15 ದಿನದ ಬಳಿಕ ಭೂತ ಬಂಗಲೆಯಾಗುವ ಸುವರ್ಣಸೌಧ ಬಾಡಿಗೆ ಕೊಡಿ, ಮಗಳ ಬರ್ತ್ಡೇ ಮಾಡ್ತಿನಿ ಎಂದ ತಂದೆ!

ಬೆಳಗಾವಿ, ಡಿ. 22: ಅಧಿವೇಶನ ನಡೆಯಲಿರುವ ದಿನಗಳಲ್ಲಿ ಮಾತ್ರ ಕಂಗೊಳಿಸಲಿರುವ, 15 ದಿನದ ಬಳಿಕ ಭೂತ ಬಂಗಲೆಯಾಗುವ ಸುವರ್ಣಸೌಧ ಬಾಡಿಗೆ ಕೊಡಿ, ಮಗಳ ಹುಟ್ಟುಹಬ್ಬ ಸಮಾರಂಭ ಮಾಡುತ್ತೇನೆ ಎಂದು ವಕೀಲರೊಬ್ಬರು ವಿಧಾನ ಪರಿಷತ್ತ ಸಭಾಪತಿಗಳಿಗೆ ಪತ್ರ ಬರೆದಿರುವ ಘಟನೆ ವರದಿಯಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿಯಾಗಿರುವ ಮಲ್ಲಿಕಾರ್ಜುನ ದುಂಡಪ್ಪ ಚೌಕಾಶಿ ಎಂಬುವವರು ಪತ್ರ ಬರೆದಿದ್ದು, ಮಗಳ ಹುಟ್ಟುಹಬ್ಬದ ಆಚರಣೆಗೆ ಸುವರ್ಣಸೌಧವನ್ನು ಬಾಡಿಗೆ ಕೇಳಿದ್ದಾರೆ. ವರ್ಷದಲ್ಲಿ 15 ದಿನ ಮಾತ್ರ ಸುವರ್ಣ ಸೌಧ ಕಂಗೊಳಿಸುತ್ತದೆ. ಉಳಿದ ದಿನಗಳಲ್ಲಿ ಭೂತ ಬಂಗಲೆ ರೀತಿ ಇರುವ ಅದನ್ನು ಬಾಡಿಗೆ ನೀಡಿ ಎಂದು ಹೇಳಿದ್ದಾರೆ.

ವಕೀಲರಾಗಿರುವ ಮಲ್ಲಿಕಾರ್ಜುನ ದುಂಡಪ್ಪ ಚೌಕಾಶಿ ತನ್ನ ಮಗಳ 6ನೇ ವರ್ಷದ ಹುಟ್ಟುಹಬ್ಬ ಮಾಡಬೇಕು. ಚಿಕ್ಕ ಮಕ್ಕಳಿಗೆ ಮಾಡುವ 'ಹುಟ್ಟದಟ್ಟಿ' ಕಾರ್ಯಕ್ರಮ ಜೀವನದ ಅಮೂಲ್ಯ ಕ್ಷಣ ಇದಕ್ಕಾಗಿ ಸುವರ್ಣಸೌಧ ಬಾಡಿಗೆ ಕೊಡಿ ಎಂದಿದ್ದಾರೆ.

A Man wrote Letter to speaker Asking To Rent Suvarna Soudha For His Daughters Birthday

*ಮಲ್ಲಿಕಾರ್ಜುನ ದುಂಡಪ್ಪ ಚೌಕಾಶಿ ಪತ್ರದಲ್ಲೇನಿದೆ..?*

"ನನ್ನ ಏಕೈಕ ಪುತ್ರಿಯಾದ ಕುಮಾರಿ ಮಣಿಗೆ ಜನವರಿ 30 ಕ್ಕೆ 5 ವರ್ಷ ಮುಗಿದು 6 ವರ್ಷ ತುಂಬಲಿದ್ದು, ಆಕೆ ಒಂದನೇಯ ತರಗತಿಯ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣ. ಹೀಗಾಗಿ ಅವಳ ಹುಟ್ಟು ಹಬ್ಬವನ್ನು ಆಚರಿಸುವದರೊಂದಿಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣು ಮಕ್ಕಳಿಗೆ ಹುಟದಟ್ಟಿ ಕಾರ್ಯಕ್ರಮ ಮಾಡುವ ಪದ್ಧತಿಯಿದ್ದು ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದು. ಆದ್ದರಿಂದ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂತ ಬಂಗ್ಲೆಯಂತಿರುವ ಕರ್ನಾಟಕ ಸುವರ್ಣ ವಿಧಾನಸೌಧದ ಸಭಾಂಗಣವನ್ನು ಬಾಡಿಗೆ ನೀಡಬೇಕೆಂದು ವಿನಂತಿ".

"ಈ ರೀತಿ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿರುವ ಆರ್ಥಿಕ ನಿರ್ವಹಣಾ ವೆಚ್ಚವನ್ನು ಉಳಿಸಬಹುದು. ಸದ್ಯ ಅಧೀವೇಶನ ನಡೆದಿದ್ದು ಸದನದಲ್ಲಿ ಈ ವಿಷಯವನ್ನು ಚರ್ಚಿಸಿ ನಮಗೆ ಬಾಡಿಗೆ ನೀಡಬೇಕೆಂದು ಕಳಕಳಿಯ ವಿನಂತಿ" ಎಂದು ಬರೆದಿದ್ದಾರೆ.

A Man wrote Letter to speaker Asking To Rent Suvarna Soudha For His Daughters Birthday

ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿದ್ದು, ಹಲವರು ಹೀಗೂ ಮಾಡಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇನ್ನು, ಕಳೆದ ವರ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ, 'ವಿಧಾನಮಂಡಲದ ಅಧಿವೇಶನ ನಡೆಸದಿದ್ದರೆ, ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿರುವ ಸುವರ್ಣಸೌಧವನ್ನು ಬಾಡಿಗೆಗಾದರೂ ಕೊಡಲಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+