ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 2.93 ಲಕ್ಷ ಅನಧಿಕೃತ ಕಟ್ಟಡಗಳು: ಇದು ಸರಕಾರಿ ಲೆಕ್ಕ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ನವೆಂಬರ್ 3: 2.93 ಲಕ್ಷ. -ಇದು ಯಾವ ಸಂಖ್ಯೆ ಅಂತ ಹೇಳಿದರೆ, ನಿಮಗೆ ಅರೆ ಕ್ಷಣವಾದರೂ ಅಚ್ಚರಿ ಅಗೇ ಆಗುತ್ತೆ. ಏಕೆಂದರೆ, ಇದೇ ಕಣ್ರೀ ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಮನೆಗಳ ಸಂಖ್ಯೆ. ಈ ಅಂಕಿಯನ್ನು ಬುಧವಾರ ಹೈ ಕೋರ್ಟ್ ಗೆ ನೀಡಿರುವುದು ನಮ್ಮ ರಾಜ್ಯ ಸರಕಾರ. ಈಗಲಾದರೂ ಇದನ್ನು ನೀವು ನಂಬ್ತಿರೋ!?

ಸರಕಾರ ಹೇಳಿರುವ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 2.93 ಲಕ್ಷ (ಶೇ 17.49) ಅನಧಿಕೃತ ನಿರ್ಮಾಣಗಳಿವೆ. ಮಂಗಳೂರು ಅಭಿವೃದ್ಧಿ ನಾಗರಿಕ ವೇದಿಕೆ ಅಕ್ರಮ-ಸಕ್ರಮ ಯೋಜನೆ ಆರಂಭಿಸುವುದನ್ನು ಹಾಗೂ ಅನಧಿಕೃತ ನಿರ್ಮಾಣವನ್ನು ಸಕ್ರಮಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿದೆ. ಅದಕ್ಕೆ ಸರಕಾರ ಸಲ್ಲಿಸಿರುವ ಆಕ್ಷೇಪಣೆ ಭಾಗವಾಗಿ ಈ ಮಾಹಿತಿ ಹೊರಬಿದ್ದಿದೆ.[ಕಟ್ಟಡ ನಿರ್ಮಾಣ: ಬಿಬಿಬಿಎಂಪಿಯಿಂದ ಹೊಸ ಸೂಚನೆಗಳು]

Shocking: Bengaluru hosts 2.93 lakh illegal buildings

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 16.75 ಲಕ್ಷ ನಿವೇಶನ/ಕಟ್ಟಡಗಳಿವೆ. 'ಆ ಪೈಕಿ 13.82 ಲಕ್ಷ ನಿವೇಶನ/ ಆಸ್ತಿ ತೆರಿಗೆ ಸಂಗ್ರಹದ ವ್ಯಾಪ್ತಿಗೆ ಬರುತ್ತದೆ. ಅವುಗಳ ಮಾಲೀಕರು ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಇನ್ನು ಬಾಕಿಯಿರುವ 2.93 ಲಕ್ಷ ನಿವೇಶನ/ ಆಸ್ತಿ ಅನಧಿಕೃತವಾದದ್ದು ಎಂದು ಈ ಮಾಹಿತಿಯಲ್ಲಿ ತಿಳಿಸಲಾಗಿದೆ.

English summary
Believe it or not, Bengaluru is the home to around 2.93 lakh illegal constructions. The figure was presented to the Karnataka High Court by the state government on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X