ಸಿದ್ಧಗಂಗಾ ಶ್ರೀ ಡಿಸ್ ಜಾರ್ಜ್: ಮಠದತ್ತ ಪ್ರಯಾಣ ಬೆಳೆಸಿದ ಶ್ರೀ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 13:ಅನಾರೋಗ್ಯದ ಕಾರಣ ನಿನ್ನೆ (ಮೇ 12) ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಇಂದು ಆಸ್ಪತ್ರೆಯಿಂದ್ ಡಿಸ್ ಚಾರ್ಜ್ ಆಗಿದ್ದಾರೆ. ಈಗಾಗಲೇ ಮಠದತ್ತ ಪ್ರಯಾಣ ಬೆಳೆಸಿರುವ ಶ್ರೀಗಳ ದರ್ಶನಕ್ಕಾಗಿ ನೂರಾರು ಭಕ್ತರು ಮಠದ ಮುಂದೆ ಜಮಾಯಿಸಿದ್ದಾರೆ.

'ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ' ಎಂದು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಖುದ್ದು ಮಾಧ್ಯಮಗಳಿಗೆ ಹೇಳಿದ್ದಾರೆ. ಭಕ್ತರಿಗೂ ಇದೇ ಸಂದೇಶ ರವಾನಿಸಿದ್ದಾರೆ. ಆಸ್ಪತ್ರೆಗೆ ತಮ್ಮನ್ನು ನೋಡಲು ಬರುತ್ತಿರುವವರನ್ನೂ ಸ್ವಾಮೀಜಿ ಲವಲವಿಕೆಯಿಂದ ಮಾತನಾಡಿಸುತ್ತಿದ್ದಾರೆ.ಶ್ರೀಗಳ ಆರೋಗ್ಯದ ಕುರಿತು ಸುದ್ದಿಗೋಷ್ಠಿ ನಡೆಸಿದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯರು, ಶ್ರೀಗಳು ಗುಣಮುಖರಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ತಜ್ಞ ಡಾ.ರವೀಂದ್ರ, ಶ್ರೀಗಳಿಗೆ ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕು ಉಂಟಾಗಿತ್ತು, ಶ್ರೀಗಳ ಕತ್ತು ಬಾಗಿರುವುದರಿಂದ ಎಂಡೋಸ್ಕೋಪಿ ಚಿಕಿತ್ಸೆ ಸ್ವಲ್ಪ ಕ್ಲಿಷ್ಟಕರವಾಗಿತ್ತು ಎಂದರು.

ಬೆಳಗ್ಗೆಯಿಂದ ತಮ್ಮನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದ ಭಕ್ತರನ್ನು ಚಟುವಟಿಗೆಯಿಂದಲೇ ಮಾತನಾಡಿಸಿದ ಶ್ರೀಗಳು, ತಮ್ಮ ಆಪ್ತ ಶಿಷ್ಯರೊಂದಿಗೆ ಈಗಾಗಲೇ ತುಮಕೂರಿನ ಸಿದ್ಧಗಂಗಾ ಮಠದತ್ತ ಪ್ರಯಾಣ ಬೆಳೆಸಿದ್ದಾರೆ.

ಅನಾರೋಗ್ಯದ ಕಾರಣ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿರುವ ಶತಾಯುಷಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಇಂದು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ತಮಗೆ ಮಠದಲ್ಲೇ ಚಿಕಿತ್ಸೆ ನೀಡುವಂತೆ ಶ್ರೀಗಳು ವೈದ್ಯರ ಬಳಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು ಡಿಸ್ ಚಾರ್ಜ್ ಮಾಡಲಾಗುತ್ತಿದೆ. ಇಂದು ಸಿದ್ಧಗಂಗಾ ಶ್ರೀಗಳಿಗೆ ಮತ್ತೊಂದು ಸುತ್ತಿನ ರಕ್ತಪರೀಕ್ಷೆ ನಡೆಯಲಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. [ಸಿದ್ದಗಂಗಾಶ್ರೀಗಳಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ]

ಸಿದ್ಧಗಂಗಾ ಶ್ರೀ ಮಠಕ್ಕೆ ಮರಳುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಮಠದ ಆವರಣದಲ್ಲಿ ಈಗಾಗಲೇ ಭಕ್ತ ಸಾಗರವೇ ನೆರೆದಿದೆ.

ಮೇ 11 ಗುರುವಾರದಂದು ಜ್ವರದಿಂದ ಬಳಲುತ್ತಿದ್ದ ಶ್ರೀಗಳ ಆರೋಗ್ಯ ಕ್ರಮೇಣ ಸುಧಾರಿಸಿತ್ತಾದರೂ ಆತಂಕಗೊಂಡ ಭಕ್ತರು ಮೇ 12 ಶುಕ್ರವಾರದಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವಂತೆ ಒತ್ತಾಯಿಸಿದ್ದರು. ಭಕ್ತರ ಮನವಿಯ ಮೇರೆಗೆ ಶ್ರೀಗಳು ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sri Shivakumar Swamiji of Siddhaganga Math has discharged from BGS hospital Bengaluru today.I am completely well, Shri has sent a message to all his devotees.
Please Wait while comments are loading...