'ಸಿಯಾಚಿನ್' ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಪ್ರಮಾದ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 22: ಭಾರತ ಹಾಗೂ ಚೀನಾ ಗಡಿಭಾಗದ ಸಿಯಾಚಿನ್ ನೀರ್ಗಲ್ಲು ಬಗ್ಗೆ ತಪ್ಪಾಗಿ ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ. Sichuan ಎಂದು ಟ್ವೀಟ್ ಮಾಡುವ ಬದಲು Siachen from ಚೀನಾ ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದ ನಂತರ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಚೀನಾದ ಸಿಚುವಾನ್ ಎಂಬ ಪ್ರಾಂತ್ಯದಿಂದ ನಿಯೋಗದೊಡನೆ ಸಿಎಂ ಸಿದ್ದರಾಮಯ್ಯ ಬುಧವಾರ ಭೇಟಿಯಾಗಿದ್ದಾರೆ. ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಚೀನಾ ನಿಯೋಗದೊಂದಿಗೆ ಮಾತುಕತೆ ನಡೆಸಿದ್ದಾರೆ ನಂತರ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

Sichuan or Siachen? Karnataka CM can't decide

ಸಿಎಂ ಅವರ ಮಾಧ್ಯಮ ವಿಭಾಗದ ಸಿಬ್ಬಂದಿ ಸಭೆಯ ಚಿತ್ರಗಳನ್ನು ಮತ್ತು ಮಾಹಿತಿಯನ್ನು ಟ್ವಿಟ್ಟರ್ ಮತ್ತ ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಲಾಗಿತು.

ಆದರೆ 'ಸಿಚುವಾನ್ ಎಂದು ಬರೆಯುವ ಬದಲು ಸಿಯಾಚಿನ್ ಎಂದು ಬರೆದು ಪ್ರಮಾದ ಎಸಗಲಾಗಿತ್ತು. ಸಿಎಂ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಲಾಗಿದೆ.

Sichuan or Siachen? Karnataka CM can't decide

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ನಂತರ ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದ ಸಿಬ್ಬಂದಿ ಟ್ವಿಟ್​ನ್ನು ಅಳಿಸಿದ್ದಾರೆ, ಜತೆಗೆ ಫೇಸ್​ಬುಕ್​ನಲ್ಲಿ ಸಿಯಾಚಿನ್ ಪದವನ್ನು ತೆಗೆದು ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A simple typo error came as a major embarrassment to the chief minister of Karnataka after his official Twitter handle deemed Siachen instead of Sichuan as part of China. The post was, however, taken down after it attracted severe criticism.
Please Wait while comments are loading...