ಬೆಂಗಳೂರು: ಓಲಾ ಕ್ಯಾಬ್ ಡ್ರೈವರ್ ನಿಂದ ಯುವತಿಗೆ ಲೈಂಗಿಕ ಕಿರುಕುಳ

Posted By:
Subscribe to Oneindia Kannada
   ಓಲಾ ಕ್ಯಾಬ್ ಡ್ರೈವರ್ ನಿಂದ ಬೆಂಗಳೂರಿನ ಯುವತಿಗೆ ಕಿರುಕುಳ | Oneindia Kannada

   ಬೆಂಗಳೂರು, ಡಿಸೆಂಬರ್ 6: ಮೊಬೈಲ್ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆ ಮತ್ತೆ ಕೆಟ್ಟ ವಿಷಯಕ್ಕೆ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಚಾಲಕನೊಬ್ಬ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

   ಯುವತಿ ಕಿರುಕುಳ ಆರೋಪ, ಉಬರ್ ಚಾಲಕ ಅಮಾನತು

   ಓಲಾ ಕ್ಯಾಬ್ ಚಾಲಕ ರಾಜಶೇಖರ್ ರೆಡ್ಡಿ ಎನ್ನುವಾತ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ನೊಂದ ಯುವತಿ ಓಲಾ ಕ್ಯಾಬ್ ಕಂಪನಿಗೆ ಚಾಲಕ ರಾಜಶೇಖರ್ ರೆಡ್ಡಿ ವಿರುದ್ಧ ದೂರು ನೀಡಿದ್ದಾಳೆ.

   Ola cab driver allegedly sexually harassed a woman in Bengaluru

   ಸೋಮವಾರ ಇಂದಿರಾನಗರದಿಂದ ಕೋರಮಂಗಲಕ್ಕೆ ತೆರಳುತ್ತಿದ್ದ ವೇಳೆ ಓಲಾ ಚಾಲಕ ರಾಜಶೇಖರ್ ರೆಡ್ಡಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

   ಅಷ್ಟೇ ಅಲ್ಲದೇ ಕಾರ್ ಅನ್ನು ರಸ್ತೆ ಪಕ್ಕಕ್ಕೆ ಹಾಕಿ ಯುವತಿಯ ಮೈ ಕೈ ಮುಟ್ಟಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಕಾರ್ ನ ಕಿಟಕಿ ಇಳಿಸಿ ಕೂಗಿಕೊಂಡಿದ್ದಾಳೆ. ಭಯಗೊಂಡ ರಾಜಶೇಖರ್ ರೆಡ್ಡಿ ಯುವತಿಯನ್ನು ರಸ್ತೆ ಪಕ್ಕದಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದರಿಂದ ನೊಂದ ಯುವತಿ ಓಲಾ ಕ್ಯಾಬ್ ಕಂಪನಿಗೆ ರಾಜಶೇಖರ್ ರೆಡ್ಡಿ ವಿರುದ್ಧ ದೂರು ನೀಡಿದ್ದಾಳೆ.

   ಈ ಬಗ್ಗೆ ಸಂತ್ರಸ್ತೆ ಯುವತಿ ಒನ್ ಇಂಡಿಯಾಕ್ಕೆ ಪ್ರತಿಕ್ರಿಯಿಸಿದ್ದು, ಬಾನುವಾರ ರಾತ್ರಿ 10ರ ಸಮಯದಲ್ಲಿ ಇಂದಿರಾನಗರದ ಬಳಿ ಕ್ಯಾಬ್ ಚಾಲಕ ಕಾರನ್ನು ನಿಲ್ಲಿಸಿ ನನ್ನ ಮೈ ಮುಟ್ಟಲು ಮುಂದಾದಗ ಆತನ್ನು ತಳ್ಳಿದ್ದೇನೆ. ಅಷ್ಟಕ್ಕೆ ಸುಮ್ಮನಾಗದೆ ಆತ ಕಾರಿನ ಗ್ಲಾಸ್ ಗಳನ್ನು ಮುಚ್ಚಿ ಮತ್ತೆ ನನ್ನ ಮೇಲೆ ಎರಗಲು ಬಂದಿದ್ದ. ಈ ವೇಳೆ ನಾನು ಕೂಗಿ ಕಾರಿನಿಂದ ಇಳಿದು ಓಡಿ ಹೋದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

   ಭಾನವಾರ ಘಟನೆ ನಡೆದಿದ್ದು, ಸೋಮವಾರವು ಸಹ ನನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದಾನೆ. ಈ ವೇಳೆ ವಾರ್ನಿಂಗ್ ಸಹ ಕೊಟ್ಟಿದ್ದೇನೆ. ಹಾಗೂ ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿ ಅವರಿಂದಲೂ ವಾರ್ನಿಂಗ್ ಕೊಡಿಸಿದ್ದೇನೆ. ಘಟನೆ ಬಗ್ಗೆ ಚಾಲಕನ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ ಎಂದು ಯುವತಿ ತಿಳಿಸಿದ್ದಾಳೆ.

   ಇಂತಹ ಪ್ರಕರಣಗಳ ಹೆಚ್ಚಾಗುತ್ತಿದ್ದರಿಂದ ಕಂಪನಿಗಳು ಮಹಿಳೆಯರಿಗೆ ಇನ್ನೂ ಹೆಚ್ಚಿನ ಭದ್ರತೆಗಳನ್ನು ಒದಗಿಸಬೇಕು ಎಂದು ಯುವತಿ ಮನವಿ ಮಾಡಿಕೊಂಡಿದ್ದಾಳೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Ola cab driver allegedly harassed a woman and tried holding her hostage inside the cab by activating child lock in Bengaluru. The victim woman Madiwala police station and OLA Cab against cab driver Rajashekar Reddy.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