ಬೆಂಗಳೂರಿನಿಂದ ರಾಹುಲ್ ಟ್ವಿಟ್ಟರ್ ಖಾತೆಗೆ ಕನ್ನ

By: ವಿಕಾಸ್ ನಂಜಪ್ಪ
Subscribe to Oneindia Kannada


ಬೆಂಗಳೂರು.ಡಿಸೆಂಬರ್ 2: ರಾಹುಲ್ ಟ್ವಿಟ್ಟರ್ ಖಾತೆಗೆ ಕನ್ನ ಹಾಕಿದವರು ಎಲ್ಲಿಯವರು ಎಂಬ ಪ್ರಶ್ನೆಗೆ ಸೈಬರ್ ಕ್ರೈಂ ಪೊಲೀಸರು ಉತ್ತರ ಹುಡುಕಿದ್ದು, ಕನ್ನ ಹಾಕಿರುವುದು ಬೆಂಗಳೂರಿನಲ್ಲಿ ಎಂಬ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಡಿಸೆಂಬರ್ ಒಂದರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಗೆ ಕನ್ನ ಹಾಕಲಾಗಿತ್ತು ಆದರೆ ಈ ಖಾತೆಯನ್ನು ಯಾರು ಓಪನ್ ಮಾಡಿದ್ದರು ಎಂಬುದು ತಿಳಿದು ಬಂದಿರಲಿಲ್ಲ.[ರಾಹುಲ್ ಟ್ವಿಟ್ಟರ್ ಖಾತೆಗೆ ಕನ್ನ: ಟ್ವಿಟ್ಟರ್ ನಲ್ಲಿ ಲೇವಡಿಯ ಪರಮಾವಧಿ!]

rahul

ಡಿಸೆಂಬರ್ 1ನೇ ತಾರೀಖು ಟ್ವಿಟ್ಟರ್ ಖಾತೆ ಕನ್ನ ಹಾಕಿರುವುದು ನಾರ್ವೆ, ಸ್ವಿಡನ್ ದೇಶಕ್ಕೆ ಸೇರಿದ ವ್ಯಕ್ತಿಗಳು ಎಂಬಂತೆ ರಾಹುಲ್ ಖಾತೆಗೆ ಕನ್ನ ಹಾಕಿದ್ದರು. ಅದಕ್ಕೆ ಮುಖ್ಯ ಕಾರಣ ಐಪಿ ಅಡ್ರಸ್ ಗಳು ನಾರ್ವೆ, ಸ್ವಿಡನ್ ದೇಶಕ್ಕೆ ಸೇರಿದಂತೆ ಸೂಚಿಸುತ್ತಿದ್ದವು.

ಇದರ ಬಗ್ಗೆ ತನಿಖೆಗೆ ಮುಂದಾಗಿರುವ ದೆಹಲಿ ಸೈಬರ್ ಕ್ರೈಂ ಪೊಲೀಸರು ಟ್ವಿಟ್ಟರ್ ಖಾತೆಯನ್ನು ಈಟಿ ಫಿಶಿಂಗ್ ಮಾದರಿಯಲ್ಲಿ ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಮಾಡಲು ಫಿಶಿಂಗ್ ತಂತ್ರಾಂಶವನ್ನು ಬಳಸಿದ್ದಾರೆ ಎಂದು ಸ್ಪಷ್ಟ ಪಡಿಸಿರುವ ಅವರು
ಕನ್ನ ಹಾಕಲಾಗಿರುವುದು ಕರ್ನಾಟಕದ ಬೆಂಗಳೂರಿನಿಂದ ಎಂದು ಹೇಳಿದ್ದಾರೆ. ಆದರೆ ಅವರು ಯಾರು ಎಲ್ಲಿಂದ ಮಾಡಿದರು ಎಂಬುದರ ಬಗ್ಗೆ ಮಾಹಿತಿ ತಿಳಿಯಬೇಕಿದೆ.

ಟ್ವಿಟ್ಟರ್ ಖಾತೆಗೆ ಕನ್ನ ಹಾಕಿದ್ದರ ವಿಚಾರವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಂಗ್ರೆಸ್ ಮೂಲಕ ದೂರು ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rahul twitter account is haked. The haked person is in bengluru. Who is he ? Don't now.
Please Wait while comments are loading...