ಪರಪ್ಪನ ಅಗ್ರಹಾರದಲ್ಲಿ ಚಿನ್ನಮ್ಮನಿಗೆ 'ರಾಜಾತಿಥ್ಯ' ಫೋಟೋಗಳಲ್ಲಿ ಬಹಿರಂಗ

Subscribe to Oneindia Kannada

ಬೆಂಗಳೂರು, ಜುಲೈ 17: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಚಿನ್ನಮ್ಮ ಅಲಿಯಾಸ್ ಶಶಿಕಲಾ ನಟರಾಜನ್ ವಿಐಪಿ ಆತಿಥ್ಯ ಪಡೆಯುತ್ತಿರುವುದು ಚಿತ್ರಗಳ ಮೂಲಕ ಬಹಿರಂಗವಾಗಿದೆ. ಈ ಮೂಲಕ ಜೈಲಿನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಶಶಿಕಲಾ ನಟರಾಜನ್ ಗೆ ಜೈಲಿನಲ್ಲಿ ಏನೇನು ಸಿಗುತ್ತಿದೆ?

ಜೈಲಿನ ಒಳಗಿನ ಮತ್ತು ಶಶಿಕಲಾ ಉಳಿದುಕೊಂಡಿರುವ ಸೆಲ್ ನ ಚಿತ್ರಗಳನ್ನು ನೋಡಿದರೆ ಮೇಲ್ನೋಟಕ್ಕೇ ಆಕೆ ವಿಶೇಷ ಸೌಲಭ್ಯ ಪಡೆದುಕೊಳ್ಳುತ್ತಿರುವುದು ಕಾಣಿಸುತ್ತದೆ. ಆಕೆಗಾಗಿ ಜೈಲಿನಲ್ಲಿ ನೀಡಲು ಸಾಧ್ಯವಿಲ್ಲದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆಕೆ ಮತ್ತು ಆಕೆಯ ಸಹಚರ ಖೈದಿ ಇಳವರಸಿ ಜೈಲಿನಲ್ಲೇ ರಾಜಾತಿಥ್ಯ ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

 ನಾಲ್ಕು ಕೊಠಡಿ ಶಶಿಕಲಾಗೆ ಮೀಸಲು

ನಾಲ್ಕು ಕೊಠಡಿ ಶಶಿಕಲಾಗೆ ಮೀಸಲು

ಕಾರಾಗೃಹದ ಮಹಿಳೆಯರ ಬ್ಯಾರಕ್‌ನಲ್ಲಿ ಶಶಿಕಲಾ ಉಳಿದುಕೊಂಡಿದ್ದು ಇಲ್ಲಿನ ನಾಲ್ಕು ಕೊಠಡಿಗಳನ್ನು ಅವರಿಗೆಂದೇ ಮೀಸಲಿಡಲಾಗಿದೆ. ಒಂದು ಕೊಠಡಿಯಲ್ಲಿ ಶಶಿಕಲಾ ಉಳಿದುಕೊಂಡರೆ ಇನ್ನೊಂದರಲ್ಲಿ ಅವರ ಜತೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಇಳವರಸಿ ಉಳಿದುಕೊಂಡಿದ್ದಾರೆ.

 ಅಡುಗೆ, ಸ್ನಾನಕ್ಕಾಗಿ ಪ್ರತ್ಯೇಕ ಕೋಣೆ

ಅಡುಗೆ, ಸ್ನಾನಕ್ಕಾಗಿ ಪ್ರತ್ಯೇಕ ಕೋಣೆ

ಇಬ್ಬರಿಗೂ ಅಡುಗೆ ಮಾಡಲು ಹಾಗೂ ಸ್ನಾನ ಮತ್ತು ಶೌಚಕ್ಕಾಗಿ ಪ್ರತ್ಯೇಕ ಕೊಠಡಿಗಳಿವೆ. ಈ ಕೊಠಡಿಗಳ ಸುತ್ತ ಮುತ್ತ ಯಾರೂ ಬರಬಾರದು ಎಂದು ಬ್ಯಾರಿಕೇಡ್ ಗಳನ್ನೂ ಹಾಕಿದ್ದಾರೆ ನಮ್ಮ ಹೆಮ್ಮೆಯ ಪೊಲೀಸರು!

