ಬೆಂಗಳೂರಿನ ಡಿಫೆನ್ಸ್ ಕಾಲೋನಿಯಲ್ಲಿ ಉದ್ಯಾನಕ್ಕೇ ರಕ್ಷಣೆ ಇಲ್ಲ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29: ಬಿಬಿಎಂಪಿಗೆ ಒತ್ತುವರಿ ತೆರವಿನ ಬಗ್ಗೆ ನೆನಪಾಗೋದು ಅಪರೂಪಕ್ಕೆ. ಅದರಲ್ಲೂ ಬಡವರ ಮನೆಗಳು ಅಂದರೆ ಬಲೇ ಅಚ್ಚುಮೆಚ್ಚು- ಇದು ಸಾರ್ವಜನಿಕರದೇ ಮಾತು. ಅದಕ್ಕೆ ಇಲ್ಲೊಂದು ಹೊಸ ಉದಾಹರಣೆ ಸಿಕ್ಕಿದೆ. ವಾರ್ಡ್ 80ರ ಹೊಯ್ಸಳನಗರ ವ್ಯಾಪ್ತಿಯ ಡಿಫೆನ್ಸ್ ಕಾಲೋನಿಯಲ್ಲಿ ಉದ್ಯಾನವನ್ನೇ ಅತಿಕ್ರಮಣ ಮಾಡಿ 15 ದಿನ ಕಳೆದಿದ್ದರೂ ತೆರವಿಗೆ ಈ ವರೆಗೂ ಮುಂದಾಗಿಲ್ಲ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಕ್ಷೆ ಪ್ರಕಾರ ಡಿಫೆನ್ಸ್ ಕಾಲೋನಿಯ ನಾಲ್ಕು ಹಾಗೂ ಆರನೇ ಮುಖ್ಯ ರಸ್ತೆ ಮಧ್ಯೆ ಇರುವ ಜಾಗ ಉದ್ಯಾನಕ್ಕೆ ಅಂತ ಮೀಸಲಾಗಿದೆ. ಈ ಬಗ್ಗೆ ಬಿಡಿಎ ವೆಬ್ ಸೈಟ್ ನಲ್ಲೂ ಅಧಿಕೃತವಾಗಿ ಮಾಹಿತಿ ಇದೆ. ಆದರೆ ನವೆಂಬರ್ 12ರಂದು ಬೆಳಗ್ಗೆ ಕೆಲವರು ಕಲ್ಲನ್ನು ನಿಲ್ಲಿಸಿ, ಬೇಲಿ ಸುತ್ತಿ ಒತ್ತುವರಿ ಮಾಡಿದ್ದಾರೆ.[1000 ಕೋಟಿ ಮೌಲ್ಯದ 189 ಎಕರೆ ಭೂಮಿ ಒತ್ತುವರಿ ತೆರವು]

Park encroachment in Bengaluru Defency colony

ಈ ಜಾಗದ ವಿಚಾರವಾಗಿ ಡಿಫೆನ್ಸ್ ಕಾಲೋನಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಹಾಗೂ ಬಿಡಿಎ ವಿರುದ್ಧ ಕೆಲವರು ಹೈ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡು ತೀರ್ಪು ಬರುವವರೆಗೂ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಕೂಡ ಸೂಚಿಸಿದೆ.

ಆದರೆ, ಹೀಗೆ ದಿಢೀರ್ ಎಂದು ಠಿಕಾಣಿ ಹಾಕಿದವರ ಬಳಿ ಯಾವುದೇ ದಾಖಲೆಗಳಿಲ್ಲ. ಜತೆಗೆ ಬಿಡಿಎನಿಂದಲೋ, ಬಿಬಿಎಂಪಿಯಿಂದಲೋ ಯಾವುದೇ ಅನುಮತಿಯನ್ನು ಪಡೆದಿಲ್ಲ. ಪ್ರಕರಣ ಕೋರ್ಟ್ ನಲ್ಲಿದ್ದು, ವಿಚಾರಣೆ ಹಂತದಲ್ಲೇ ಇರುವಾಗ ಯಾವ ಅನುಮತಿ ಪಡೆದು ಈ ಸ್ಥಳದಲ್ಲಿ ಬರಲು ಸಾಧ್ಯ?[ಒತ್ತುವರಿ ತೆರವು, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ಸಿಎಂ]

ಇತ್ತ ಕೋರ್ಟ್ ನಿಂದ ಹೌಸಿಂಗ್ ಸೊಸೈಟಿ ಅವರಿಗೆ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿದ ಆಜ್ಞೆ ಉಲ್ಲಂಘಿಸಿದಂತಾಗುತ್ತದೆ. ಇನ್ನು ಹಲವು ವರ್ಷಗಳಿಂದ ಇದೇ ಬಡಾವಣೆಯಲ್ಲಿ ಇರುವವರ ಪಾಲಿಗೆ ಈ ಸ್ಥಳ ಆಟದ ಮೈದಾನವಾಗಿತ್ತು. ಈ ಇಡೀ ಪ್ರಕರಣದ ಬಗ್ಗೆ ಸ್ಥಳೀಯರು ಕಾರ್ಪೋರೇಟರ್ ಗೆ ದೂರು ನೀಡಿದ್ದಾರೆ. ಜತೆಗೆ ಪೊಲೀಸ್, ಬಿಬಿಎಂಪಿಗೂ ಕಂಪ್ಲೇಂಟ್ ನೀಡಲಾಗಿದೆ. ಆದರೆ ನಯಾ ಪೈಸೆ ಪ್ರಯೋಜನವಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Park encroachment by unknown people in Defence colony, Bengaluru. Local residents gave complaint to corporator, BBMP and BDA. But till date there is no action taken by concern authority.
Please Wait while comments are loading...