ಅಡಿಗಾಸ್ ಹೋಟೆಲ್ ಫುಡ್ ನಲ್ಲಿ ಇಲಿ ಪಿಚ್ಕೆ ಸಿಕ್ತಂತೆ!

Posted By:
Subscribe to Oneindia Kannada

ಬೆಂಗಳೂರು, ಡಿ.29: ಕೆಂಟುಕಿಯ ಚಿಕನ್ ಅಂಗಡಿಯಲ್ಲಿ ಇಲಿ ಫ್ರೈ ಸಿಕ್ಕಿದ ಚಿತ್ರ ಫೇಸ್ ಬುಕ್ ನಲ್ಲಿ ಹರಿದಾಡಿದ್ದನ್ನು ನೋಡಿರಬಹುದು.ಈಗ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಜಾಲ ಹೊಂದಿರುವ ಅಡಿಗಾಸ್ ಸಮೂಹದ ರೆಸ್ಟೋರೆಂಟ್ ನಲ್ಲಿ ಪಡೆದ ಅಹಾರದಲ್ಲಿ ಸಿಗಬಾರದು ಸಿಕ್ಕಿದೆ.

2015ರಲ್ಲಿ ಆಹಾರ ಪದಾರ್ಥಗಳು, ಪ್ಯಾಕಿಂಗ್, ಆನ್ ಲೈನ್ ಫುಡ್ ಬಗ್ಗೆ ಭಾರಿ ಚರ್ಚೆ, ನಿರ್ಬಂಧ, ನಿಷೇಧಗಳಾಗಿವೆ. ಇತ್ತೀಚಿಗೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಕೂಡಾ ಫುಡ್ ಪ್ಯಾಕೇಟ್ ಗಳ ಮೇಲೆ ಎಕ್ಸ್ ಪೈರಿ ಡೇಟ್ ಸಾಕು ಎಂದು ನಿಬಂಧನೆ ಹೊರಡಿಸಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿನ ಆಹಾರದ ಬೆಲೆ ಗಗನಕ್ಕೇರುತ್ತಿದ್ದರೂ ಗ್ರಾಹಕರ ಸಂಖ್ಯೆಯಂತೂ ತಗ್ಗಿಲ್ಲ.

Popular restaurant contains rat shit inside food packet

ಪರಿಸ್ಥಿತಿ ಹೀಗಿರುವಾಗ ಬೆಂಗಳೂರಿನ ವಿಶೇಷ ತಿಂಡಿ 'ಬಿಸಿಬೇಳೆಬಾತ್' ತಿನ್ನಲು ಮುಂದಾದ ಮಹಿಳಾ ಪತ್ರಕರ್ತೆಗೆ ಆಘಾತವಾಗಿದೆ. ಕಮರ್ಷಿಯಲ್ ಸ್ಟ್ರೀಟ್ ಬಳಿ ಇರುವ 'ವಾಸುದೇವ್ ಅಡಿಗಾಸ್' ರೆಸ್ಟೋರೆಂಟ್ ನಲ್ಲಿ ಭಾನುವಾರ ಬಿಸಿಬೇಳೆ ಬಾತ್ ಪಾರ್ಸೆಲ್ ತೆಗೆದುಕೊಂಡು ಹೋದ ಅನುಷಾ ರವಿ ಅವರು ತಮಗಾದ ಆಘಾತದ ಬಗ್ಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ VASUDEV ADIGAS, RAT SHIT IN YOUR FOOD! ಎಂಬ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

VASUDEV ADIGAS, RAT SHIT IN YOUR FOOD! I would generally apologise for using a subject line like that but, I think...

Posted by Anusha Ravi on27 December 2015

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
2015 was the year when food items came under scanner when questions were raised on their safety measures. To complete the list, another shocking incident has been reported where the rat poop was found packed inside a packet of bisi-bele bath.
Please Wait while comments are loading...