ಬೆಳಗಾವಿಯಲ್ಲಿ ಡೆಂಗ್ಯೂಗೆ 11 ವರ್ಷದ ಬಾಲಕಿ ಬಲಿ
ಬೆಳಗಾವಿ, ಸೆಪ್ಟೆಂಬರ್ 27: ಬೆಳಗಾವಿಗೂ ಡೆಂಗ್ಯೂ ಕಾಲಿಟ್ಟಿದೆ. ಡೆಂಗ್ಯೂವಿನಿಂದಾಗಿ ಹನ್ನೊಂದು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳಗಾವಿಯ ಲಕ್ಷ್ಮೀ ನಗರ ವಡಗಾಂವಿ ನಿವಾಸಿ ರೂಪಾ ಮಂಜುನಾಥ ಮೊರಕರ್ (11) ಡೆಂಗ್ಯೂನಿಂದ ಸಾವನ್ನಪ್ಪಿದ ಬಾಲಕಿ. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾಳೆ. ಪ್ರವಾಹದಿಂದಾಗಿ ನೆಲೆ ಕಳೆದುಕೊಂಡು ಈಕೆಯ ಕುಟುಂಬವು ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು.












Click it and Unblock the Notifications