ಜಂತಕಲ್ ಮೈನಿಂಗ್ ಕೇಸ್: ಎಚ್ ಡಿಕೆಗೆ ಜಾಮೀನು

Posted By:
Subscribe to Oneindia Kannada

ಬೆಂಗಳೂರು, ಮೇ 17: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ 53ನೇ ಸಿಟಿ ಸಿವಿಲ್ ನ್ಯಾಯಾಲಯ ಎಚ್ ಡಿಕೆ ಅವರಿಗೆ ಜಾಮೀನು ನೀಡಿತು.

ಜಾಮೀನಿಗಾಗಿ ಕುಮಾರಸ್ವಾಮಿಯವರು ಮೊದಲೇ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾದೀಶರಾದ ನ್ಯಾ. ವನಮಾಲಾ ಆನಂದರಾವ್ ಅವರು ಏಳು ದಿನಗಳ ಕಾಲಾವಧಿಯ ಷರತ್ತುಬದ್ಧ ಜಾಮೀನು ನೀಡಿದರು. ಅಲ್ಲದೆ, 5 ಲಕ್ಷ ರು. ಬಾಂಡ್ ಹಾಗೂ ಇಬ್ಬರು ಶ್ಯೂರಿಟಿಗಳನ್ನು ನೀಡುವಂತೆ ಸೂಚಿಸಿದರು. ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದರು.

Relief for HD Kumaraswami; Gets bail in Jantakal mining case

ಸದ್ಯದ ಮಟ್ಟಿಗೆ ಬಂಧನ ಭೀತಿಯಿಲ್ಲ: ಇದೇ ಪ್ರಕರಣದಲ್ಲಿ ಜಂತಕಲ್ ಮೈನಿಂಗ್ ಕಂಪನಿಯಿಂದ 10 ಲಕ್ಷ ರು. ಲಂಚ ಸ್ವೀಕಾರ ಮಾಡಿದ ಆರೋಪಿದ ಮೇರೆಗೆ ಹಿರಿಯ ಐಎಎಸ್ ಅಧಿಕಾರಿ ಗಂಗಾರಾಂ ಬಡೇರಿಯಾ ಅವರು ಮೂರು ದಿನಗಳ ಹಿಂದಷ್ಟೇ ಬಂಧನಕ್ಕೊಳಗಾಗಿದ್ದಾರೆ.

ಹಾಗಾಗಿ, ಮೇ 17ರಂದು ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಗೆ ಬರಲಿದ್ದರಿಂದ ಕುಮಾರ ಸ್ವಾಮಿಯವರ ಮೇಲೂ ಬಂಧನದ ತೂಗುಗತ್ತಿ ತೂಗುತ್ತಿತ್ತು. ಇದರಿಂದ, ಕುಮಾರ ಸ್ವಾಮಿಯವರು ಮೊದಲೇ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Chief minister of Karnataka HD Kumaraswami gets anticipatory bail in Janthakal mining case by session court of Bengaluru.
Please Wait while comments are loading...