ಲಂಚ, ಡ್ರಗ್ಸ್, ಲೈಂಗಿಕತೆ : ಏನಿದು ಪರಪ್ಪನ ಅಗ್ರಹಾರ ಜೈಲಿನ ಕಥೆ?

 ಹೊರಗಿನಿಂದ ಊಟ ಸರಬರಾಜು

ಹೊರಗಿನಿಂದ ಊಟ ಸರಬರಾಜು

ಇಳವರಸಿ ಹಾಗೂ ಶಶಿಕಲಾರಿಗೆ ಜೈಲೂಟ ಗಂಟಲಲ್ಲಿ ಇಳಿಯುತ್ತಿಲ್ಲವಂತೆ. ಈ ಕಾರಣಕ್ಕೆ ಹೊರಗಿನಿಂದ ಊಟ ತರಿಸಿಕೊಂಡು ಇಬ್ಬರೂ ತಿನ್ನುತ್ತಿದ್ದಾರೆ. ಊಟ ತರಲು ಬಳಸುವ ಡಬ್ಬಿಗಳು ಚಿತ್ರದಲ್ಲಿ ಕಾಣಿಸುತ್ತವೆ.

 ರೂಮಿನಲ್ಲಿದೆ ಕುಕ್ಕರ್

ರೂಮಿನಲ್ಲಿದೆ ಕುಕ್ಕರ್

ಶಶಿಕಲಾ ರೂಂ ನಲ್ಲಿ ಕುಕ್ಕರ್‌ ಹಾಗೂ ಸುಮಾರು ಐದು ಬಗೆಯ ಪಾತ್ರೆಗಳೂ ಇವೆ. ಕೊಠಡಿಯ ಬಾಗಿಲುಗಳಿಗೆ ಪರದೆಯನ್ನು ಇಳಿ ಬಿಡಲಾಗಿದೆ. ಪ್ರತ್ಯೇಕ ಹಾಸಿಗೆ, ಸೀರೆ ಸೇರಿದಂತೆ ಬಟ್ಟೆಗಳನ್ನಿಡಲು ಕಪಾಟು, ಕುರ್ಚಿ, ಪುಸ್ತಕಗಳು ಕೋಣೆಯಲ್ಲಿವೆ.

ಟ್ವಿಟ್ಟರ್ ಹಾಸ್ಯ: 'ಪನ್ನೀರ್' ಅಗಿಯೋಕಂತ ಶಶಿಕಲಾಗೆ ವಿಶೇಷ ಅಡುಗೆ ಮನೆ!

Sasikala Natarajan Trapped Under FERA Violation Case As Well | Oneindia Kannada
 ಉಳಿದವರಿಗಿಲ್ಲ ಈ 'ವಿಐಪಿ' ಸೌಲಭ್ಯ

ಉಳಿದವರಿಗಿಲ್ಲ ಈ 'ವಿಐಪಿ' ಸೌಲಭ್ಯ

ಇಲ್ಲಿ ಶಶಿಕಲಾ ಮತ್ತು ಇಳವರಸಿ ಒಬ್ಬರಿಗೊಂದೊಂದು ಕೋಣೆ ಹಂಚಿಕೊಂಡರೆ ಅತ್ತ ಉಳಿದವರು 5-6 ಜನ ಒಂದೇ ಕೋಣೆಯನ್ನು ಹಂಚಿಕೊಂಡು ದಿನ ಕಳೆಯುತ್ತಿದ್ದಾರೆ. ಅವರಿಗೆ ಶಶಿಕಲಾರಿಗೆ ನೀಡುತ್ತಿರುವ ಯಾವ ವಿಶೇಷ ಸೌಲಭ್ಯಗಳನ್ನೂ ನೀಡುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ADMK general secretary V K Sasikala enjoying all facilities within Parappana Agrahara Central Prison shows in leaked photos amidst charges raised by DIG Roopa.
Please Wait while comments are loading...