ಪರಿಸರ ಜಾಗೃತಿ ಸಾರಿದ ನಂದಿ ಹಿಲ್ಲಥಾನ್

Written By:
Subscribe to Oneindia Kannada

ಬೆಂಗಳೂರು, ಚಿಕ್ಕಬಳ್ಳಾಪುರ, ಜೂನ್ 12: ಒಂದು ಕಡೆ ಎತ್ತರದ ನಂದಿ ಬೆಟ್ಟ, ಇನ್ನೊಂದು ಕಡೆ ಹಚ್ಚ ಹಸಿರಿನ ವಾತಾವರಣ, ದಾರಿಯುದ್ದಕ್ಕೂ ಪರಿಸರ ಸಂರಕ್ಷಣೆ ಜಾಗೃತಿ ಸಾರುವ ಭಿತ್ತಿ ಪತ್ರಗಳು... ಇದು ನಂದಿ ಹಿಲ್ಲಥಾನ್ ನಲ್ಲಿ ಕಂಡು ಬಂದ ದೃಶ್ಯ.

ಪರಿಸರ ಸಂರಕ್ಷಣೆಗೆ, ಸ್ವಚ್ಛ ವಾತಾವರಣ ನಿರ್ಮಾಣಕ್ಕೆ ಜನ ಟೀ ಶರ್ಟ್ ತೊಟ್ಟು ಓಡುತ್ತಿದ್ದರು. ಭಾನುವಾರ ನಂದಿ ಬೆಟ್ಟದ ತಪ್ಪಲು ಸಾಮಾಜಿಕ ಬದಲಾವಣೆಯ ಕೇಂದ್ರವಾಗಿ ಬದಲಾಗಿತ್ತು.

ಯುನೈಟೆಡ್ ವೇ ಬೆಂಗಳೂರು ಆಶ್ರಯದಲ್ಲಿ ನಂದಿ ಬೆಟ್ಟದ ತಪ್ಪಲಿನಲ್ಲಿ ಹಮ್ಮಿಕೊಂಡಿದ್ದ "ನಂದಿ ಹಿಲ್ಲಥಾನ್ "ಗೆ ಜೂನ್ 12 ರಂದು ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ವೇಗದ ಬೌಲರ್ ಜಾವಗಲ್ ಶ್ರೀನಾಥ್ , ಬ್ಯಾಡ್ಮಿಂಟನ್ ಮಾಜಿ ಆಟಗಾರ ಯು ವಿಮಲ್ ಕುಮಾರ್, ನಟಿ ನಿಕೊಲ್ ಫರಿಯಾ ಚಾಲನೆ ನೀಡಿದರು.[ನಂದಿ ಹಿಲ್ಲಥಾನ್ : ಯಾಕಾಗಿ? ಏನಿದರ ಮಹತ್ವ?]

ಮಾನವನ ದಬ್ಬಾಳಿಕೆಯಿಂದ ನಂದಿ ಬೆಟ್ಟದ ಪ್ರತಿಷ್ಠೆ ಒಂದಿಷ್ಟು ಮುಕ್ಕಾಗಿದ್ದರೂ, ತನ್ನ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿದೆ. ಚಾರಣಿಗರನ್ನು, ಪ್ರವಾಸಿಗರನ್ನು, ಪ್ರೇಮಿಗಳನ್ನು ನಂದಿ ಬೆಟ್ಟ ಕೈಬೀಸಿ ಕರೆಯುತ್ತಲೇ ಇರುತ್ತದೆ.


ನಂದಿ ಹಿಲ್ಲಥಾನ್ ಉದ್ಘಾಟಿಸಿದ ಶ್ರೀನಾಥ್ ಏನಂದ್ರು? ವಿಡಿಯೋ ನೋಡಿ

ನಂದಿ ಹಿಲ್ಸ್ ಅಂದ್ರೆ ಕತ್ತೆತ್ತಿ ನೋಡುವ ಬೆಟ್ಟ ಮಾತ್ರವಲ್ಲ. ಅಲ್ಲಿ ಸಸ್ಯರಾಶಿಯಿದೆ, ಪುರಾತನ ದೇವಸ್ಥಾನಗಳಿವೆ, ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿ ಅರ್ಕಾವತಿ ನದಿಯ ಸೆಲೆಯಿದೆ. ಸುತ್ತಲೂ ಬತ್ತಿರುವ ಕೆರೆಕೊತ್ತಲಗಳಿವೆ ಇವೆಲ್ಲದರ ಉಳಿಕೆ ಜತೆ ಸ್ಥಳೀಯರ ಜೀವನ ಮಟ್ಟ ಸುಧಾರಣೆಗೆ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ ಸಾವಿರಾರು ಜನರು ಪಾಲ್ಗೊಂಡು ಪರಿಸರ ಪ್ರೇಮ ಸಾರಿದರು.

