ಕ್ಯಾಬಿನೆಟ್ ಗೆ ರಮ್ಯಾ ಸೇರಿದರೆ, ಬಂಡಾಯದ ಬೆಂಕಿಗೆ ತುಪ್ಪ ಸುರಿದಂತೆ ಸರ್ವಜ್ಞ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್ 23 : ಸಚಿವ ಸಂಪುಟದ ವಿಸ್ತರಣೆ ನಂತರವೂ ಸಿದ್ದರಾಮಯ್ಯ ಅವರ ಸಂಕಟದ ದಿನಗಳು ಕೊನೆಗೊಂಡಿಲ್ಲ. 14 ಜನ ಸಚಿವರನ್ನು ಕೈಬಿಟ್ಟು 13 ಜನರನ್ನು ಸಂಪುಟಕ್ಕೆ ಸೇರಿಸಿಕೊಂಡ ಸಿದ್ದರಾಮಯ್ಯ ಅವರಿಗೆ ಬಾಕಿ ಉಳಿದ ಒಂದು ಸ್ಥಾನವೆ ಮುಳುವಾಗಬಹುದು ಅಥವಾ ಕೈ ಹಿಡಿಯ ಬಹುದು. ಈ ನಡುವೆ ರಮ್ಯಾ ಅವರು ಕ್ಯಾಬಿನೆಟ್ ಸೇರ್ಪಡೆ ಸಾಧ್ಯವಿಲ್ಲ, ಸೇರಿದರೆ ಕಾಂಗ್ರೆಸ್ ನಿರ್ಮಾಣವಾಗಲಿದೆ ಎಂಬ ಸುದ್ದಿ ಬಂದಿದೆ.

ಒಂದೆಡೆ ಬಂಡಾಯ ಶಮನಕ್ಕೆ ಯತ್ನ ನಡೆದಿದೆ. ಇನ್ನೊಂದೆಡೆ ಬಾಕಿ ಉಳಿದ ಒಂದು ಸ್ಥಾನವನ್ನು ತುಂಬಲು ಲಾಬಿ ಸಾಗಿದೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ? ಎಂಬ ಕುತೂಹಲ ಎಲ್ಲರಲ್ಲೂ ಇದೆ. [ರಾಜಕೀಯ ಪತನ: ಅಂಬರೀಶ್ ಗೆ ಮುಳುವಾದ 5 ಅಂಶಗಳು]

Ramya's inclusion into Karnataka ministry will worsen crisis- Congress sources

ರಮ್ಯಾ ಅವರನ್ನು ಮಂಡ್ಯ ಕ್ಷೇತ್ರದ ಪ್ರತಿನಿಧಿಯಾಗಿ ಅಂಬರೀಶ್ ಅವರ ಬದಲಿಗೆ ಸೇರಿಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ. ಒಕ್ಕಲಿಗ ಸಮುದಾಯದ ಯುವ ನೇತಾರರಾಗಿ ರಮ್ಯಾ ಅವರನ್ನು ಬೆಳೆಸಬೇಕಿದೆ. ಹೀಗಾಗಿ ಅವರನ್ನು ಶೀಘ್ರದಲ್ಲೇ ಎಂ ಎಲ್ಸಿ ಸ್ಥಾನಕ್ಕೇರಿಸಿ, ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂಬ ಮಾತುಗಳು ಕೇಳಿ ಬಂದಿತ್ತು.[ಪಾಪ ರಮ್ಯಾಗೆ ಏನು ತಿಳಿದಿಲ್ಲ, ಅವಳನ್ನು ದೂಷಿಸಬೇಡಿ: ಅಂಬರೀಶ್]

ಆದರೆ, ಕಾಂಗ್ರೆಸ್ ಪಕ್ಷದ ಮೂಲಗಳು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದಂತೆ, 14ನೇ ಸ್ಥಾನವನ್ನು ಸದ್ಯಕ್ಕೆ ಖಾಲಿ ಇರಿಸಿಕೊಳ್ಳಲಾಗುವುದು, ರಮ್ಯಾ ಅವರ ಸೇರ್ಪಡೆ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಸದ್ಯಕ್ಕೆ ಬಂಡಾಯ ಶಮನಗೊಳಿಸುವತ್ತ ಗಮನಹರಿಸಲಾಗುತ್ತದೆ.[ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ರಮ್ಯಾ?]

ಒಂದು ವೇಳೆ ಭಿನ್ನಮತ ಉಲ್ಬಣಗೊಂಡು ಸರ್ಕಾರಕ್ಕೆ ಹಾನಿಯಾಗುವ ಸಾಧ್ಯತೆ ಕಂಡು ಬಂದರೆ, ಅತೃಪ್ತರಲ್ಲಿ ಒಬ್ಬರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There has been a lot of talk in the media that the 14th post may go to film actor and former MP, Ramya. However top Congress sources tell Oneindia that these are just rumours and the focus now is on defusing the crisis.
Please Wait while comments are loading...