ಶಫಾಕತ್ ಅಲಿ ಪೋಗ್ರಾಂ ನಿಲ್ಲಿಸುವಲ್ಲಿ ವಿಎಚ್ಪಿ ಸಫಲ

Posted By:
Subscribe to Oneindia Kannada

ಬೆಂಗಳೂರು, ಸೆ.28: ಪಾಕಿಸ್ತಾನದ ಗಾಯಕ ಶಫಾಕತ್ ಅಮಾನ್ ಅಲಿ ಖಾನ್ ಹಾಡುಗಾರಿಕೆಗೆ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳು ಬ್ರೇಕ್ ಹಾಕುವಲ್ಲಿ ಸಫಲವಾಗಿವೆ.

ಸೆಪ್ಟೆಂಬರ್ 30ರಂದು ನಗರದ ಫೋರಮ್ ಮಾಲ್ ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಆಯೋಜಕರು ರದ್ದುಗೊಳಿಸಿದ್ದಾರೆ ಎಂದು ದಕ್ಷಿಣ ವಲಯ ಪೊಲೀಸರು ತಿಳಿಸಿದ್ದಾರೆ.

Pak singer Shafqat Ali performance in Bengaluru Cancel : VHP

ಉರಿಯಲ್ಲಿ ಸೇನಾ ಕ್ಯಾಂಪಿನ ಮೇಲೆ ಉಗ್ರರ ದಾಳಿಯಾಗಿ ಭಾರತೀಯ ಸೈನಿಕರು ಹುತಾತ್ಮರಾದ ಕಹಿ ಘಟನೆ ನಡೆದ ಬೆನ್ನಲ್ಲೆ ವಿಶ್ವ ಹಿಂದೂ ಪರಿಷತ್, ಭಜರಂಗ ದಳದವರು ಪಾಕಿಸ್ತಾನಿ ಗಾಯಕನ ಕಾರ್ಯಕ್ರಮ ರದ್ದುಪಡಿಸುವಂತೆ ಕೋರಿ ಆಯೋಜಕರಿಗೆ ಪತ್ರ ಬರೆದಿದ್ದರು. ನಂತರ ಪೊಲೀಸರು ಈ ಬಗ್ಗೆ ದೂರು ನೀಡಿದ್ದರು.

ಇದಾದ ಬಳಿಕ ಸೆಪ್ಟೆಂಬರ್ 28ರಂದು ಕಾರ್ಯಕ್ರಮದ ಆಯೋಜಕರಾದ ರೇಡಿಯೋ ಮಿರ್ಚಿಗೆ ನಿರ್ದೇಶನ ನೀಡಿದ್ದ ಆಡುಗೋಡಿ ಪೊಲೀಸರು, ಕಾರ್ಯಕ್ರಮ ರದ್ದುಗೊಳಿಸುವಂತೆ ಸೂಚಿಸಿದ್ದಾರೆ ಎಂದು ಡಿಸಿಪಿ (ದಕ್ಷಿಣ ವಲಯ) ಶರಣಪ್ಪ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bengaluru policesaid that no event involving any Pakistani singer is being conducted on September 30th. Radio Mirchi had cancelled such plans and confirmed the same to us the Inspector of the Adugodi Police station in Bengaluru clarified.
Please Wait while comments are loading...