ಎಲ್ಲಿಂದ ಆರಂಭ

ಎಲ್ಲಿಂದ ಆರಂಭ

ಸುಲ್ತಾನ್ ಪೇಟ್ ನ ಕಣಿವೆ ನಂದೀಶ್ವರ ದೇವಾಲಯದ ಸಮೀಪದ ಡಿಸ್ಕವರಿ ವಿಲೇಜ್ ಬಳಿಯಿಂದ ಆರಂಭವಾದ ಮ್ಯಾರಥಾನ್ 21 ಕಿಮೀ ಸಂಚರಿಸಿತು.ಎಲ್ಲಿಂದ ಆರಂಭ
ಸುಲ್ತಾನ್ ಪೇಟ್ ನ ಕಣಿವೆ ನಂದೀಶ್ವರ ದೇವಾಲಯದ ಸಮೀಪದ ಡಿಸ್ಕವರಿ ವಿಲೇಜ್ ಬಳಿಯಿಂದ ಆರಂಭವಾದ ಮ್ಯಾರಥಾನ್ 21 ಕಿಮೀ ಸಂಚರಿಸಿತು.

ಮೂರು ವಿಭಾಗದ ಸ್ಪರ್ಧೆ

ಮೂರು ವಿಭಾಗದ ಸ್ಪರ್ಧೆ

21 ಕಿಮೀ ಮ್ಯಾರಥಾನ್, ನಂದಿ ಓಟ, ಮತ್ತು ನಂದಿ ನಡಿಗೆ ಸ್ಪರ್ಧೆಗಳು ನಡೆದು ವಿಜೇತರು ಸಂಭ್ರಮ ಹಂಚಿಕೊಂಡರು.

ಪಾಲ್ಗೊಂಡ ತೃತೀಯ ಲಿಂಗಿಗಳು

ಪಾಲ್ಗೊಂಡ ತೃತೀಯ ಲಿಂಗಿಗಳು

ತೃತೀಯ ಲಿಂಗಿಗಳು ಸಹ ಓಟದಲ್ಲಿ ಭಾಗವಹಿಸಿದ್ದು ವಿಶೇಷ. ಬೆಂಗಳೂರಿನಿಂದ ತೆರಳಿದ್ದ ಸುಮಾರು 25ಕ್ಕೂ ಹೆಚ್ಚು ತೃತೀಯ ಲಿಂಗಿಗಳು ಸಾಮಾಜಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜೇತರು

ವಿಜೇತರು

ನಂದಿ ಓಟದಲ್ಲಿ ಚಿಕ್ಕಬಳ್ಳಾಪುರ ಕಾಲೇಜು ವಿದ್ಯಾರ್ಥಿ ಚಂದ್ರಕಾಂತ ಮೊದಲ ಸ್ಥಾನ ಪಡೆದರು. ದೀಪಕ್ , ನಾರಾಯಣ ಸ್ವಾಮಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡರು.

ಬದಲಾವಣೆ ಆಗಬೇಕು

ಬದಲಾವಣೆ ಆಗಬೇಕು

ಜನರೇ ಬದಲಾವಣೆಗಳಿಗೆ ಕಾರಣರಾಗಬೇಕು. ಎಲ್ಲಿಯವರೆಗೆ ನಮ್ಮ ಮನೆ, ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಶುರುಮಾಡುವುದಿಲ್ಲವೇ ಅಲ್ಲಿಯವರೆಗೆ ಸ್ವಚ್ಛತೆ ಸಾಧ್ಯವಿಲ್ಲ ಎಂದು ಪ್ರಥಮ ಬಾರಿಗೆ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಸುಜಾತಾ ಹೇಳಿದರು.

ಶ್ರೀನಾಥ್ ಚಾಲನೆ

ಶ್ರೀನಾಥ್ ಚಾಲನೆ

ನಂದಿ ಹಿಲ್ಲಥಾನ್ ಗೆ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಚಾಲನೆ ನೀಡಿದರು.

ಮಕ್ಕಳ ಸವಾರಿ

ಮಕ್ಕಳ ಸವಾರಿ

ಪುಟ್ಟ ಮಕ್ಕಳು ಗ್ರಾಮೀಣ ಕ್ರೀಡೆಯಲ್ಲಿ ತೊಡಗಿಸಿಕೊಂಡು ಆಡಿ ನಲಿದರು. ವಾರದ ರಜೆ ಭಾನುವಾರಕ್ಕೆ ಒಂದು ಸುಂದರ ಅರ್ಥ ಸಿಕ್ಕಿದ್ದು ಸುಳ್ಳಲ್ಲ.

ಮೆರಗು ತಂದ ವೇಷಗಳು

ಮೆರಗು ತಂದ ವೇಷಗಳು

ಮ್ಯಾರಥಾನ್ ಆರಂಭಕ್ಕೂ ಮುನ್ನ ಕಾಣಿಸಿಕೊಂಡ ವೀರಗಾಸೆ ಕುಣಿತದ ವೇಷಗಳು ಎಲ್ಲರ ಗಮನ ಸೆಳೆದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The United Way, Bengaluru on Sunday organised a fund-raising marathon at Nandi Hills. Around 150 people took part in the Nandi Hillathon started at 7 am. The event was jointly inaugurated by former cricketer Javagal Srinath and Nicole Estelle Faria, Miss Earth India. They encouraged participants of the Nandi Hillathon.
Please Wait while comments are loading...