ಮೋದಿಯ ಭಾರತದಲ್ಲಿ ನಾನಿರೋಲ್ಲ : ಅನಂತಮೂರ್ತಿ

Posted By:
Subscribe to Oneindia Kannada
u r ananthamurthy
ಬೆಂಗಳೂರು, ಸೆ.15 : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಹೇಳಿದ್ದಾರೆ. ಮೋದಿ ಅಧಿಕಾರ ಪಡೆದರೆ ನಮ್ಮ ಕನಸಿನ ಭಾರತ ನೋಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅನಂತಮೂರ್ತಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಪಡೆದರೆ, ಗಾಂಧಿ, ನೆಹರು ಕಂಡಂತಹ ಭಾರತ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು ಎಂದು ಈ ಸಂಜೆ ದಿನಪತ್ರಿಕೆ ವರದಿ ಮಾಡಿದೆ.

ಗಾಂಧಿ, ನೆಹರು ತತ್ವಗಳು ಇಲ್ಲದ ದೇಶದಲ್ಲಿ ನಾನು ಬದುಕಲು ಇಚ್ಛೆ ಪಡುವುದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದರೆ ನಾನು, ಭಾರತದಲ್ಲಿ ಬದುಕಲು ಇಚ್ಛೆ ಪಡುವುದಿಲ್ಲ ಎಂದು ಅನಂತಮೂರ್ತಿ ಅವರು ಹೇಳಿದರು.

ಮಾಧ್ಯಮಗಳು ನರೇಂದ್ರ ಮೋದಿಯ ಒಂದು ಮುಖವನ್ನು ಮಾತ್ರ ಬಿಂಬಿಸಿ ಪ್ರಧಾನಿಯನ್ನಾಗಿ ಮಾಡಲು ಹೊರಟಿವೆ. ಅವರ ಇನ್ನೊಂದು ಮುಖವನ್ನು ಅನಾವರಣ ಮಾಡುತ್ತಿಲ್ಲ. ಇದು ದೊಡ್ಡ ದುರಂತ ಎಂದು ವಿಶ್ಲೇಷಿಸಿದರು.

ನರೇಂದ್ರ ಮೋದಿ ಪ್ರಧಾನಿಯಾದರೆ, ಭಾರತ ಸರ್ವ ಜನಾಂಗದ ಸುಂದರ ತೋಟವಾಗಿ ಉಳಿಯುವುದಿಲ್ಲ. ಮೋದಿ ಯಂತಹವರು ದೇಶವನ್ನು ಮುನ್ನೆಡುಸುವುದಾದದರೆ, ನನ್ನಂಥವರು ಭಾರತದಲ್ಲಿ ಬದುಕಲು ಇಷ್ಟ ಪಡುವುದೂ ಇಲ್ಲ ಎಂದು ಘೋಷಿಸಿದರು.

ಕೆಲವು ದಿನಗಳ ಹಿಂದೆ ಕಾರ್ಪೋರೇಟ್ ಕಂಪನಿಗಳು, ಶ್ರೀಮಂತರು, ಮೇಲ್ಜಾತಿಯವರು ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿ ಮಾಡಬೇಕೆಂದು ಹಂಬಲಿಸುತ್ತಿವೆ ಎಂದು ಅನಂತಮೂರ್ತಿ ದೂರಿದ್ದರು. ಸದ್ಯ ಮೋದಿ 2014ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಅನಂತಮೂರ್ತಿ ಅವರನ್ನು ಟೀಕಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jnanpith awardee Dr. U.R.Ananthamurthy has raked up controversy by saying he will quit India if Narendra Modi becomes Prime Minister of India. On Sunday, September 15 at a book release function he addressed media and said, only the corporate houses, rich people and forward caste wish to see Modi as PM.
Please Wait while comments are loading...