ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಂಜಾನಿಯ ವಿದ್ಯಾರ್ಥಿನಿ ಮೇಲೆ ಹಲ್ಲೆ : ಪೊಲೀಸರ ಅಮಾನತಿಗೆ ತಡೆ

By ವಿಕಾಸ್ ನಂಜಪ್ಪ
|
Google Oneindia Kannada News

ಮಂಡ್ಯ, ಫೆಬ್ರವರಿ 09 : ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಎರಡು ವಾರಗಳ ತಡೆಯಾಜ್ಞೆ ನೀಡಿದೆ. ತಾಂಜಾನಿಯ ಮೂಲದ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಯಶವಂತಪುರ ವಿಭಾಗದ ಎಸಿಪಿ ಅಶೋಕ ನಾರಾಯಣ ಪಿಸೆ ಮತ್ತು ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರವೀಣ ಬಾಬು ಅವರ ಅಮಾನತು ಆದೇಶಕ್ಕೆ ಮಂಗಳವಾರ ಕೆಎಟಿ ಪೀಠ ತಡೆಯಾಜ್ಞೆ ನೀಡಿದೆ. ಅಮಾನತು ಆದೇಶವನ್ನು ಪ್ರಶ್ನಿಸಿ ಇಬ್ಬರು ಕೆಎಟಿ ಮೇಟ್ಟಿಲೇರಿದ್ದರು. [ವಿದ್ಯಾರ್ಥಿನಿ ಮೇಲೆ ಹಲ್ಲೆ : ಯಶವಂತಪುರ ಎಸಿಪಿ ಅಮಾನತು]

bengaluru police

ಯಶವಂತಪುರ ವಿಭಾಗದ ಎಸಿಪಿ ಅಶೋಕ ನಾರಾಯಣ ಪಿಸೆ ಅವರು ಘಟನೆ ನಡೆದ ದಿನ ನಾನು ಇನ್ವೆಸ್ಟ್ ಕರ್ನಾಟಕ 2016 ಸಮಾವೇಶದ ವಿಶೇಷ ಕರ್ತವ್ಯದ ಮೇಲಿದ್ದೆ. ಆದ್ದರಿಂದ, ಘಟನೆ ನಡೆದ ಸ್ಥಳಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ ಎಂದು ನ್ಯಾಯಮಂಡಳಿಗೆ ತಿಳಿಸಿದ್ದರು. ['ವಿದ್ಯಾರ್ಥಿನಿ ಮೇಲೆ ಜನಾಂಗೀಯ ದ್ವೇಷದಿಂದ ಹಲ್ಲೆ ನಡೆದಿಲ್ಲ']

ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರವೀಣ ಬಾಬು ಅವರು, ಘಟನೆ ಬಗ್ಗೆ ಯುವತಿ ದೂರು ನೀಡಲು ವಿಳಂಬ ಮಾಡಿದಳು. ದೂರು ಬಂದ ತಕ್ಷಣ ಕ್ರಮ ಕೈಗೊಂಡಿದ್ದೇವೆ, ಯಾವುದೇ ಕರ್ತವ್ಯ ಲೋಪವೆಸಗಿಲ್ಲ ಎಂದು ಹೇಳಿದ್ದರು. ಇಬ್ಬರ ವಾದ ಆಲಿಸಿದ ನ್ಯಾಯಮಂಡಳಿ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳ ಕಾಲ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ['ಬೆಂಗಳೂರು ನನಗೆ ಮನೆಯಾಗಿತ್ತು, ಈಗ ತತ್ತರಿಸಿದ್ದೇನೆ!']

ಜನವರಿ 31ರಂದು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಂಜಾನಿಯ ಮೂಲದ ವಿದ್ಯಾರ್ಥಿನಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರು. ಈ ಪ್ರಕರಣದ ರಾಷ್ಟ್ರಾದ್ಯಂತ ಸುದ್ದಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 9 ಆರೋಪಿಗಳನ್ನು ಬಂಧಿಸಲಾಗಿದೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ 6 ಪೊಲೀಸರನ್ನು ಅಮಾನತು ಮಾಡಲಾಗಿತ್ತು.

English summary
The Karnataka Administrative Tribunal (KAT) has stayed the suspension of the ACP of Yeshwanthpur and Inspector of Soladevanahalli. The ACP Ashok Narayan and inspector Praveen Babu were suspended following the attack on a Tanzanian student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X