೂ, ನೀವು ಬಿಜೆಪಿಗೆ ಮತ ನೀಡಿಬೇಕು. ಬರಗಾಲದ ಸಂದರ್ಭದಲ್ಲೂ ನಮ್ಮ ಕ್ಷೇತ್ರದಲ್ಲಿ ಹೊಳೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಮುಂದಿನ 10 ದಿನಗಳು ಹೊಳೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗುವುದು. ಬೇರೆ-ಬೇರೆ ಅಭಿವೃಧ್ಧಿ ಕೆಲಸಗಳು ಸಾಕಷ್ಟು ಆಗಿದೆ. ಮುಂದೆ ಕೂಡ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದೆಂದು ತಿಳಿಸಿದರು.‌

ನಮ್ಮ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರು ಅನನ್ಯವಾಗಿ ಇದ್ದೇವೆ. ಬಸವಣ್ಣನವರು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ನಮ್ಮ ಕ್ಷೇತ್ರದಲ್ಲಿ ಎಲ್ಲರೂ ಇರುತ್ತಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಬಿಜೆಪಿ ಅಭ್ಯರ್ಥಿ ಜಗದೀಶ್ವ ಶೆಟ್ಟರ್ ಮಾತನಾಡಿ, ಬಿಸಿಲು ಸಾಕಷ್ಟು ಇದ್ದರೂ ಸಾವಿರಾರು ಜನ ಸೇರಿ ನಮಗೆ ಬೆಂಬಲ ನೀಡಿದ್ದು, ನಮಗೆ ಮತ್ತು ಬಾಲಚಂದ್ರ ಜಾರಕಿಹೊಳಿವರಿಗೆ ಹೆಚ್ಚು ಶಕ್ತಿ ಸಿಕ್ಕಂತಾಗಿದೆ.‌ ಪ್ರಧಾನಿ ನರೇಂದ್ರ ಮೋದಿಯವರು ಕೆಳದ 10 ವರ್ಷದಿಂದ ಉತ್ತಮ ಆಡಳಿತ ನೀಡಿದ್ದಾರೆ‌ ಹಾಗಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದರು.

ಜಗತ್ತಿನಲ್ಲಿ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. 14ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆ ಇದೀಗ 5ನೇ ಸ್ಥಾನದಲ್ಲಿದೆ.‌ ಇನ್ನೂ ಕೆಲವೇ ವರ್ಷಲದಲ್ಲಿ ಭಾರತ ಸೂಪರ್ ಪಾವರ್ ನಂಬರ್ ಒನ್ ದೇಶವಾಗಲಿದೆ ಎಂದು ತಿಳಿಸಿದರು. ಮೋದಿ ಆಡಳಿತದಲ್ಲಿ ಸಾಕಷ್ಟು ರಸ್ತೆಗಳು ಅಭಿದ್ಧಿ ಆಗಿದೆ. ಈ ಬಾರಿ ಎಸ್‌ಡಿಎ ಒಕ್ಕೂಟ 400ಕ್ಕೂ ಸೀಟ್ ಗೆಲ್ಲುತ್ತದೆ. ನಮ್ಮ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಆದರೆ, ಇಂಡಿಯಾ ಒಕ್ಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಹೇಳಲು ಧೈರ್ಯ ಇಲ್ಲ. ಅವರಿಗೆ ಈ ಚುನಾವಣೆ ಎದುರಿಸಲು ನೈತಿಕಥೆ ಇಲ್ಲ ಎಂದರು.

Balachandra Jarkiholi prediction about Jagadish Shettar next position

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯನೇ ಇಲ್ಲ. ಕಾಂಗ್ರೆಸ್ ಜನಗರಿಗೆ ಸುಳ್ಳು ಭರವಸೆ ನೀಡುತ್ತಿದೆ. ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಗ್ಯಾರಂಟಿ ನಿಲ್ಲಲಿದೆ. ಆದ್ದರಿಂದ ಮಹಿಳೆಯರು ಕಾಂಗ್ರೆಸ್‌ನವರನ್ನು ನಂಬಬೇಡಿ‌. ಮೋದಿ ಆಡಳಿತದಲ್ಲಿ ಶಾಂತಿಯುತ ವಾತಾವರಣ ಭಾರತದಲ್ಲಿ ನೆಲೆಸಿದೆ.‌ ಜಗತ್ತಿನ ಅನೇಕ ದೇಶಗಳು ಆರ್ಥಿಕವಾಗಿ ಕುಸಿದಿದೆ. ಮೋದಿ ನಮ್ಮ ನಾಯಕ ಇರುವದರಿಂದ ನಮ್ಮ ದೇಶ ಆರ್ಥಿಕವಾಗಿ ಬೆಳೆದಿದೆ ಎಂದರು.‌

ಬಾಲಚಂದ್ರ ಜಾರಕಿಹೊಳಿ ಅವರ ನೇತೃದಲ್ಲಿ ಮೂಡಲಗಿ-ಅರಬಾವಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಆಗಿದೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡಿದ್ದಾರೆ. ನನಗೆ ರಾಜಕೀಯವಾಗಿ 30 ವರ್ಷಗಳ ಅನುಭವ ಇದೆ. ಹಾಗಾಗಿ ಯುವಕರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಕೃಷಿಗೆ ಸಂಬಂಧಿಸಿದ ಅನೇಕ ಬಲದಲಾವಣೆ ಮಾಡೋಣ. ಎಲ್ಲೇ ನೋಡಿದರೂ ಬೆಳಗಾವಿ ಹೆಸರು ಬರಬೇಕು. ಆ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದರು.

ಮಹಾಂತೇಶ್ ಕವಟಗಿಮಠ್ ಮಾತನಾಡಿ, ಮಾರ್ಚ್‌ 7ರಂದು ನಡೆಯುವ ಚುನಾವಣೆ ಐತಿಹಾಸಿಕ ಚುನಾವಣೆ, ದೇಶದ ನಾಯಕತ್ವ ನಿರ್ಧರಿಸುವ ಚುನಾವಣೆ ಆಗಿದೆ.‌ ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿಯವರು ವಿವಿಧ ಜನಪರ ಯೋಜನೆಗಳುನ್ನು ನೀಡಿ, ನಾವು ಸ್ವಾಭಿಮಾನದಿಂದ ಬದುಕಲು ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಧಲ್ಲಿ ಇಡೀ ವಿಶ್ವ ತತ್ತಿರಿಸಿತು‌. ನಾವು ಒಟ್ಟಾಗಿ ಕೋವಿಡ್ ಎದುರಿಸಲು ಸಂಕಲ್ಪ ಮಾಡಿ, ಎಲ್ಲರಿಗೂ ಕೋವಿಡ್ ಲಸಿಕೆ ನೀಡಿದ್ದಾರೆ ಎಂದರು.

ಬೆಳಗಾವಿಯ 8 ವಿಧಾನಸಭಾ ಕ್ಷೇತ್ರದಲ್ಲಿ ಮೂಡಲಗಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಲೀಡ್ ನೀಡಬೇಕು‌. ಜಗದೀಶ್ ಶೆಟ್ಟರ್ ಆಯ್ಕೆ ಮಾಡುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರ ನಾಯಕತ್ವ ಗಟ್ಟಿಗೊಳಿಸಬೇಕು ಎಂದರು.‌ ಇನ್ನು ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶುಭಾಸ ಪಾಟೀಲ್, ಮಂಡಳ ಅಧ್ಯಕ್ಷ ಮಹಾದೇವಪ್ಪ ಶೇಕಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+