ಬೆಂಗಳೂರಲ್ಲಿ ರೌಡಿಗಳ ಕಾಳಗ, ಪರ್ವೇಜ್‌ ಹತ್ಯೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 22 : ಬೆಂಗಳೂರಿನ ಶಿವಾಜಿನಗರದಲ್ಲಿ ರೌಡಿಗಳ ಕಾಳಗ ನಡೆದಿದ್ದು ರೌಡಿಶೀಟರ್ ಪರ್ವೇಜ್‌ ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ.

ಮಂಗಳವಾರ ರಾತ್ರಿ 8.55ರ ಸುಮಾರಿಗೆ ಎಚ್‌ಕೆಬಿ ದರ್ಗಾ ಬಳಿ ಈ ಘಟನೆ ನಡೆದಿದೆ. ಯಶವಂತಪುರ ನಿವಾಸಿ ಶಬ್ಬೀರ್‌ ಮತ್ತು ಆತನ ಸಹಚರರಾದ ಜಮೀರ್‌, ಜೆಮಶೆಡ್ ಹಾಗೂ ಇತರ ನಾಲ್ವರು ಪರ್ವೇಜ್‌ (50) ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. [ಪೊಲೀಸರಿಗೆ ವಾರದ ರಜೆ ಕಡ್ಡಾಯ: ಮೇಘರಿಖ್]

murder

ಪರ್ವೇಜ್‌ ಸ್ಥಳದಲ್ಲಿಯೇ ಮೃತಪಟ್ಟರೆ ಆತನ ಸಹಚರರಾದ ವಾಜೀದ್‌ (25) ಹಾಗೂ ಆಸೀಫ್‌ (25) ಗಾಯಗೊಂಡಿದ್ದಾರೆ. ತಡರಾತ್ರಿ ಕಾರ್ಯಾಚರಣೆ ನಡೆಸಿದ ಕೆ.ಜೆ.ಹಳ್ಳಿ ಪೊಲೀಸರು ಪರ್ವೇಜ್ ಹತ್ಯೆ ಮಾಡಿದ್ದ ಶಬ್ಬೀರ್ ಮತ್ತು ಬರ್ಕತ್ ಬಂಧಿಸಿದ್ದಾರೆ. [ಹೆಚ್ಚು ಅಂಕ ಕೊಡಲಿಲ್ಲ ಎಂದು ವಿಮಾನ ನಿಲ್ದಾಣಕ್ಕೆ ಬೆದರಿಕೆ ಹಾಕಿದರು]

ಘಟನೆ ವಿವರ : ಪರ್ವೇಜ್ ಡಿ.ಜೆ.ಹಳ್ಳಿಯ ನಿವಾಸಿ. ಮಂಗಳವಾರ ತನ್ನ ಸಹಚರರ ಜೊತೆ ಬ್ರಾಡ್‌ವೇ ರಸ್ತೆಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಶಬ್ಬೀರ್ ಮತ್ತು ಆತನ ನಡುವೆ ವಾಗ್ವಾದ ನಡೆದಿತ್ತು. ಆಗ ಇತರರು ಇಬ್ಬರನ್ನು ಸ್ಥಳ ಬಿಟ್ಟು ದೂರ ಹೋಗುವಂತೆ ಕಳುಹಿಸಿದ್ದರು. [ಬೆಂಗಳೂರು: ಸೀರೆ ಬಿಚ್ಚಿಟ್ಟು ಪರಾರಿಯಾದ ಲೇಡಿ ರೌಡಿ!]

ರಾತ್ರಿ 8.55ರ ಸುಮಾರಿಗೆ ಸಹಚರರ ಜೊತೆ ಬಂದ ಶಬ್ಬೀರ್ ಪರ್ವೇಜ್ ಮೇಲೆ ಗುಂಡಿನ ದಾಳಿ ನಡೆಸಿದ. ಆತನ ಸಹಚರರಾದ ವಾಜೀಬ್‌ ಹಾಗೂ ಆಸೀಫ್‌ ಮೇಲೆ ಮಚ್ಚುಗಳಿಂದ ಹಲ್ಲೆ ಮಾಡಿದ್ದರು. ಜನರ ಗುಂಪು ಸೇರುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದರು. ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀರಿಗೆ ಗುಂಡು ಹಾರಿಸಿದರು : ಶಬ್ಬೀರ್ ಮತ್ತು ಆತನ ಸಹಚರರು ನಗರ ಬಿಟ್ಟು ಹೋಗದಂತೆ ಪೊಲೀಸರು ನಾಕಾ ಬಂಧಿ ಹಾಕಿದ್ದರು. ತಡರಾತ್ರಿ ಹೆಚ್‌ಬಿಆರ್ ಲೇಔಟ್ ಅರಣ್ಯ ಪ್ರದೇಶದ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಶಬ್ಬೀರ್ ಮತ್ತು ಬರ್ಕತ್ ನನ್ನು ಕೆಜೆ ಹಳ್ಳಿ ಪೊಲೀಸರು ಅಡ್ಡಗಟ್ಟಿದ್ದರು.

ಆಗ ಮುಖ್ಯಪೇದೆ ಪದ್ಮನಾಭ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಬರ್ಕತ್ ಪರಾರಿಯಾಗಲು ಯತ್ನಿಸಿದ್ದ ಶಬ್ಬೀರ್ ಎಸ್‌ಐ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆಸಿದ. ಈ ಸಂದರ್ಭದಲ್ಲಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿ, ಅವರನ್ನು ಬಂಧಿಸಿದರು.

'ಇಬ್ಬರೂ ಆರೋಪಿಗಳನ್ನು ಅಂಬೇಡ್ಕರ್ ಆಸ್ಪತ್ರಗೆ ದಾಖಲು ಮಾಡಲಾಗಿದೆ. ತಲೆಮರೆಸಿಕೊಂಡಿರುವ 4 ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ' ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಹೇಳಿದ್ದಾರೆ.

ಪರ್ವೇಜ್ ಮತ್ತು ಶಬ್ಬೀರ್ ಇಬ್ಬರೂ ರೌಡಿ ಶೀಟರ್‌ಗಳಾಗಿದ್ದಾರೆ. ಪರ್ವೇಜ್‌ ವಿರುದ್ಧ 8, ಶಬ್ಬೀರ್ ಮೇಲೆ 4 ಪ್ರಕರಣಗಳಿವೆ. ಹಳೆಯ ದ್ವೇಷವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a gangwar rowdy sheeter Parvez (50) has been shot dead near HKP mosque at Shivajinagar, Bengaluru around 8.55 pm on June 21, 2016 night. Police arrested Shabeer who killed Parvez after Iftar party.
Please Wait while comments are loading...