ತಮಿಳುನಾಡು ಬಂದ್, ಕರ್ನಾಟಕದ ವಿರುದ್ಧ ಜಾಥಾ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 16 : ಪ್ರತಿಪಕ್ಷ ನಾಯಕ ಮತ್ತು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರು ಕರ್ನಾಟಕದ ವಿರುದ್ಧ ಇಗ್ಮೋರ್‌ ರೈಲು ನಿಲ್ದಾಣದ ಬಳಿ ಬೃಹತ್ ಜಾಥಾ ನಡೆಸುತ್ತಿದ್ದಾರೆ.

* ತಮಿಳುನಾಡು ಬಂದ್ ಶಾಂತಿಯುತವಾಗಿ ನಡೆಯುತ್ತಿದೆ. ಚೆನ್ನೈನಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ತೆರೆದಿವೆ. ಕೆಲವು ಖಾಸಗಿ ಶಾಳೆಗಳು ರಜೆ ಘೋಷಣೆ ಮಾಡಿವೆ.

tamil nadu

ಹಿಂದಿನ ಸುದ್ದಿ : ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ಕರ್ನಾಟಕದಲ್ಲಿ ನಡೆದ ಪ್ರತಿಭಟನೆಯನ್ನು ಖಂಡಿಸಿ ಇಂದು ತಮಿಳುನಾಡು ಬಂದ್ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿಗೆ ಸಂಚಾರ ನಡೆಸುವ ಕರ್ನಾಟಕದ ವಾಹನಗಳನ್ನು ತಡೆಯಲಾಗಿದೆ.

ಅತ್ತಿಬೆಲೆ ಚೆಕ್‌ಪೋಸ್ಟ್ ಬಳಿ ಕರ್ನಾಟಕದ ವಾಹನಗಳನ್ನು ತಡೆಯುತ್ತಿರುವ ಪೊಲೀಸರು ತಮಿಳುನಾಡಿಗೆ ಪ್ರವೇಶಿಸದಂತೆ ಸೂಚನೆ ನೀಡುತ್ತಿದ್ದಾರೆ. ತಮಿಳುನಾಡು ಬಂದ್ ವೇಳೆ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಯಲಲಿತಾ ಅವರಿಗೆ ಪತ್ರ ಬರೆದಿದ್ದಾರೆ.[ತಮಿಳುನಾಡು ಬಂದ್ : ಕನ್ನಡಿಗರಿಗೆ ರಕ್ಷಣೆ ನೀಡಲು ಸಿದ್ದರಾಮಯ್ಯ ಪತ್ರ]

ಬಂದ್ ಹಿನ್ನಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಂದ್‌ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಸುಮಾರು 1.8 ಲಕ್ಷ ಪೊಲೀಸರನ್ನು ತಮಿಳುನಾಡಿನಲ್ಲಿ ನಿಯೋಜನೆ ಮಾಡಲಾಗಿದೆ.[ಕಾವೇರಿ ಗಲಭೆ : ಕರ್ನಾಟಕ, ತಮಿಳುನಾಡು ಕಿವಿ ಹಿಂಡಿದ ಕೋರ್ಟ್]

ಬಸ್ ನಿಲ್ದಾಣ, ಕನ್ನಡಿಗರು ಇರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪೊಲೀಸರ ಭದ್ರತೆಯಲ್ಲಿ ಸರ್ಕಾರಿ ಬಸ್ಸುಗಳನ್ನು ಓಡಿಸಲು ತೀರ್ಮಾನಿಸಲಾಗಿದೆ. ತಮಿಳುನಾಡು-ಕರ್ನಾಟಕ ಗಡಿಭಾಗದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ಎರಡೂ ರಾಜ್ಯಗಳ ವಾಹನಗಳನ್ನು ಗಡಿಯಲ್ಲಿ ತಡೆಯಲಾಗಿದೆ.[ಚೆನ್ನೈ: ಕನ್ನಡಿಗರಿಗೆ ಧಿಕ್ಕಾರ ಕೂಗಿ, ಬೆಂಕಿ ಹಚ್ಚಿಕೊಂಡ ಪ್ರಜೆ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka police step up security as Tamil Nadu observes bandh over Cauvery issue on September 16, 2016. Vehicle to TN have been stopped as a precautionary measure.
Please Wait while comments are loading...